newsfirstkannada.com

ಎಲ್ಲಿಯ ಪ್ಯಾರಿಸ್‌ ಎಲ್ಲಿಯ ಯೋಗಿ ಆದಿತ್ಯನಾಥ್; ಫ್ರಾನ್ಸ್ ಹೊತ್ತಿ ಉರಿಯುವಾಗ ‘UP ಸಿಎಂ’ ನೆನಪಾಗಿದ್ದೇಕೆ?

Share :

01-07-2023

    ಕೇವಲ 24 ಗಂಟೆಯಲ್ಲೇ ಫ್ರಾನ್ಸ್‌ ಹಿಂಸಾಚಾರ ನಿಯಂತ್ರಣಕ್ಕೆ ತರುತ್ತಾರೆ

    ಫ್ರಾನ್ಸ್‌ಗೂ ಯುಪಿ ಸಿಎಂ ಯೋಗಿ ಮಾಡೆಲ್ ಬೇಕು ಅಂತಾ ಹೇಳಿದ್ದೇಕೆ?

    ಕಳೆದ 4 ದಿನಗಳಿಂದ ಫ್ರಾನ್ಸ್‌ ದೇಶದ ಹಲವು ನಗರಗಳಲ್ಲಿ ಹಿಂಸಾಚಾರ

ಎತ್ತಣ ಮಾಮರ ಎತ್ತಣ ಕೋಗಿಲೆ ಅನ್ನೋ ಮಾತಿನಂತೆ ಎಲ್ಲಿಯ ಪ್ಯಾರಿಸ್‌ ಎಲ್ಲಿಯ ಯೋಗಿ ಆದಿತ್ಯನಾಥ್ ಅಂತಾ ಕೇಳಲೇಬೇಕಿದೆ. ಯಾಕಂದ್ರೆ ಗಲಭೆ, ಹಿಂಸಾಚಾರಕ್ಕೆ ಹೊತ್ತಿ ಉರಿಯುತ್ತಿರುವ ಫ್ರಾನ್ಸ್‌ಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೂ ಹೊಸ ನಂಟು ಬೆಸೆದುಗೊಂಡಿದೆ. ಯೋಗಿ ಆದಿತ್ಯನಾಥ್‌ ಕೇವಲ 24 ಗಂಟೆಯಲ್ಲೇ ಫ್ರಾನ್ಸ್‌ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುತ್ತಾರೆ ಅನ್ನೋ ಚರ್ಚೆ ಕುತೂಹಲ ಕೆರಳಿಸಿದೆ.

ಪ್ಯಾರಿಸ್‌ನಲ್ಲಿ 17 ವರ್ಷದ ಬಾಲಕನನ್ನು ಟ್ರಾಫಿಕ್ ಪೊಲೀಸರು ಶೂಟೌಟ್ ಮಾಡಿದ್ದಾರೆ ಎಂದು ಇಡೀ ಫ್ರಾನ್ಸ್ ಬೆಂಕಿಯಾಗಿದೆ. ಪ್ರತಿಭಟನಾಕಾರರು ಸಾವಿರಾರು ವಾಹನ, ನೂರಾರು ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆ, ದಾಂಧಲೆಯನ್ನು ನಡೆಸಿರೋ ರೊಚ್ಚಿಗೆದ್ದ ಯುವಕರು ಅಪಾರ ಸರ್ಕಾರದ ಆಸ್ತಿ, ಪಾಸ್ತಿ ಹಾನಿಗೊಳಿಸಿದ್ದಾರೆ. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಕಳೆದ 4 ದಿನಗಳಿಂದ ಫ್ರಾನ್ಸ್‌ ಅಕ್ಷರಶಃ ಹೊತ್ತಿ ಉರಿಯುತ್ತಿದೆ.

ಫ್ರಾನ್ಸ್‌ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ Prof. ಜಾನ್ ಕಾಮ್ ಎಂಬುವವರು ಒಂದು ಟ್ವೀಟ್ ಮಾಡಿದ್ದರು. ಹಿಂಸಾಚಾರವನ್ನು ನಿಯಂತ್ರಿಸಲು ಭಾರತವು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಫ್ರಾನ್ಸ್‌ಗೆ ಕಳುಹಿಸಬೇಕು. ಯೋಗಿ ಅವರು 24 ಗಂಟೆಯಲ್ಲೇ ಇಂತಹ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ ಎಂದಿದ್ದರು. ಜಾನ್‌ ಕಾಮ್ ಅವರ ಟ್ವೀಟ್ ವೈರಲ್ ಆಗಿದ್ದು, ಉತ್ತರ ಪ್ರದೇಶ ಸಿಎಂ ಕಚೇರಿ ಇದಕ್ಕೆ ಉತ್ತರಿಸಿದೆ. ಪ್ರಪಂಚದ ಯಾವುದೇ ಜಾಗದಲ್ಲಿ ಉಗ್ರವಾದ, ಹಿಂಸಾಚಾರ, ಕಾನೂನು ಸುವ್ಯವಸ್ಥೆ ಯಾವಾಗ ಹದಗೆಡುವುದೋ ಆಗ ಯೋಗಿ ಮಾಡೆಲ್ ನೆನಪಾಗುತ್ತದೆ. ಕಾನೂನು ಸುವ್ಯವಸ್ಥೆಯನ್ನ ನಿಯಂತ್ರಿಸುವಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಿಜಕ್ಕೂ ಮಹಾರಾಜ್‌ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 500 ಕಟ್ಟಡ, 2,000 ವಾಹನ, 3,800ಕ್ಕೂ ಹೆಚ್ಚು ಪ್ರದೇಶ ಧಗಧಗ; ಹಿಂಸಾಚಾರ, ಹೊತ್ತಿ ಉರಿದ ಫ್ರಾನ್ಸ್‌ನಲ್ಲಿ ಏನೇನಾಗ್ತಿದೆ?

ಫ್ರಾನ್ಸ್‌ ಹೊತ್ತಿ ಉರಿಯುವಾಗ ಯೋಗಿ ಮಾಡೆಲ್ ಅಲ್ಲಿ ಕೆಲಸ ಮಾಡುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದ್ದು ಕುತೂಹಲಕಾರಿಯಾಗಿದೆ. ಸಂಶೋಧಕ ಜಾನ್ ಕಾಮ್ ಅವರು ಕೊಟ್ಟ ಟಾಂಗ್‌ಗೆ ಉತ್ತರಪ್ರದೇಶ ಸಿಎಂ ಕಚೇರಿ ಪ್ರತಿಕ್ರಿಯಿಸಿದ್ದು ವಿಶೇಷವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಎಲ್ಲಿಯ ಪ್ಯಾರಿಸ್‌ ಎಲ್ಲಿಯ ಯೋಗಿ ಆದಿತ್ಯನಾಥ್; ಫ್ರಾನ್ಸ್ ಹೊತ್ತಿ ಉರಿಯುವಾಗ ‘UP ಸಿಎಂ’ ನೆನಪಾಗಿದ್ದೇಕೆ?

https://newsfirstlive.com/wp-content/uploads/2023/07/UP-Cm-Yogi.jpg

Load More