newsfirstkannada.com

ಅಶ್ವಿನ್ ಮ್ಯಾಜಿಕ್​​ಗೆ ವಿಂಡೀಸ್ ಗಿರಿಗಿಟ್ಲೆ.. ಎರಡು ದಿನ ಬಾಕಿ ಇರುವಾಗಲೇ ಇಂಡಿಯಾಗೆ ಇನ್ನಿಂಗ್ಸ್, 141 ರನ್​ಗಳ ಭರ್ಜರಿ ಗೆಲುವು..!

Share :

15-07-2023

    ಭಾರತ-ವೆಸ್ಟ್​ ಇಂಡೀಸ್ ನಡುವಿನ​ ಟೆಸ್ಟ್​ ಮೂರೇ ದಿನಕ್ಕೆ ಫಿನಿಶ್

    ಅಶ್ವಿನ್​ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​, ಮತ್ತೆ ಸಾಬೀತು

    ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ದಿಂದ ಮುನ್ನಡೆ

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಜಯಭೇರಿ ಬಾರಿಸಿದೆ. ಇದ್ರೊಂದಿಗೆ ರವಿಚಂದ್ರನ್​ ಅಶ್ವಿನ್​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್​ ಅನ್ನೋದು ಮತ್ತೆ ಪ್ರೂವ್​ ಆಗಿದೆ. ಮೂರನೇ ದಿನದ ಆಟ ಹೇಗಿತ್ತು ಅನ್ನೋದ್ರ ವಿವರ ಇಲ್ಲಿದೆ.

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ. ಅವರದ್ದೇ ತವರಿನಂಗಳದಲ್ಲಿ ಕೆರಿಬಿಯನ್​ ದೈತ್ಯರನ್ನ ಗಿರ್​ಗಿಟ್ಲೆ ಹೊಡೆಸಿದ ಟೀಮ್​ ಇಂಡಿಯಾ ಇನ್ನಿಂಗ್ಸ್​ ಹಾಗೂ 141 ರನ್​ ಅಂತರ ಭರ್ಜರಿ ಜಯಭೇರಿ ಬಾರಿಸಿದೆ.

150 ರನ್​ಗಳ ಗಡಿ ದಾಟಿದ ಯಶಸ್ವಿ ಜೈಸ್ವಾಲ್​.!

2 ವಿಕೆಟ್​​ ನಷ್ಟಕ್ಕೆ 312 ರನ್​ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ಟೀಮ್​ ಇಂಡಿಯಾ, ಮೊದಲ ಸೆಷನ್​ನಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿತು. ಮೊದಲ ಟೆಸ್ಟ್​ ಪಂದ್ಯದಲ್ಲೇ ಯಶಸ್ವಿ ಜೈಸ್ವಾಲ್​ 150 ರನ್​​ಗಳ ಗಡಿ ದಾಟಿದರು. ಆದರೆ ದ್ವಿಶತಕ ಅಂಚಿನಲ್ಲಿ ಎಡವಿದ್ರು.

421 ರನ್​ಗಳಿಗೆ ಟೀಮ್​ ಇಂಡಿಯಾ ಇನ್ನಿಂಗ್ಸ್​ ಡಿಕ್ಲೇರ್​.!

4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಜಿಂಕ್ಯಾ ರಹಾನೆ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು. ವಿರಾಟ್​ ಕೊಹ್ಲಿ ಆಟವೂ 76 ರನ್​ಗಳಿಗೆ ಅಂತ್ಯ ಕಂಡಿತು. ಇದರ ಬೆನ್ನಲ್ಲೇ ಟೀಮ್​ ಇಂಡಿಯಾ ಡಿಕ್ಲೆರ್​ ಮಾಡಿಕೊಳ್ತು. ತಂಡ 421 ರನ್​ಗಳಿಸಿದ್ದ ವೇಳೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಇನ್ನಿಂಗ್ಸ್​ ಡಿಕ್ಲೆರ್​​​ ಮಾಡಿಕೊಂಡರು.

ಜಡೇಜಾ, ಅಶ್ವಿನ್​ ದಾಳಿಗೆ ತತ್ತರಿಸಿದ ವಿಂಡೀಸ್​.!

ಬೆಟ್ಟದಂತಹ ಸವಾಲನ್ನ ಮುಂದಿಟ್ಟುಕೊಂಡು 2ನೇ ಇನ್ನಿಂಗ್ಸ್​​ ಆರಂಭಿಸಿದ ವೆಸ್ಟ್​ ಇಂಡೀಸ್, ಆರ್​​ ಅಶ್ವಿನ್​ ಹಾಗೂ ರವೀಂದ್ರ ಜಡೇಜಾ ಸ್ಪಿನ್​ ದಾಳಿಗೆ ತತ್ತರಿಸಿ ಹೋಯ್ತು. ಕಣಕ್ಕಿಳಿದಷ್ಟೇ ವೇಗವಾಗಿ ಆರಂಭಿಕರಾದ ಚಂದ್ರಪಾಲ್​ ಹಾಗೂ ಕ್ಯಾಪ್ಟನ್​ ಕ್ರೇಗ್​​ ಬ್ರಾಥ್​ವೇಟ್​​ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದರು. ಬಳಿಕ ಕಣಕ್ಕಿಳಿದ ಆಟಗಾರರು ಕೂಡ ಜಡೇಜಾ, ಅಶ್ವಿನ್​ ಸ್ಪಿನ್​ ದಾಳಿಗೆ ತುತ್ತಾದರು. ಆರಂಭಿಕರ ಬೆನ್ನಲ್ಲೇ, ಜರ್ಮೈನ್​​ ಬ್ಲಾಕ್​ವುಡ್ ಅಶ್ವಿನ್​ಗೆ ವಿಕೆಟ್​ ಒಪ್ಪಿಸಿ ನಿರ್ಗಮಿಸಿದ್ರೆ, ರೇಮನ್​ ರೀಫರ್​ ಜಡೇಜಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೆ ಜೋಶ್ವಾ ಡಿ ಸಿಲ್ವಾ ಮೊಹಮ್ಮದ್​ ಸಿರಾಜ್​ಗೆ ವಿಕೆಟ್​ ಒಪ್ಪಿಸಿದ್ರು.

ಇದನ್ನು ಓದಿ: ಬೆಂಗಳೂರಿಗರೇ ಎಚ್ಚರ! ರಾತ್ರಿ ಒಬ್ಬರೇ ಓಡಾಡ್ಬೇಡಿ; ಸಿಟಿಗೆ ಮತ್ತೆ ಎಂಟ್ರಿ ಕೊಟ್ಟಿದೇ ಆ ಗ್ಯಾಂಗ್!​

ಚಾಂಪಿಯನ್​​ ಅಶ್ವಿನ್​ ಮ್ಯಾಜಿಕ್​, ವಿಂಡಿಸ್​ ಉಡೀಸ್​.!

ಚಾಂಪಿಯನ್​ ಅಶ್ವಿನ್​ ಬೌಲಿಂಗ್​ ಮುಂದೆ ಕೆರಿಬಿಯನ್​ ಪಡೆ ತಿಣುಕಾಟ ನಡೆಸಿತು. ಮಿಡಲ್​ ಆರ್ಡರ್​ ಹಾಗೂ ಲೋವರ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಅಶ್ವಿನ್, ಬೌಲಿಂಗ್​ ಮುಂದೆ ಮಂಡಿಯೂರಿದ್ರು. ಕಣಕ್ಕಿಳಿದಷ್ಟೇ ವೇಗವಾಗಿ ವಿಂಡೀಸ್​ ಆಟಗಾರರು ಪೆವಿಲಿಯನ್​ ಸೇರಿದ ಪರಿಣಾಮ ಕೇವಲ 130 ರನ್​ಗಳಿಗೆ ವಿಂಡೀಸ್ ಆಲೌಟ್​ ಆಯಿತು.

7 ವಿಕೆಟ್​ ಕಬಳಿಸಿ ಅಶ್ವಿನ್​ ಮಿಂಚಿದ್ರೆ, ಜಡೇಜಾ 2, ಸಿರಾಜ್​ 1 ವಿಕೆಟ್​ ಕಬಳಿಸಿದರು. 130 ರನ್​ಗಳಿಗೆ ಆಲ್​​ ಔಟ್​​ ಆದ ವೆಸ್ಟ್​ ಇಂಡೀಸ್​​, ತವರಿನಲ್ಲಿ ಭಾರೀ ಮುಖಭಂಗಕ್ಕೆ ಒಳಗಾಯಿತು. ಇನ್ನಿಂಗ್ಸ್​​ ಹಾಗೂ 141 ರನ್​ ಅಂತರದ ಭಾರಿ ಜಯದೊಂದಿಗೆ ಟೀಮ್​ ಇಂಡಿಯಾ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಶ್ವಿನ್ ಮ್ಯಾಜಿಕ್​​ಗೆ ವಿಂಡೀಸ್ ಗಿರಿಗಿಟ್ಲೆ.. ಎರಡು ದಿನ ಬಾಕಿ ಇರುವಾಗಲೇ ಇಂಡಿಯಾಗೆ ಇನ್ನಿಂಗ್ಸ್, 141 ರನ್​ಗಳ ಭರ್ಜರಿ ಗೆಲುವು..!

https://newsfirstlive.com/wp-content/uploads/2023/07/ASHWINI.jpg

Load More