newsfirstkannada.com

8 ವರ್ಷದ ಕನಸು.. ChatGPT ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮ್ಯಾನ್ ವಜಾಗೊಳಿಸಿದ್ದು ಯಾಕೆ? ಕಾರಣವೇನು?

Share :

18-11-2023

  8 ವರ್ಷಗಳ ಹಿಂದೆ ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ಶುರುವಾಗಿದ್ದ ಸಂಸ್ಥೆ

  ಚಾಟ್‌ಜಿಪಿಟಿ ಜನಪ್ರಿಯತೆಗೆ ಹಗಲಿರುಳು ಶ್ರಮಿಸಿದ್ದ ಸ್ಯಾಮ್ ಆಲ್ಟ್‌ಮ್ಯಾನ್‌

  ಚಾಟ್‌ಜಿಪಿಟಿ ಮಾತೃ ಸಂಸ್ಥೆ OpenAIನಿಂದ ವಜಾಗೊಳಿಸೋ ತೀರ್ಮಾನ

ನ್ಯೂಯಾರ್ಕ್‌: ChatGPT ಅನ್ನೋ ಆವಿಷ್ಕಾರ ಸದ್ಯದ ಮಟ್ಟಿಗೆ ಅಂತರ್ಜಾಲ ಬಳಕೆದಾರರ ಮನಗೆದ್ದಿದೆ. ಈ ಚಾಟ್‌ಜಿಪಿಟಿಯನ್ನ ಅಮೆರಿಕಾದ ಕೃತಕ ಬುದ್ಧಿಮತ್ತೆ ಸಂಸ್ಥೆ OpenAI ಇಡೀ ಜಗತ್ತಿಗೆ ಪರಿಚಯಿಸಿದೆ. ಇದೇ OpenAI ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಾಟ್‌ಜಿಪಿಟಿ ಸೃಷ್ಟಿಕರ್ತರಲ್ಲಿ ಒಬ್ಬರಾದ ಸ್ಯಾಮ್‌ ಆಲ್ಟ್‌ಮ್ಯಾನ್‌ ಅವರನ್ನ ಕೆಲಸದಿಂದ ವಜಾಗೊಳಿಸಲಾಗಿದೆ. ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನ ಕೆಲಸದಿಂದ ಕಿತ್ತು ಹಾಕಿರೋದು ಜಗತ್ತಿನ ಟೆಕ್ ಉದ್ಯಮದಲ್ಲೇ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ.

ಚಾಟ್‌ಜಿಪಿಟಿಯ ಮಾತೃ ಸಂಸ್ಥೆ OpenAI ಸ್ಯಾಮ್‌ ಆಲ್ಟ್‌ಮ್ಯಾನ್‌ ಅವರನ್ನ ದಿಢೀರನೇ ವಜಾಗೊಳಿಸೋ ನಿರ್ಧಾರ ತೆಗೆದುಕೊಂಡಿರೋದು ಬಹಳ ಅಚ್ಚರಿ ತಂದಿದೆ. ಸ್ಯಾಮ್‌ ಆಲ್ಟ್‌ಮ್ಯಾನ್ ಅವರನ್ನ ವಜಾಗೊಳಿಸಿದ್ದಲ್ಲದೇ 35 ವರ್ಷದ ಮೀರಾ ಮುರತಿ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಿದೆ. ಅಮೆರಿಕಾದ OpenAI ಸಂಸ್ಥೆ ತೆಗೆದುಕೊಂಡ ಈ ನಿರ್ಧಾರ ಜಗತ್ತಿನ ಟೆಕ್‌ ಉದ್ಯಮದಲ್ಲಿ ಸಾಕಷ್ಟು ಚರ್ಚೆಯಾಗುವಂತೆ ಮಾಡಿದೆ.

CEO ಸ್ಥಾನದಿಂದ ತೆಗೆದುಹಾಕಲು ಕಾರಣವೇನು?

OpenAI ಸಂಸ್ಥೆಯು ತನ್ನ ಬ್ಲಾಗ್‌ನಲ್ಲಿ ಸ್ಯಾಮ್‌ ಆಲ್ಟ್‌ಮ್ಯಾನ್ ಅವರನ್ನ ವಜಾಗೊಳಿಸಿದ್ದಕ್ಕೆ ಕಾರಣವನ್ನು ತಿಳಿಸಿದೆ. ಸ್ಯಾಮ್ ಆಲ್ಟ್‌ಮ್ಯಾನ್‌ ಅವರು ಆಡಳಿತ ಮಂಡಳಿಯೊಂದಿಗೆ ತನ್ನ ಸಂವಹನದಲ್ಲಿ ಪ್ರಾಮಾಣಿಕವಾಗಿಲ್ಲ. ಹೀಗಾಗಿ ಆಡಳಿತ ಮಂಡಳಿಯ ಜವಾಬ್ದಾರಿ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಸ್ಯಾಮ್ ಆಲ್ಟ್‌ಮ್ಯಾನ್‌ OpenAI ಅನ್ನು ಮುನ್ನಡೆಸುವ ಅವರ ಸಾಮರ್ಥ್ಯದಲ್ಲಿ ಇನ್ನು ಮುಂದೆ ಆಡಳಿತ ಮಂಡಳಿಯು ವಿಶ್ವಾಸ ಹೊಂದಿಲ್ಲ ಎಂದು ಹೇಳಿ ಕೆಲಸದಿಂದ ತೆಗೆದು ಹಾಕಿದೆ.

ಸ್ಯಾಮ್‌ ಆಲ್ಟ್‌ಮ್ಯಾನ್ ಅವರನ್ನ ವಜಾಗೊಳಿಸಿದ ಒಂದು ಗಂಟೆಗೆ ಮತ್ತೊಮ್ಮ ಸಹ-ಸಂಸ್ಥಾಪಕ ಗ್ರೆಗ್ ಬ್ರಾಕ್ಮನ್ ಕೂಡ ಕೆಲಸಕ್ಕೆ ಗುಡ್‌ಬೈ ಹೇಳಿದ್ದಾರೆ. ಈ ದಿಢೀರ್ ಬೆಳವಣಿಗೆ ಆಗುತ್ತಿದ್ದಂತೆ OpenAI ಸಂಸ್ಥೆಗೆ ಮೀರಾ ಮುರತಿ ಅವರು ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ. ಈ ಮೂರು ಪ್ರಮುಖ ಬೆಳವಣಿಗೆಗಳು ಜಗತ್ತಿನ ಟೆಕ್‌ ಉದ್ಯಮವೇ ಬೆರಗಾಗುವಂತೆ ಮಾಡಿದೆ.

8 ವರ್ಷಗಳ ಹಿಂದೆ ಶುರು ಮಾಡಿದ ಸಂಸ್ಥೆ!

ಕಳೆದ 8 ವರ್ಷಗಳ ಹಿಂದೆ ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ಜೊತೆಗಿದ್ದವರೊಂದಿಗೆ ಸ್ಯಾಮ್ ಆಲ್ಟ್‌ಮ್ಯಾನ್ ಸಂಸ್ಥೆಯೊಂದನ್ನ ಕಟ್ಟಿದ್ದರು. ಇದರ ಭಾಗವಾಗಿ ಕಳೆದ ಒಂದು ವರ್ಷದ ಹಿಂದೆ ಇಡೀ ಜಗತ್ತಿನ ಗಮನ ಸೆಳೆದ ಚಾಟ್‌ಜಿಪಿಟಿಯನ್ನು ಹೊರತರುವಲ್ಲಿ 38 ವರ್ಷದ ಸ್ಯಾಮ್‌ ಆಲ್ಟ್‌ಮ್ಯಾನ್ ಪ್ರಮುಖ ಪಾತ್ರವಹಿಸಿದ್ದರು. ಸ್ಯಾಮ್‌ ಶ್ರಮದ ಬಳಿಕ ಚಾಟ್‌ಜಿಪಿಟಿ ಇದೀಗ ಇಡೀ ಜಗತ್ತಿನಲ್ಲೇ ಪ್ರತಿಯೊಬ್ಬರ ಮನೆ ಮಾತಾಗಿದೆ. ಕಷ್ಟಪಟ್ಟು ಕಂಪನಿ ಕಟ್ಟಿದ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನೇ ಈಗ ಸಂಸ್ಥೆಯಿಂದ ಹೊರಗೆ ಹಾಕಲಾಗಿದೆ. OpenAI ಸಂಸ್ಥೆಯಿಂದ ಹೊರ ಹಾಕಿರುವುದಕ್ಕೆ ಸ್ಯಾಮ್ ಆಲ್ಟ್‌ಮ್ಯಾನ್ ಅವರು ತುಂಬಾ ಬೇಸರದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ನಾನು OpenAIನಲ್ಲಿ ನನ್ನ ಸಮಯವನ್ನು ಬಹಳ ಇಷ್ಟಪಟ್ಟು ಕಳೆದಿದ್ದೇನೆ. ಇದು ನನಗೆ ವೈಯಕ್ತಿಕವಾಗಿ ಅತಿ ದೊಡ್ಡ ಬದಲಾವಣೆಯಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

8 ವರ್ಷದ ಕನಸು.. ChatGPT ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮ್ಯಾನ್ ವಜಾಗೊಳಿಸಿದ್ದು ಯಾಕೆ? ಕಾರಣವೇನು?

https://newsfirstlive.com/wp-content/uploads/2023/11/OPen-AI-ChatgPt.jpg

Load More