newsfirstkannada.com

ಅಶ್ವಿನ್​, ಜಡೇಜಾ ಸ್ಪಿನ್​ ಮ್ಯಾಜಿಕ್.. ಅಲ್ಪಮೊತ್ತಕ್ಕೆ ತತ್ತರಿಸಿದ ವಿಂಡೀಸ್​.. ಕ್ಯಾಪ್ಟನ್​ ಜೊತೆ ಭರವಸೆ ಮೂಡಿಸಿದ ಜೈಸ್ವಾಲ್..!

Share :

13-07-2023

    ಕೆರಿಬಿಯನ್​ನಲ್ಲಿ ಸ್ಪಿನ್ನರ್​ಗಳ ಅಬ್ಬರ, ಥಂಡಾ ಹೊಡೆದ ವಿಂಡೀಸ್​

    ಕ್ಯಾಪ್ಟನ್​ ಬ್ರಾತ್​​​ವೇಟ್​ಗೂ ಡಕೌಟ್​ ದಾರಿ ತೋರಿಸಿದ ಆರ್ ಅಶ್ವಿನ್​​

    ಜಡೇಜಾ ಕೈಚಳಕ, ಮೊಹಮ್ಮದ್​ ಸಿರಾಜ್​ ಕ್ಯಾಚ್ ಮಸ್ತ್​ ಮ್ಯಾಚ್​

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ದಿನದಾಟದಲ್ಲಿ ನಿರೀಕ್ಷೆಯಂತೆ ಟೀಮ್​ ಇಂಡಿಯಾ ಬೌಲರ್ಸ್​ ದರ್ಬಾರ್​ ನಡೆಸಿದ್ರು. ಅದ್ರಲ್ಲೂ, ಲೆಜೆಂಡ್ ಅಶ್ವಿನ್​ ಮ್ಯಾಜಿಕ್​ ಮುಂದೆ ಕೆರಿಬಿಯನ್​ ಬ್ಯಾಟರ್ಸ್​ ಗಿರ್​ಗಿಟ್ಲೆ ಹೊಡೆದ್ರು. ಟೀಮ್​ ಇಂಡಿಯಾದ ವಿಕೆಟ್​ ಬೇಟೆ ಹೇಗಿತ್ತು?.

ಭಾರತದ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಟಾಸ್​ ಗೆದ್ದ ವೆಸ್ಟ್​ ಇಂಡೀಸ್ ನಾಯಕ ಕ್ರೇಗ್​ ಬ್ರಾಥ್​ವೇಟ್​​​ ನೇರವಾಗಿ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ್ರು. ಆರಂಭದಲ್ಲಿ ಎಲ್ಲ ಚನ್ನಾಗಿತ್ತು. 10 ಓವರ್​​ ಆದ ಮೇಲೆ ಅಸಲಿ ಗೇಮ್​​ಸ್ಟಾರ್ಟ್​ ಆಯ್ತು. ವಿಂಡೀಸ್​ ನಾಯಕನ ಲೆಕ್ಕಾಚಾರ ಉಲ್ಟಾ ಆಯಿತು.

ಆಶ್ವಿನ್​ ಮ್ಯಾಜಿಕ್​, ಕಕ್ಕಾಬಿಕ್ಕಿಯಾದ ಚಂದ್ರಪಾಲ್​.!

ಸಾಲಿಡ್​​ ಟಚ್​ನಲ್ಲಿದ್ದು, ಉತ್ತಮ ಬ್ಯಾಟಿಂಗ್​ ನಡೆಸ್ತಾ ಇದ್ದ ಚಂದ್ರಪಾಲ್​​ ಆಟಕ್ಕೆ ಆರ್​.ಅಶ್ವಿನ್​ ಬ್ರೇಕ್​ ಹಾಕಿದ್ರು. ಡಿಫೆನ್ಸ್​ ಮಾಡೋ ಯತ್ನದಲ್ಲಿ ಎಡ್ಜ್​ ಆದ ಬಾಲ್​ ವಿಕೆಟ್​ ಎಗರಿಸ್ತು.

ಬ್ರಾತ್​​​ವೇಟ್​ಗೂ ಡಗೌಟ್​ ದಾರಿ ತೋರಿಸಿದ ಅಶ್ವಿನ್​​

ವಿಂಡೀಸ್​ ಕ್ಯಾಪ್ಟನ್​ ಕ್ರೇಗ್​ ಬ್ರಾತ್​​​​ವೇಟ್​ಗೂ ಅಶ್ವಿನ್​, ಪೆವಿಲಿಯನ್​ ದಾರಿ ತೋರಿಸಿದ್ರು. ಬಿಗ್​ಶಾಟ್​​ ಹೊಡೆಯಲು ಮುಂದಾದ ಬ್ರಾತ್​​ವೇಟ್​​, ರೋಹಿತ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ಕೆಣಕಿ ಕೈ ಸುಟ್ಟುಕೊಂಡ ರೇಮನ್​ ರಿಫರ್​.!

ಶಾರ್ದೂಲ್​ ಠಾಕೂರ್​ ಬೌಲಿಂಗ್​ನಲ್ಲಿ ಕವರ್​​ಡ್ರೈವ್​ ಬಾರಿಸಲು ರೇಮನ್​ ರಿಫರ್ ಮುಂದಾದ್ರು. ಆದ್ರೆ, ಔಟ್​ ಸೈಡ್​ ಎಡ್ಜ್​ ಆದ ಬಾಲ್​ ನೇರವಾಗಿ​​ ಇಶಾನ್​ ಕಿಶನ್​ ಕೈ ಸೇರಿತು.

ಸಿರಾಜ್​ ಸ್ಟನ್ನಿಂಗ್​ ಕ್ಯಾಚ್​ಗೆ ಬ್ಲಾಕ್​ವುಡ್​​ ಸ್ಟನ್​.!

27ನೇ ಓವರ್​​ನ ಕೊನೆ ಎಸೆತದಲ್ಲಿ ಜರ್ಮೇನ್​​ ಬ್ಲಾಕ್​ವುಡ್​​ ಬೌಂಡರಿ ಬಾರಿಸೋಕೆ ಮುಂದಾದ್ರು. ಮಿಡ್​ ಆಫ್​ನಲ್ಲಿ ಫೀಲ್ಡ್​ ಮಾಡ್ತಾ ಇದ್ದ ಮೊಹಮ್ಮದ್​ ಸಿರಾಜ್​ ಡೈವ್​ ಮಾಡಿ ಸ್ಟನ್ನಿಂಗ್​​ ಕ್ಯಾಚ್​ ಹಿಡಿದ್ರು.

ಜಡೇಜಾ ಮ್ಯಾಜಿಕ್​ಗೆ ಜೋಶ್ವಾ ವಿಕೆಟ್​​ ಡಮಾರ್​.!

ಮೈದಾನಕ್ಕಿಳಿದು ಸೆಟಲ್​ ಆಗೋ ಲೆಕ್ಕಾಚಾರದಲ್ಲಿದ್ದ ಜೋಶ್ವಾ ಡಿ ಸಿಲ್ವಾಗೆ ಜಡೇಜಾ ಟೈಮೇ ಕೊಡ್ಲಿಲ್ಲ. ಜಡೇಜಾ ಮ್ಯಾಜಿಕಲ್​ ಸ್ಪಿನ್​ ಮುಂದೆ ಮಂಕಾದ ಜೋಶ್ವಾ ಕಿಶನ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು.

ವಿಂಡೀಸ್​​ಗೆ ಆಸರೆಯಾಗದ ಅನುಭವಿ ಹೋಲ್ಡರ್​.!

ಬರೋಬ್ಬರಿ 61 ಎಸೆತಗಳನ್ನ ಎದುರಿಸಿದ ಅನುಭವಿ ಜೇಸನ್​ ಹೋಲ್ಡರ್​​ ಕೂಡ ಕೆರಿಬಿಯನ್​ಗೆ ಆಸರೆಯಾಗಲಿಲ್ಲ. 18 ರನ್​ಗಳಿಗೆ ಸಿರಾಜ್​ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದ್ರು.

ಇದನ್ನು ಓದಿ: ವಿಂಡೀಸ್​​ ವಿರುದ್ಧ ಟೆಸ್ಟ್​.. ಟೀಂ ಇಂಡಿಯಾದಲ್ಲಿ ಅಚ್ಚರಿ ಆಯ್ಕೆ; ಯಾಱರಿಗೆ ಸ್ಥಾನ?

ಸುಲಭದ ತುತ್ತಾದ ವಿಂಡೀಸ್​​ ಟೈಲೆಂಟರ್ಸ್​​.!

ಟೀಮ್​ ಇಂಡಿಯಾದ ಬೌಲಿಂಗ್​ ಅಬ್ಬರದ ಮುಂದೆ ವಿಂಡೀಸ್​ ಟೈಲೆಂಡರ್ಸ್​ ಥಂಡಾ ಹೊಡೆದ್ರು, ದೈತ್ಯ ರಖೀಮ್​ ಕಾರ್ನ್​ವಾಲ್​ ಕೊನೆಯವರೆಗೂ ಹೋರಾಡಿದ್ದು ಬಿಟ್ರೆ, ಉಳಿದವರೆಲ್ಲ ಬಹು ಬೇಗನೆ ಡಗೌಟ್​ ಸೇರಿದ್ರು. ಅಂತಿಮವಾಗಿ 150 ರನ್​ಗಳಿಗೆ ಕೆರಿಬಿಯನ್​ಗೆ ​ಆಲೌಟ್​ ಆಯಿತು.

5 ವಿಕೆಟ್​ ಕಬಳಿಸಿದ ದಾಖಲೆ ಬರೆದ ಅಶ್ವಿನ್​.!

ಟೀಮ್​ ಇಂಡಿಯಾ ಪರ ಅಶ್ವಿನ್​ 5 ವಿಕೆಟ್ ಕಬಳಿಸಿದ್ರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 33ನೇ ಬಾರಿ ಫೈವ್​ ವಿಕೆಟ್​ ಹೌಲ್​ ಗಳಿಸಿದ ದಾಖಲೆ ಬರೆದ್ರು. ಇನ್ನು, ಜಡೇಜಾ 3, ಸಿರಾಜ್​ ಹಾಗೂ ಶಾರ್ದೂಲ್​ ತಲಾ 1 ವಿಕೆಟ್​ ಕಬಳಿಸಿ ಮಿಂಚಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಶ್ವಿನ್​, ಜಡೇಜಾ ಸ್ಪಿನ್​ ಮ್ಯಾಜಿಕ್.. ಅಲ್ಪಮೊತ್ತಕ್ಕೆ ತತ್ತರಿಸಿದ ವಿಂಡೀಸ್​.. ಕ್ಯಾಪ್ಟನ್​ ಜೊತೆ ಭರವಸೆ ಮೂಡಿಸಿದ ಜೈಸ್ವಾಲ್..!

https://newsfirstlive.com/wp-content/uploads/2023/07/IND_WI_1ST_TEST_ASHWIN_JADEJA.jpg

Load More