newsfirstkannada.com

ರಾಹುಲ್​ ದ್ರಾವಿಡ್​ ಹೇಳಿದ ಆ ಮಾತುಗಳೇ ಅಶ್ವಿನ್​ ಸಾಧನೆಗೆ ಪ್ರೇರಣೆ.. ವಿಕೆಟ್ಸ್​, ರನ್ಸ್​ ಎಲ್ಲವೂ ಸುಂದರ ನೆನಪುಗಳು..!

Share :

14-07-2023

  ಆರ್​ ಅಶ್ವಿನ್​ ಬಳಿ ರಾಹುಲ್​ ದ್ರಾವಿಡ್​ ಹೇಳಿದ ಆ ಮಾತುಗಳಾವುವು?

  ಆಫ್​ ಸ್ಪಿನ್ನರ್​ ಆರ್​ ಅಶ್ವಿನ್​ಗೆ ಕೋಚ್​ ರಾಹುಲ್​ ದ್ರಾವಿಡ್ ಪ್ರೇರಣೆ ​

  ಕನ್ನಡಿಗ ದ್ರಾವಿಡ್​ರ ಮಾತುಗಳು ಅಷ್ಟೊಂದು ಪರಿಣಾಮಕಾರಿನಾ..?

ರವಿಚಂದ್ರನ್ ಅಶ್ವಿನ್ ವಯಸ್ಸಾದಂತೆಲ್ಲ ಶೈನ್ ಆಗ್ತಿರೋ ಶೈನಿಂಗ್ ಸ್ಟಾರ್. 36ರ ವಯಸ್ಸಿನಲ್ಲು ಕಮಾಲ್ ಮಾಡ್ತಿರೋ ಸಕ್ಸಸ್​ಫುಲ್​ ಆಫ್ ಸ್ಪಿನ್ನರ್​ ಆರ್. ಅಶ್ವಿನ್​ಗೆ ಪ್ರೇರಣೆ ದಿ ವಾಲ್ ದ್ರಾವಿಡ್. ಅಶ್ವಿನ್ ಟೀಮ್ ಇಂಡಿಯಾದ ಆಫ್ ಸ್ಪಿನ್ನರ್. ಚೆಂಡನ್ನ ಬುಗರಿಯಂತೆ ತಿರುಗಿಸಿ ಬ್ಯಾಟರ್​ಗಳ ಗಿರಗಿಟ್ಲೆ ಆಡಿಸೋ ಅಶ್ವಿನ್, 36ರ ವಯಸ್ಸಲ್ಲೂ ಛಲದಂಕಮಲ್ಲ. ಅದೆಷ್ಟೋ ಪಂದ್ಯಗಳಲ್ಲಿ ಅಪಧ್ಭಾಂದವ ಆಗಿರೋ ಅಶ್ವಿನ್, ವಿಂಡೀಸ್ ವಿರುದ್ಧ ಮೊದಲ ಟೆಸ್ಟ್​ನಲ್ಲಿ ಮೊದಲ ಇನ್ನಿಂಗ್ಸ್​ನಲ್ಲೇ ಕಮಾಲ್ ಮಾಡಿ ತಾನೋರ್ವ ಫೈಟರ್ ಅನ್ನೋದು ತೋರಿಸಿಕೊಟ್ಟಿದ್ದಾರೆ.

ಡೊಮಿನಿಕಾನ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್​ನಲ್ಲೇ ವಿಂಡೀಸ್ ಬ್ಯಾಟ್ಸ್​ಮನ್​ಗಳಿಗೆ ತಿಪ್ಪರ್ಲಾಗ ಹಾಕಿಸಿದ ಆರ್.ಅಶ್ವಿನ್ ಬರೋಬ್ಬರಿ 5 ವಿಕೆಟ್​ಗಳನ್ನ ಬೇಟೆಯಾಡಿ ಮಿಂಚಿದರು. ಆ ಮೂಲಕ 33ನೇ ಬಾರಿ 5 ವಿಕೆಟ್ ಹಾಲ್ ಸಾಧನೆ ಮಾಡಿದ ಅಶ್ವಿನ್, ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 700 ವಿಕೆಟ್ ಉರುಳಿಸಿದ ಹೆಗ್ಗಳಿಕೆ ಪಾತ್ರರಾದ್ರು. ಇದರಿಂದಿಗೆ ಮೊದಲ ಟೆಸ್ಟ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಕಾರಣರಾಗಿದ್ದಾರೆ.

WTCಯಲ್ಲಿ ಮಿಸ್ ಮಾಡಿಕೊಂಡಿತ್ತು ಆರ್.ಅಶ್ವಿನ್ ಸೇವೆ..!

ಅಶ್ವಿನ್​ರ ಸದ್ಯದ ಫಾರ್ಮ್ ನೋಡಿದ್ರೆ, ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್​​ನಲ್ಲಿ ಅಶ್ವಿನ್​ರನ್ನ ಮಿಸ್ ಮಾಡ್ಕೊಳ್ತು ಎಂಬ ಮಾತ್ ಹೇಳೋದು ಗ್ಯಾರಂಟಿ. ಯಾಕಂದ್ರೆ, ಟೆಸ್ಟ್ ಕ್ರಿಕೆಟ್​ನ ನಂಬರ್.1 ಬೌಲರ್ ಅನ್ನೋದು ಒಂದು ಮಾತಾದ್ರೆ. ಮತ್ತೊಂದು ವೆಸ್ಟ್ ಇಂಡೀಸ್​ನಲ್ಲಿ ಅಶ್ವಿನ್​ರ ಮ್ಯಾಜಿಕಲ್ ಸ್ಪಿನ್. ಸದ್ಯ ಅಶ್ವಿನ್ ಪರ್ಫಾಮೆನ್ಸ್ ನೋಡಿದ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರೂ ಹೇಳ್ತಿರೋ ಮಾತು ಇದೆ. ಆದ್ರೆ. ಅಶ್ವಿನ್ ಪಾಯಿಂಟ್ ಆಫ್ ವ್ಯೂನಲ್ಲಿ ಮಾತ್ರ. ಈ ಬಗ್ಗೆ ಇಂಥಹ ಯೋಚನೇ ಇಲ್ಲ.

ಈ ಜಗತ್ತಿನಲ್ಲಿ ಯಾವುದೇ ಕ್ರಿಕೆಟಿಗನಾಗಲಿ, ಮನುಷ್ಯನಾಗಲಿ ಕಳಕ್ಕೆ ಕುಸಿಯದೇ, ಎತ್ತರಕ್ಕೆ ಬೆಳೆದಿಲ್ಲ. ನೀವು ಕುಸಿದಾಗ, ನಿಮಗೆ ಎರಡು ಆಯ್ಕೆ ನೀಡುತ್ತೆ. ಒಂದೂ ನೀವು ಆ ಬಗ್ಗೆ ಮಾತನಾಡುವುದು. ಇಲ್ಲ ಅದರಿಂದ ಕಲಿಯುವುದು. ನಾನು ನನ್ನ ತಪ್ಪುಗಳಿಂದ ನಿರಂತರ ಕಲಿಯುವವನು.

ಆರ್.ಅಶ್ವಿನ್, ಟೀಮ್ ಇಂಡಿಯಾ ಆಟಗಾರ

ಅಶ್ವಿನ್ ಮಾಡ್ರನ್ ಡೇ ಕ್ರಿಕೆಟ್​ನ ಲೆಜಂಡರಿ ಸ್ಪಿನ್ನರ್. ಸದ್ಯ 93ನೇ ಟೆಸ್ಟ್ ಪಂದ್ಯವನ್ನ ಆಡ್ತಾ ಇರೋ ಅಶ್ವಿನ್, ತಪ್ಪುಗಳಿಂದ ಪಾಠ ಕಲಿತು ಅತ್ಯದ್ಭುತ ಪ್ರದರ್ಶನವನ್ನೇ ಹೊರಗಾಕಿದವ್ರು.

ಅಶ್ವಿನ್​ಗೆ ಪ್ರೇರಣೆ ಆಯ್ತು ದ್ರಾವಿಡ್ರ ಒಂದು ಮಾತು.!

ಸಕ್ಸಸ್​ಫುಲ್​ ಬೌಲರ್ ಅಂತಾ ಕರಿಸಿಕೊಳ್ಳುವ ಅನುಭವಿ ಅಶ್ವಿನ್ ಕರಿಯರ್ ನೋಡಿದ್ರೆ, ನಿರಾಸೆ ಮೂಡಿಸೋ ಲೆಕ್ಕ ಇಲ್ಲದಷ್ಟು ಘಟನೆಗಳಿವೆ. ಇತ್ತಿಚೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ವೇಳೆ ತಂಡದಲ್ಲಿ ಸ್ಥಾನವೇ ಸಿಕ್ಕಿರಲಿಲ್ಲ. ಆದ್ರೆ, ಈ ಬಗ್ಗೆ ನಿರಾಸೆ ಅನ್ನೋದಿಲ್ಲ. ತಂಡದಿಂದ ಕೈಬಿಟ್ಟರೂ ಸಂತೋಷದಿಂದಲೇ ಇರ್ತಾರಂತೆ. ಇದಕ್ಕೆ ಪ್ರೇರಣೆ ರಾಹುಲ್ ದ್ರಾವಿಡ್​ರ ಮಾತು.

ದ್ರಾವಿಡ್ ಕೋಚ್ ಆದ ನಂತರ ಮೊದಲ ಬಾರಿ ಮೀಟ್ ಆಗಿದ್ದೆ. ಆಗ ಈ ಮಾತು ಹೇಳಿದ್ದರು. ನೀವು ಎಷ್ಟು ವಿಕೆಟ್ ಪಡೆದಿದ್ದೀರಿ, ಎಷ್ಟು ರನ್ ಗಳಿಸುತ್ತೀರಿ ಅನ್ನೋದನ್ನೆಲ್ಲ ಮರೆತುಬಿಡಿ. ಅವೆಲ್ಲ ಗ್ರೇಟ್ ಮೆಮೋರಿಸ್ ಮಾತ್ರ. ಆ ನೆನಪುಗಳು ನಿಮ್ಮೊಂದಿಗೆ ಇರುತ್ತಾವೆ. ನಾನು ಈಗ ಅದನ್ನೇ ಫಾಲೋ ಮಾಡ್ತೇನೆ. ದ್ರಾವಿಡ್ ನನ್ನ ಬ್ರೈನ್ ವಾಶ್ ಹೇಗೆ ಮಾಡಿದ್ರೋ ನನಗೆ ಗೊತ್ತಿಲ್ಲ. ನನ್ನ ಪ್ರಕಾರ, ನನ್ನ ಜರ್ನಿ ವೇಗವಾಗಿ ಸಾಗಿದೆ ಎಂದು ಖಂಡಿತ ಭಾವಿಸುತ್ತೇನೆ.

ಅಶ್ವಿನ್, ಟೀಮ್ ಇಂಡಿಯಾ ಆಟಗಾರ

ಈಗ ಅಶ್ವಿನ್ ತಲೆಯಲ್ಲಿರೋದು ಒಂದೇ ಟೀಮ್ ಇಂಡಿಯಾ ಪರ ಮೊಮೊರಿಗಳನ್ನ ಸೃಷ್ಟಿಸುವುದು. ಆ ಮೂಲಕ ಗೆಲುವುಗಳಲ್ಲಿ ತನ್ನನ್ನ ತಾನೂ ತೊಡಗಿಸಿಕೊಳ್ಳುವುದು. ಟೀಮ್ ಮ್ಯಾನ್ ಎನಿಸಿಕೊಳ್ತಾ ಮ್ಯಾಚ್ ವಿನ್ನರ್ ಆಗೋದು. ಕೋಚ್ ದ್ರಾವಿಡ್ ಮಾತಿನಂತೆ ಮೆಮೊರಿ ಕ್ರಿಯೇಟ್ ಮಾಡೋ ಹುಮ್ಮಸ್ಸೇ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಸಕ್ಸಸ್ ಹಿಂದಿನ ಸಿಕ್ರೇಟ್.

ಅದೇನೇ ಆಗಲಿ, ಕೋಚ್ ದ್ರಾವಿಡ್​ರ ಒಂದು ಮಾತಿನಿಂದ ಪ್ರೇರಣೆಗೊಂಡಿರೋ ಅಶ್ವಿನ್, ಟೀಮ್ ಇಂಡಿಯಾ ಪರ ಮತ್ತಷ್ಟು ಮೆಮೊರೀಸ್ ಕ್ರಿಯೇಟ್ ಮಾಡ್ಲಿ ಅನ್ನೋದೆ ಕ್ರಿಕೆಟ್ ಅಭಿಮಾನಿಗಳ ಅಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಾಹುಲ್​ ದ್ರಾವಿಡ್​ ಹೇಳಿದ ಆ ಮಾತುಗಳೇ ಅಶ್ವಿನ್​ ಸಾಧನೆಗೆ ಪ್ರೇರಣೆ.. ವಿಕೆಟ್ಸ್​, ರನ್ಸ್​ ಎಲ್ಲವೂ ಸುಂದರ ನೆನಪುಗಳು..!

https://newsfirstlive.com/wp-content/uploads/2023/07/DRAVID_R_ASHWIN.jpg

Load More