newsfirstkannada.com

ವಿರಾಟ್ ಕೊಹ್ಲಿ ಯಾಕೆ ಇಂಪಾರ್ಟೆಂಟ್.. ಗಂಗೂಲಿ, ಮಲಿಕ್ ಸೇರಿ ಕ್ರಿಕೆಟ್ ತಜ್ಞರ ಗುಣಗಾನ ಇಲ್ಲಿದೆ

Share :

29-10-2023

    ತಂಡದ ಅಗತ್ಯಕ್ಕೆ ತಕ್ಕಂತೆ ಆಡ್ತಿದ್ದಾರೆ ಕಿಂಗ್ ಕೊಹ್ಲಿ

    ತಂಡಕ್ಕೆ ಬೇಕಾದಾಗ ರಕ್ಷಕನಾಗುವ ಆಪ್ತರಕ್ಷಕ ಕೊಹ್ಲಿ

    ವಿರಾಟ್​ ಆಟಕ್ಕೆ ದಿಗ್ಗಜರ ಕ್ರಿಕೆಟಿಗರ ಸಲಾಂ

ಈತ ಟೀಮ್ ಇಂಡಿಯಾದ ರಕ್ಷಕ.. ಟೀಮ್ ಇಂಡಿಯಾದ ಮೋಸ್ಟ್ ಇಂಪಾರ್ಟೆಂಟ್. ಯಾಕಂದ್ರೆ ತಂಡಕ್ಕೆ ಬೇಕಾದುದ್ದನ್ನೇ ಮಾಡಿ ತೋರಿಸುವ ಛಲಗಾರ. ಮುಂದಿನ ದಿನಗಳಲ್ಲಿ ಈತ ಎಷ್ಟು ಇಂಪಾರ್ಟೆಂಟ್ ಅನ್ನೋದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ.

ವಿರಾಟ್​ ಕೊಹ್ಲಿ.. ಟೀಮ್ ಇಂಡಿಯಾದ ಸೂಪರ್ ಸ್ಟಾರ್​. ತನ್ನ ಬ್ಯಾಟಿಂಗ್ ವೈಭವದಿಂದ ವಿಶ್ವವನ್ನೇ ಗೆದ್ದ ರಾಜ. ಏಕದಿನ ಫಾರ್ಮೆಟ್​ನ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​​​​. ವಿಶ್ವಕಪ್​ನಲ್ಲಿ ಚೇಸಿಂಗ್​​ ತಂಡವನ್ನು ಗೆಲುವಿನ ದಡ ಸೇರಿಸ್ತಿರುವ ಸೆಂಚೂರಿ ಸ್ಟಾರ್​. ತಂಡದಲ್ಲಿ ಇಂಪಾರ್ಟೆಂಟ್​ ರೋಲ್ ಪ್ಲೇ ಮಾಡ್ತಿದ್ದಾರೆ. ಆ ಮೂಲಕ ತಾನೆಷ್ಟು ಇಂಪಾರ್ಟೆಂಟ್ ಅನ್ನೋದನ್ನು ಟೀಮ್ ಇಂಡಿಯಾಗೆ ಮಾತ್ರವಲ್ಲ. ವಿಶ್ವ ಕ್ರಿಕೆಟ್​ಗೂ ತೋರಿಸಿಕೊಟ್ಟಿದ್ದಾರೆ.

ಪ್ರಸಕ್ತ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ರಕ್ಷಕ ಅಂದ್ರೆ ಅದು ವಿರಾಟ್​ ಕೊಹ್ಲಿ. ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗ ಫ್ರಂಟ್ ಲೈನ್​ ರನ್ನರ್ ಆಗಿ ತಂಡವನ್ನ ಮುನ್ನಡೆಸಿದ ರೀತಿ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಎದುರಿನ ಪಂದ್ಯಗಳಲ್ಲಿ ಗೆಲುವಿನ ದಡ ಸೇರಿಸಿದ್ದೇ ಆಗಿದೆ. ಆಸ್ಟ್ರೇಲಿಯಾ ಎದುರು 2ಕ್ಕೆ 3 ವಿಕೆಟ್​​ ಕಳೆದುಕೊಂಡ ಟೀಮ್ ಇಂಡಿಯಾಗೆ ಆಪದ್ಭಾಂದವನಾದ ವಿರಾಟ್, ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲೂ ಏಕಾಂಗಿ ಹೋರಾಟ ನಡೆಸಿದ್ದು ನಿಜಕ್ಕೂ ಮರೆಯುವಂತಿಲ್ಲ. ಇದು ಟೀಮ್ ಇಂಡಿಯಾಗೆ ವಿರಾಟ್​ ಎಷ್ಟು ಇಂಪಾರ್ಟೆಂಟ್ ಅನ್ನೋದನ್ನೇ ಫ್ರೂವ್ ಮಾಡಿದೆ.

ವಿರಾಟ್​ ಆಟಕ್ಕೆ ದಿಗ್ಗಜರ ಕ್ರಿಕೆಟಿಗರ ಸಲಾಂ

ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿಯ ಆಟವನ್ನ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಂಡಾಡಿದ್ದಾರೆ. ಅಷ್ಟೇ ಅಲ್ಲ, ಪ್ರಸಕ್ತ ಮೆಗಾಟೂರ್ನಿಯಲ್ಲಿ ವಿರಾಟ್​ ಕೊಹ್ಲಿಯ ಇಂಪಾರ್ಟೆನ್ಸಿ ಮಾತ್ರವೇ ಅಲ್ಲ. ಆತನ ಕೊಡುಗೆ ಎಷ್ಟು ಮುಖ್ಯ ಅನ್ನೋದನ್ನ ದಿಗ್ಗಜ ಕ್ರಿಕೆಟಿಗರೇ ಹೇಳಿದ್ದಾರೆ.

ಪದಗಳಲ್ಲಿ ವಿವರಿಸಲು ಅಸಾಧ್ಯ

ವಿರಾಟ್​ ಕೊಹ್ಲಿ ನಾಲ್ಕು ಚಕ್ರದ ಕಾರು ಇದ್ದಂತೆ. ತಂಡ ಯಾವುದೇ ಪರಿಸ್ಥಿತಿಯಲ್ಲಿ ಸಿಲುಕಿರಲಿ ವಿರಾಟ್ ಕೊಹ್ಲಿ ಬೇಧಿಸುತ್ತಾರೆ. ಇದು ಹಲವು ಬಾರಿ ನಡೆದಿದೆ. ಆತ ಏನು ಮಾಡಿದ್ದಾನೆ, ಏನು ಮಾಡ್ತಿದ್ದಾನೆ ಅನ್ನೋದು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಆದ್ರೆ ವಿರಾಟ್​ ಬ್ಯಾಟಿಂಗ್ ಮಾಡಲು ಬಂದ್ರೆ ಅದು ನಿಜಕ್ಕೂ ಹಬ್ಬವೇ. ಸಂಕಷ್ಟದ ಪರಿಸ್ಥಿತಿಯಿಂದ ತಂಡವನ್ನ ಮುನ್ನಡೆಸುವ ಕಲೆ ನಿಜಕ್ಕೂ ಅದ್ಭುತ ಎಂದು ಪಾಕ್ ಮಾಜಿ ಕ್ರಿಕೆಟರ್ ಶೋಯೆಬ್ ಮಲಿಕ್ ಹೇಳಿದ್ದಾರೆ.

ಕೊಹ್ಲಿ ನಿಜವಾದ ಕ್ಲಾಸ್ ಬ್ಯಾಟ್ಸ್​ಮನ್

ವಿರಾಟ್​ ಕೊಹ್ಲಿ ಓರ್ವ ನಿಜವಾದ ಕ್ಲಾಸ್ ಬ್ಯಾಟ್ಸ್​ಮನ್. ಯಾವಾಗಲೂ ಆತ ಅತ್ಯುತ್ತಮವಾದ್ದನ್ನೇ ಹೊರಗಾಕುತ್ತಾರೆ. ನಿಜಕ್ಕೂ ಕ್ಲಾಸ್​ ಪರ್ಮೆಂನೆಟ್. ಈತ ಮತ್ತೋರ್ವ ಶ್ರೇಷ್ಠ ಆಟಗಾರ. 2020ರಲ್ಲಿ ಟೆಸ್ಟ್ ಕ್ರಿಕೆಟಿಗನ ರೀತಿ ಕಾಣುತ್ತಿದ್ದ. ಈತ ಸರ್ವಶ್ರೇಷ್ಠ ಏಕದಿನ ಕ್ರಿಕೆಟಿಗ. ನೀವು ನೋಡಿದ್ರೆ ಸಚಿನ್​​​​​​​​​​​​​​​​​ ತಮ್ಮ ಕಾಲಾವಧಿಯಲ್ಲಿ ಏನು ಮಾಡಿದ್ದನ್ನೆ ವಿರಾಟ್​ ಕೊಹ್ಲಿ ಕೂಡ ಮಾಡುತ್ತಿದ್ದಾರೆ ಎಂದು ಆಸಿಸ್ ಮಾಜಿ ಕ್ರಿಕೆಟರ್ ಮೈಕಲ್ ಕ್ಲಾರ್ಕ್​ ಅಭಿಪ್ರಾಯಪಟ್ಟಿದ್ದಾರೆ.

ಲಂಕಾ ಮಾಜಿ ಕ್ರಿಕೆಟರ್ ಜಯವರ್ಧನೆ ಪ್ರತಿಕ್ರಿಯಿಸಿ.. ವಿಶ್ವಕಪ್ ಹಾಗೂ ಬಿಗ್ ಟೂರ್ನಿಮೆಂಟ್​ಗಳನ್ನ ಎಂಜಾಯ್​ ಮಾಡಬೇಕು. ನೀವು ಎಂಜಾಯ್ ಮಾಡದಿದ್ರೆ. ಹೊರೆಯಾಗುತ್ತೆ. ಹೀಗಾಗಿ ಬಿಗ್ ಟೂರ್ನಿಮೆಂಟ್​ಗಳಲ್ಲಿ ಬಿಗ್ ಚಾಲೆಂಜಸ್​​ನ ಎಂಜಾಯ್ ಮಾಡಬೇಕು. ಆಗ ಅತ್ಯುತ್ತಮವಾದದ್ದು ಹೊರಬರುತ್ತೆ.

ಲಂಕ ದಿಗ್ಗಜ ಮಾತ್ರವೇ ಅಲ್ಲ. ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ, ವಿರಾಟ್​ ಎಷ್ಟು ಇಂಪಾರ್ಟೆಂಟ್​ ಅನ್ನೋದನ್ನ ಸಾರಿ ಸಾರಿ ಹೇಳಿದ್ದಾರೆ. ವಿರಾಟ್​ ಕೊಹ್ಲಿ ಅದ್ಭುತವಾಗಿ ಆಟವಾಡ್ತಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಹಾಗೂ ಪ್ರಶ್ನೆ ಇಲ್ಲ. ಆತ ಟೀಮ್ ಇಂಡಿಯಾದ ನಿಜವಾದ ಶಕ್ತಿಯಾಗಿದ್ದಾರೆ. ಏಕದಿನ ಫಾರ್ಮೆಟ್​​ಗೆ ವಿರಾಟ್​ ಕೊಹ್ಲಿ ಇಂಪಾರ್ಟೆಂಟ್​ ಎಂದು ಗಂಗೂಲಿ ಹೇಳಿದ್ದಾರೆ.

ಈ ದಿಗ್ಗಜ ಕ್ರಿಕೆಟಿಗರು ಹೇಳಿದಂತೆ ವಿರಾಟ್​, ಟೀಮ್ ಇಂಡಿಯಾ ಪಾಲಿಗೆ ಮೋಸ್ಟ್​ ಇಂಪಾರ್ಟೆಂಟ್​ ಆ್ಯಂಡ್ ಇಂಪ್ಯಾಕ್ಟಬಲ್ ಪ್ಲೇಯರ್ ಅನ್ನೋದನ್ನ ಹೇಳಿದ್ದಾರೆ. ಇದು ಅಕ್ಷರಶಃ ಸತ್ಯ ಕೂಡ. ಯಾಕಂದ್ರೆ ಸದ್ಯ ನಾಕೌಟ್ ಎಂಟ್ರಿಯತ್ತ ಹೆಜ್ಜೆ ಇಟ್ಟಿರುವ ಟೀಮ್ ಇಂಡಿಯಾ, ಸೆಮಿಫೈನಲ್ ಹಾಗೂ ಫೈನಲ್​​ನಲ್ಲಿ ಗೆದ್ದು ಬೀಗಬೇಕಾದ್ರೆ, ಬಿಗ್​ ಮ್ಯಾಚ್​ ಪ್ಲೇಯರ್ ವಿರಾಟ್​ ಕೊಹ್ಲಿ ಆಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿರಾಟ್ ಕೊಹ್ಲಿ ಯಾಕೆ ಇಂಪಾರ್ಟೆಂಟ್.. ಗಂಗೂಲಿ, ಮಲಿಕ್ ಸೇರಿ ಕ್ರಿಕೆಟ್ ತಜ್ಞರ ಗುಣಗಾನ ಇಲ್ಲಿದೆ

https://newsfirstlive.com/wp-content/uploads/2023/10/VIRAT_KOHLI_ROHIT.jpg

Load More