newsfirstkannada.com

ನಿಮಗಿದು ಗೊತ್ತಾ..! ಕೊಹ್ಲಿಯನ್ನು ಯಾಕೆ ‘ಚೀಕು’ ಎಂದು ಕರೆಯುತ್ತಾರೆ.. ಈ ಫೋಟೋ ನೋಡಿದ್ರೆ ಗೊತ್ತಾಗಬಹುದು..!

Share :

09-08-2023

  ಕೊಹ್ಲಿಗೆ ಚೀಕು ಎಂದು ಹೆಸರಿಟ್ಟಿದ್ದು ಯಾರು?

  ಕೊಹ್ಲಿಗೆ ಸಂಬಂಧಿಸಿದ ಸಖತ್ ಸ್ಟೋರಿ ಇದು

  ಕೊಹ್ಲಿಯನ್ನು ಯಾವೆಲ್ಲ ಹೆಸರಿನಿಂದ ಕರೀತಾರೆ?

ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ ವಿರಾಟ್​​ ಕೊಹ್ಲಿಯ ಹತ್ತು ಹಲವು ಹೆಸರುಗಳ ಕ್ರಿಕೆಟ್​ ಲೋಕದಲ್ಲಿ ಚಾಲ್ತಿಯಲ್ಲಿವೆ. ಆದ್ರೆ ಉಳಿದೆಲ್ಲಾ ಹೆಸರಿಗಿಂತ ಚೀಕು ಅನ್ನೋ ಹೆಸ್ರು ಸಿಕ್ಕಾಪಟ್ಟೆ ಫೇಮಸ್​. ಈ ಹೆಸರನ್ನ ಕೊಹ್ಲಿಗೆ ಇಟ್ಟಿದ್ಯಾರು ಗೊತ್ತಾ..? ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಕಿಂಗ್​ ಕೊಹ್ಲಿ, ರನ್ ​ಮಷೀನ್​, ಚೇಸ್​ ಮಾಸ್ಟರ್​.. ಒಂದಾ..? ಎರಡಾ..? ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿಗೆ ಹಲವು ಹೆಸರುಗಳಿವೆ. ಇದ್ರಲ್ಲಿ ಚೀಕು ಅನ್ನೋದೂ ಒಂದು. ಈ ಹೆಸರು ಕೊಹ್ಲಿಗೆ ಬಂದಿದ್ರ ಹಿಂದೆ ಒಂದು ಇಂಟರೆಸ್ಟಿಂಗ್​ ಕಥೆಯಿದೆ.

ಅದು ಕೊಹ್ಲಿ ಕ್ರಿಕೆಟ್​ ಕರಿಯರ್​ನ ಆರಂಭದ ದಿನಗಳು. ಡೆಲ್ಲಿ ರಣಜಿ ತಂಡಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಕೊಹ್ಲಿ ಸಿಕ್ಕಾಪಟ್ಟೆ ಛಬ್ಬಿ ಛಬ್ಬಿಯಾಗಿದ್ರು. ದೊಡ್ಡದಾದ ಕಿವಿಗಳನ್ನ ಹೊಂದಿದ್ದ ಕೊಹ್ಲಿ ಸ್ಮಾರ್ಟ್​ ಆಗಿ ಕಾಣಲು ಶಾರ್ಟ್​ ಹೇರ್​ಕಟ್ ಮಾಡಿಸಿದ್ರಂತೆ. ಥೇಟ್​ ಚಂಪಕ ಕಾಮಿಕ್​ ಬುಕ್​​ನಲ್ಲಿ ಬರ್ತಾ ಇದ್ದ ಮೊಲದ ತರವೇ ಕೊಹ್ಲಿ ಕಾಣ್ತಿದ್ರಂತೆ. ಇದನ್ನು ನೋಡಿ ಅಂದಿನ ಡೆಲ್ಲಿ ರಣಜಿ ತಂಡದ ಕೋಚ್​ ಅಜಿತ್​ ಚೌಧರಿ ಕೊಹ್ಲಿಗೆ ಚೀಕು ಎಂದು ಹೆಸರಿಟ್ಟರಂತೆ.

ಅಜಿತ್​ ಚೌಧರಿ ಹೆಸರಿಟ್ಟಿದ್ದಷ್ಟೇ.. ಈ ಹೆಸರು ಹೆಚ್ಚು ಫೇಮಸ್​ ಆಗಿದ್ದು ಮಾತ್ರ ಎಮ್​.ಎಸ್​ ಧೋನಿಯಿಂದ.. ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾ ನಾಯಕನಾಗಿದ್ದ ವೇಳೆ ಕೀಪಿಂಗ್​ ಜವಾಬ್ದಾರಿ ನಿಭಾಯಿಸ್ತಿದ್ದ ಎಮ್​.ಎಸ್​ ಧೋನಿ ಕೊಹ್ಲಿಯನ್ನು ಚೀಕು ಎಂದೇ ಕರೀತಿದ್ದರು. ಯಾವಾಗ ಸ್ಟಂಪ್​ ಮೈಕ್​ನಲ್ಲಿ ಈ ಮಾತು ಮಾರ್ದನಿಸಲು ​ ಸ್ಟಾರ್ಟ್​​ ಆಯ್ತೋ, ಆಗ ಈ ನೇಮ್​ ಸಿಕ್ಕಾಪಟ್ಟೆ ಫೇಮಸ್​ ಆಯ್ತು. ಇಂದಿಗೂ ಧೋನಿ, ಅಂದಿನ ಡೆಲ್ಲಿ ತಂಡದ ಟೀಮ್​ಮೆಟ್​ ಇಶಾಂತ್​ ಶರ್ಮಾ ಸೇರಿದಂತೆ ಹಲವರು ಕೊಹ್ಲಿಯನ್ನ ಚೀಕು ಎಂದೇ ಕರೆಯುತ್ತಾರೆ. ಹಾಗಂತ, ಮೈದಾನಕ್ಕೆ ಮ್ಯಾಚ್​ ನೋಡೋಕೆ ಹೋದಾಗ ಫ್ಯಾನ್ಸ್​ ಮಾತ್ರ ಅಪ್ಪಿತಪ್ಪಿಯೂ ಕೊಹ್ಲಿಯನ್ನ ಚೀಕು ಎಂದು ಕರೀಬೇಡಿ. ಯಾಕಂದ್ರೆ, ಚೀಕು ಎಂದು ಬೇರೆ ಯಾರಾದ್ರೂ ಕರೆದ್ರೆ ಕೊಹ್ಲಿಗೆ ಕೆಂಡದಂಥ ಕೋಪ ಬರುತ್ತಂತೆ.

ವಿಶೇಷ ಸೂಚನೆ: ಕ್ರಿಕೆಟ್​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನಿಮಗಿದು ಗೊತ್ತಾ..! ಕೊಹ್ಲಿಯನ್ನು ಯಾಕೆ ‘ಚೀಕು’ ಎಂದು ಕರೆಯುತ್ತಾರೆ.. ಈ ಫೋಟೋ ನೋಡಿದ್ರೆ ಗೊತ್ತಾಗಬಹುದು..!

https://newsfirstlive.com/wp-content/uploads/2023/08/KOHLI-10.jpg

Load More