ಕಾಂಗ್ರೆಸ್ ಸರ್ಕಾರದ ‘ಗೃಹಲಕ್ಷ್ಮೀ’ ಗ್ಯಾರಂಟಿಗೆ ಅರ್ಜಿ ಸಲ್ಲಿಕೆ ವಿಳಂಬ
ಅರ್ಜಿ ಸಲ್ಲಿಕೆ ವಿಳಂಬದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ..!
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಆರ್. ಅಶೋಕ್ ಸವಾಲ್
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಿಎಂ ಸಿದ್ದರಾಮಯ್ಯ ಸರ್ಕಾರ ಭಾರೀ ಸರ್ಕಸ್ ಮಾಡುತ್ತಿದೆ. ಕೆಲವು ಗ್ಯಾರಂಟಿಗ ಜಾರಿ ನಾಳೆ, ನಾಡಿದ್ದು ಎನ್ನುತ್ತ ಮುಂದೂಡುತ್ತಲೇ ಇದ್ದಾರೆ. ಶಕ್ತಿ ಯೋಜನೆಯನ್ನು ಸರಾಗವಾಗಿ ಜಾರಿ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಗೃಹಲಕ್ಷ್ಮೀಯಿಂದ ಮಾತ್ರ ಭಾರೀ ತಲೆನೋವು ಎದುರಾಗಿದೆ. ಅರ್ಜಿ ಸಲ್ಲಿಕೆ ಮತ್ತಷ್ಟು ವಿಳಂಬವಾಗಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡುತ್ತಲೇ ಇದೆ. ಆದರೆ, ಬಿಜೆಪಿ ನಾಯಕರು ಮಾತ್ರ ಗ್ಯಾರಂಟಿ ಅಸ್ತ್ರವನ್ನೇ ಹಿಡಿದು ರಾಜಕೀಯ ಮಾಡುತ್ತಿದ್ದಾರೆ.
‘ಗೃಹಲಕ್ಷ್ಮೀ’ ಗ್ಯಾರಂಟಿಗೆ ಅರ್ಜಿ ಸಲ್ಲಿಕೆ ವಿಳಂಬ!
ಕಾಂಗ್ರೆಸ್ ನಾಯಕರು ಹೇಳಿದಂತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇವತ್ತಿನಿಂದ ಆರಂಭವಾಗಬೇಕಿತ್ತು. ಆದ್ರೆ, ಕೆಲವು ತಾಂತ್ರಿಕ ಕಾರಣಗಳನ್ನ ನೀಡಿ ಸರ್ಕಾರ ನಾಲ್ಕೈದು ದಿನ ಮುಂದೂಡಿಕೆ ಮಾಡಿದೆ. ಇದೀಗ ಮತ್ತೆ ಗೃಹಲಕ್ಷ್ಮೀ ಬಗ್ಗೆ ಸರ್ಕಾರ ಸ್ಪಷ್ಟೀಕರಣ ಕೊಟ್ಟಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರೋ ಡಿಸಿಎಂ ಡಿ.ಕೆ ಶಿವಕುಮಾರ್, ಆನ್‌ಲೈನ್ ಮೂಲಕ ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
‘ಗೃಹಲಕ್ಷ್ಮೀ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ಕ್ಲಾರಿಟಿ’
ಗೃಹಲಕ್ಷ್ಮೀ ಯೋಜನೆ ಜಾರಿ ಯಾವಾಗ? ಯಾವಾಗಿನಿಂದ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು. ಹೀಗೆ ನಾನಾ ಗೊಂದಲಗಳು ಶುರುವಾಗಿವೆ. ಈ ಎಲ್ಲಾ ಗೊಂದಲಗಳಿಗೆ ಮದ್ದರೆಯುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯತ್ನಿಸಿದ್ದಾರೆ. ಆದಷ್ಟು ಶೀಘ್ರವೇ ಗೃಹ ಲಕ್ಷ್ಮೀ ಯೋಜನೆಯ ಬಗ್ಗೆ ಕ್ಲಾರಿಟಿ ಸಿಗುತ್ತೆ ಎಂಬ ಗ್ಯಾರಂಟಿ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಸರ್ಕಾರಕ್ಕೆ ‘ಸಾಮ್ರಾಟ್’ ಸವಾಲು
ಕಾಂಗ್ರೆಸ್ ಸಚಿವರೇನೋ ಆದಷ್ಟು ಶೀಘ್ರವೇ ಗ್ಯಾರಂಟಿಗಳು ಜಾರಿ ಅಂತಿದ್ದಾರೆ. ಆದ್ರೆ, ಗ್ಯಾರಂಟಿಗಳ ಗೊಂದಲವನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡಿದೆ. ನಿಮಗೆ ಧಮ್ಮು-ತಾಕತ್ತು ಇದ್ರೆ ಶೀಘ್ರವೇ ಐದು ಗ್ಯಾರಂಟಿಗಳನ್ನ ಜಾರಿ ಮಾಡಿ ಎಂದು ಮಾಜಿ ಸಚಿವ ಆರ್. ಅಶೋಕ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಒಟ್ಟಾರೆ, ಗ್ಯಾರಂಟಿಗಳ ಅನುಷ್ಠಾನಕ್ಕೆ ಸಿದ್ದರಾಮಯ್ಯ ಸರ್ಕಾರ ಹೆಣಗಾಡುತ್ತಿದೆ. ಇದ್ರ ಮಧ್ಯೆ ಕೆಲವು ತಾಂತ್ರಿಕ ಸಮಸ್ಯೆಗಳು, ಸಿಬ್ಬಂದಿ ಕೊರತೆ, ಹೊಂದಾಣಿಕೆ ಸಮಸ್ಯೆಯಿಂದ ಗ್ಯಾರಂಟಿ ಜಾರಿ ವಿಳಂಬವಾಗ್ತಿದೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಯಾವಾಗ ಗೃಹಲಕ್ಷ್ಮೀ ಮನೆ ಸೇರ್ತಾಳೆ ಅಂತಾ ಮಹಿಳೆಯರು ಕಾದು ಕೂತಿರೋದಂತೂ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ