ನಿಕೋಲಸ್ ಪೂರನ್ ಸದ್ಯ ವೆಸ್ಟ್ ಇಂಡೀಸ್ನಲ್ಲಿ ಬಿಗ್ ಹಿಟ್ಟರ್
ಶಿಮ್ರಾನ್ ಹೆಟ್ಮಯರ್ ಎದುರಾಳಿ ಮೇಲೆ ಸೈಲೆಂಟ್ ಫೈಟಿಂಗ್..!
ಬೌಲಿಂಗ್ನಿಂದ ಕೆರಿಬಿಯನ್ ಪಡೆಯನ್ನು ಕಟ್ಟಿ ಹಾಕಲೇಬೇಕು
ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದ ಟೀಮ್ ಇಂಡಿಯಾಗೆ, ಈಗ ಟಿ20 ಸರಣಿ ಗೆಲ್ಲೋ ತವಕ. ಅತ್ತ ಸೋತ ವಿಂಡೀಸ್ಗೆ ಟಿ20ಯಲ್ಲಿ ಗೆಲ್ಲೋ ಛಲ. ಆದ್ರೆ, ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದಿರೋ ಟೀಮ್ ಇಂಡಿಯಾಗೆ ಟಿ20 ಸಿರೀಸ್, ನಿಜಕ್ಕೂ ಅಗ್ನಿಪರೀಕ್ಷೆಯ ಕಣ.
ಏಕದಿನ ಸರಣಿ ಏನೋ ಮುಗೀತು. ಇಂದಿನಿಂದ ಅಸಲಿ ಟಿ20 ಗೇಮ್ ಶುರುವಾಗ್ತಿದೆ. ಪ್ರಯೋಗಗಳ ನಡುವೆ ಏಕದಿನ ಸರಣಿ ಗೆದ್ದಿರೋ ಟೀಮ್ ಇಂಡಿಯಾಗೆ, ಟಿ20ಯಲ್ಲಿ ರಿಯಲ್ ಚಾಲೆಂಜ್ ಎದುರಾಗ್ತಿದೆ. ಅದರಲ್ಲೂ ಟಿ20 ಫಾರ್ಮೆಟ್ನ ಮೋಸ್ಟ್ ಡೇಂಜರಸ್ ಟೀಮ್ ವೆಸ್ಟ್ ಇಂಡೀಸ್. ಬರೀ ಟಿ20 ಸ್ಪೆಷಲಿಸ್ಟ್ ಆ್ಯಂಡ್ ಗೇಮ್ ಚೇಂಜರ್ಗಳಿಂದಲೇ ಕೂಡಿರುವ ವಿಂಡೀಸ್ ತಂಡದಲ್ಲಿ, ಸಿಂಗಲ್ ಹ್ಯಾಂಡ್ನಲ್ಲೇ ಪಂದ್ಯ ಗೆಲ್ಲಿಸಿಕೊಡುವ ದೈತ್ಯರಿದ್ದಾರೆ. ಹೀಗಾಗಿ ಕರಿಬಿಯನ್ನರನ್ನರ ಎದುರು ಗೆಲ್ಲೋದು ಸುಲಭದ ಮಾತೇ ಅಲ್ಲ.
ಯಂಗ್ ಇಂಡಿಯಾಗೂ ಕಾದಿದೆ ಆಪತ್ತು..!
ಇತ್ತಿಚೆಗಷ್ಟೇ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ರೌದ್ರವತಾರ ಪ್ರದರ್ಶಿಸಿರುವ ನಿಕೋಲಸ್ ಪೂರನ್, ಟಿ20 ತಂಡದಲ್ಲಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್‌ನ ಫೈನಲ್ನಲ್ಲಿ ಜಸ್ಟ್ 55 ಎಸೆತಗಳಲ್ಲೇ ಬರೋಬ್ಬರಿ 13 ಸಿಕ್ಸರ್, 10 ಬೌಂಡರಿ ಒಳಗೊಂಡ ಅಜೇಯ 137 ರನ್ ಸಿಡಿಸಿದ್ದ ಈ ಬಿಗ್ ಹಿಟ್ಟರ್, ಟೀಮ್ ಇಂಡಿಯಾಗೂ ಅಪಾಯಕಾರಿ ಆಗೋದ್ರಲ್ಲಿ ಡೌಟೇ ಇಲ್ಲ.
ಕ್ಷಣಾರ್ಧದಲ್ಲಿ ಪಂದ್ಯವನ್ನ ಕಸಿದುಕೊಳ್ಳುವ ಗೇಮ್ ಚೇಂಜರ್ ಪೂರನ್, ರೆಟ್ ಹಾಟ್ ಫಾರ್ಮ್ನಲ್ಲಿದ್ದಾರೆ. ಇವರಷ್ಟೇ ಅಲ್ಲ, ಪೂರನ್ ಜೊತೆಗೆ ತಂಡದಲ್ಲಿರೋ ನಾಲ್ವರು ಪಾಂಡ್ಯ ಪಡೆಯ ಪಾಲಿಗೆ ದುಸ್ವಪ್ನವೇ ಆಗಲಿದ್ದಾರೆ. ಹಾಗಾದ್ರೆ, ಯಂಗ್ ಇಂಡಿಯಾಗೆ ನಿದ್ದೆಯಲ್ಲಿ ಕಾಡೋ ಆ ಅಪಾಯಕಾರಿಗಳೂ ಯಾಱರು?.
ಹೆಟ್ಮಯರ್ ರೊಚ್ಚಿಗೆದ್ರೆ ಖೇಲ್ ಖತಂ ಗ್ಯಾರಂಟಿ..!
ಶಿಮ್ರಾನ್ ಹೆಟ್ಮಯರ್, ಸೈಲೆಂಟ್ ಕಿಲ್ಲರ್.. ಸ್ಲೋ ಪಾಯಿಸನ್ನಂತೆ ಎದುರಾಳಿ ಮೇಲೆ ಮುಗಿಬೀಳುವ ಈ ಮರಿ ಗೇಲ್, ಏಕದಿನ ಫಾರ್ಮೆಟ್ನಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿಲ್ಲ. ಆದ್ರೆ, ಟಿ20 ಎಂಬ ಚುಟುಕು ಸಮರದಲ್ಲಿ ಈತನ ತಡೆಯೋದು ಅಷ್ಟು ಸುಲಭವಲ್ಲ. ಅದರಲ್ಲೂ ಒಮ್ಮೆ ರೊಚ್ಚಿಗೆದ್ದರೆ, ಎದುರಾಳಿ ಖಲ್ಲಾಸ್ ಆಗೋದು ಫಿಕ್ಸ್.
ಪೊವೆಲ್ ‘ಪವರ್ ಕಟ್’ ಮಾಡೋದ್ಯಾರು..?
ರೋವನ್ ಪೊವೆಲ್, ಪವರ್ ಹಿಟ್ಟಿಂಗ್ಗೆ ಈತನೇ ಹೆಸರುವಾಸಿ. ಈತನ ಬಿಗ್ ಶಾಟ್ಸ್ಗಳಿಗೆ ಎದುರಾಳಿ ಬೌಲರ್ಗಳು ದಿಕ್ಕೆಟ್ಟು ಹೋಗ್ತಾರೆ. ಹೀಗಾಗಿ ಟೀಮ್ ಇಂಡಿಯಾ ಫಿನಿಷರ್ ಪೊವೆಲ್ ಪವರ್ ಕಟ್ ಮಾಡ್ಬೇಕಿದೆ.
ಕೈಲ್ ಮೈಯರ್ಸ್ಗೆ ಬ್ರೇಕ್ ಹಾಕಬೇಕು..!
ಕೈಲ್ ಮೈಯರ್ಸ್.. ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾಗುವ ಈತ, ಪವರ್ ಪ್ಲೇನಲ್ಲಿ ಪವರ್ ಸ್ಟೋಕ್ಗಳಿಂದಲೇ ರನ್ ಕೊಳ್ಳೆ ಹೊಡೆಯುತ್ತಾರೆ. ಸ್ಪಿನ್ ಹಾಗೂ ವೇಗದ ಬೌಲಿಂಗ್ ಎದುರು ಸುಲಭವಾಗಿ ರನ್ ಗಳಿಸೋ ಈತನಿಗೆ ಆರಂಭದಲ್ಲೇ ಬ್ರೇಕ್ ಹಾಕಬೇಕು. ಇಲ್ಲ ಟೀಮ್ ಇಂಡಿಯಾಗೆ ಪಂಚ್ ನೀಡೋದು ಗ್ಯಾರಂಟಿ.
ಶೆಫರ್ಡ್ ಶಟರ್ ಮಾಡಬೇಕು ಕ್ಲೋಸ್..?
ರೊಮಾರಿಯೋ ಶೆಫರ್ಡ್, ಬೌಲಿಂಗ್ನಲ್ಲಿ ಕಾಡುವ ಈತ, ಲೋವರ್ ಆರ್ಡರ್ನಲ್ಲಿ ಮೋಸ್ಟ್ ಡೇಂಜರಸ್. ತಾನು ಬ್ಯಾಟ್ ಬೀಸಿರುವ 12 ಇನ್ನಿಂಗ್ಸ್ಗಳಲ್ಲಿ 6 ಬಾರಿ ನಾಟೌಟ್ ಆಗಿ ನಿಂತಿರೋ ಈತ, 24 ಸಿಕ್ಸರ್, 10 ಬೌಂಡರಿ ಕೊಳ್ಳೆ ಹೊಡೆದಿದ್ದಾರೆ. ಜಸ್ಟ್ 286 ರನ್ ಗಳಿಸಿರೋ ಈತ, 160ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಟಾಪ್ ಆ್ಯಂಡ್ ಮಿಡಲ್ ಆರ್ಡರ್ ವೈಫಲ್ಯ ಅನುಭವಿಸಿದ್ರು. ಲೋವರ್ ಆರ್ಡರ್ನಲ್ಲಿ ಗೇಮ್ ಫಿನಿಷ್ ಮಾಡಬಲ್ಲ ತಾಕತ್ತಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ಅದೇನೇ ಆಗಲಿ.. ಇಂದಿನ ಕದನ ಯಂಗ್ ಇಂಡಿಯಾ ವರ್ಸಸ್ ಟಿ-ಟ್ವೆಂಟಿ ಸ್ಪೆಷಲಿಸ್ಟ್ಗಳ ಕಾಳಗವಾಗಿ ಬಿಂಬಿತವಾಗಿದ್ದು, ಅಂತಿಮವಾಗಿ ಯಾರು ಮೇಲುಗೈ ಸಾಧಿಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ