/newsfirstlive-kannada/media/post_attachments/wp-content/uploads/2024/12/SONNY-LEONE-2-Copy.jpg)
ಬಾಲಿವುಡ್​ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಮೋಹನಾಂಗಿ ತನ್ನ ಸೌಂದರ್ಯದಿಂದ ಅಭಿಮಾನಿಗಳ ಹೃದಯದಲ್ಲಿದ್ದಾಳೆ. ಅವರು ಕಾರ್ಯಕ್ರಮ ಒಂದಕ್ಕೆ ಬರ್ತಾರೆ ಅಂದರೆ ಅಲ್ಲಿ ಅಭಿಮಾನಿಗಳ ಸಾಗರ ನಿಂತಿರುತ್ತೆ. ಇತ್ತೀಚೆಗೆ ಸನ್ನಿ ಲಿಯೋನ್​ಗೆ ಹಾಗೂ ಆಕೆಯ ಅಭಿಮಾನಿಗಳಿಗೆ ಹೈದ್ರಾಬಾದ್ ಪೊಲೀಸರು ಬಿಗ್​​ ಶಾಕ್ ನೀಡಿದ್ದಾರೆ.
ಅಸಲಿಗೆ ಆಗಿದ್ದೇನು..?
ನವೆಂಬರ್ 30 ರಂದು ಹೈದರಾಬಾದ್​ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಜುಬಿಲಿ ಹಿಲ್ಸ್‌ನಲ್ಲಿರುವ ಇಲ್ಯೂಷನ್ ಪಬ್‌ನಲ್ಲಿ ಬಾಲಿವುಡ್ ಸನ್ನಿ ಲಿಯೋನ್ ‘ಡಿಜೆ ನೈಟ್’ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಅನೇಕರು ಕಾರ್ಯಕ್ರಮ ವೀಕ್ಷಿಸಲು ಬುಕ್ ಮೈ ಶೋ ಮೂಲಕ ಟಿಕೆಟ್ ಖರೀದಿಸಿದ್ದರು. ಡಿಜೆ ನೈಟ್ ರಾತ್ರಿ 11 ರಿಂದ 12.30 ರವರೆಗೆ ನಡೆದಿದ್ದು, ಅಪಾರ ಜನಸ್ತೋಮ ಸೇರಿತ್ತು. ಈ ಕಾರ್ಯಕ್ರಮ ನಡೆಯದಂತೆ ರಾತ್ರಿ 8 ಗಂಟೆಯಿಂದಲೇ 100ಕ್ಕೂ ಹೆಚ್ಚು ಪೊಲೀಸರನ್ನು ಪಬ್‌ನ ಹೊರಗೆ ನಿಯೋಜಿಸಲಾಗಿತ್ತು.
ಇದನ್ನೂ ಓದಿ:ಗಾಂಧಿ ಕುಟುಂಬಕ್ಕೆ ಲಾಯಲ್ ಆಗಿದ್ದೇನೆ, ಒಂದು ದಿನ ಫಲ ಸಿಗಲಿದೆ -CM ಆಗುವ ಆಸೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್
ಅಭಿಮಾನಿಗಳು ಸನ್ನಿ ಲಿಯೋನ್ ದರ್ಶನ ಪಡೆಯಲು ಆಗಮಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಸನ್ನಿ ಲಿಯೋನ್ ಬರೋದು ಕ್ಯಾನ್ಸಲ್ ಆಗಿದೆ. ಅದಕ್ಕೆ ಸಂಘಟಕರು ಸನ್ನಿ ಲಿಯೋನ್​ಗೆ ಅನಾರೋಗ್ಯ ಆಗಿದೆ. ಹೀಗಾಗಿ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು. ಇದರಿಂದ ಪ್ರೇಕ್ಷಕರು ನಿರಾಸೆಗೊಂಡರು. ಇದೀಗ ಕಾರ್ಯಕ್ರಮದ ನಿಜವಾದ ರದ್ದತಿಗೆ ಕಾರಣ ತಿಳಿದುಬಂದಿದೆ. ಪೊಲೀಸರಿಂದ ಅನುಮತಿ ಸಿಗದ ಕಾರಣ ಕಾರ್ಯಕ್ರಮ ರದ್ದಾಗಿದೆ ಎಂದು ಇದೀಗ ತಿಳಿದುಬಂದಿದೆ.
ಇದನ್ನೂ ಓದಿ:ಪಿವಿ ಸಿಂಧು ಮದ್ವೆ ಆಗ್ತಿರುವ ಹುಡುಗ ಯಾರು? ಇವರಿಗೆ ಇದೆ IPL ತಂಡದಲ್ಲಿ ಕೆಲಸ ಮಾಡಿದ ಅನುಭವ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us