newsfirstkannada.com

ರೋಹಿತ್ ಶರ್ಮಾರ ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಇಬ್ಬರು ಆಟಗಾರರು ಇವರು.. ಒಬ್ಬರು ಕೊಹ್ಲಿ, ಇನ್ನೊಬ್ಬರು ಯಾರು?

Share :

14-07-2023

    ರೋಹಿತ್​ಗಾಗಿ ತನ್ನ ಸ್ಥಾನವನ್ನೇ ತ್ಯಾಗ ಮಾಡಿದ ಕಿಂಗ್ ಕೊಹ್ಲಿ..!

    ಆ ಒಂದು ನಿರ್ಧಾರ ಹಿಟ್​ಮ್ಯಾನ್ ಟೆಸ್ಟ್ ಲೈಫ್ ಬದಲಿಸಿದ್ದೇಗೆ..?

    ಇದೇ ವಿಚಾರಕ್ಕೆ ವಿರಾಟ್​ ಕೊಹ್ಲಿ ಎಲ್ಲರಿಗೂ ಇಷ್ಟವಾಗುವ ಕಿಂಗ್

ಒಂದು ಕಾಲವಿತ್ತು. ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್ ಶರ್ಮಾ ಕ್ರಿಕೆಟ್ ಲೈಫ್ ಮುಗಿದೇ ಹೋಗುವ ಆತಂಕದಲ್ಲಿತ್ತು. ಆಗ ಇಬ್ಬರು ಲೆಜೆಂಡ್ಸ್ ನೆರವಿಗೆ ಬಂದ್ರು. ಮುದುಡಿ ಹೋಗಬೇಕಿದ್ದ ರೋಹಿತ್ ಕ್ರಿಕೆಟ್ ಜೀವನ ಬೆಳಗಿತು. ಅದೆಷ್ಟರ ಮಟ್ಟಿಗೆ ಅಂದ್ರೆ ಬೆಂಚ್​ನಿಂದ ಕ್ಯಾಪ್ಟನ್ ಆಗುವ ಮಟ್ಟಿಗೆ ಬೆಳೆದು ನಿಂತರು. ಅಷ್ಟಕ್ಕೂ ಹಿಟ್​ಮ್ಯಾನ್​ ಸಕ್ಸಸ್ ಹಿಂದಿರೋ ಆ ಇಬ್ಬರು ದಿಗ್ಗಜರು ಆಟಗಾರರು ಯಾರು..?

ರೋಹಿತ್ ಶರ್ಮಾ ಡಬಲ್ ಸೆಂಚುರಿಗಳ ಸಾಮ್ರಾಟ. ಸದ್ಯ ಟೀಮ್ ಇಂಡಿಯಾದ ಮೋಸ್ಟ್ ಸೀನಿಯರ್ ಪ್ಲೇಯರ್. 2007 ರಲ್ಲಿ ಕ್ರಿಕೆಟ್ ಜರ್ನಿ ಆರಂಭಿಸಿದ್ರು. 16 ವರ್ಷಗಳ ಅವಧಿಯಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡು, ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ್ದಾರೆ. ಹಿಟ್​ಮ್ಯಾನ್​ ಇಂದು ಈ ಮಟ್ಟಕ್ಕೆ ಬೆಳೆಯಬೇಕಾದ್ರೆ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಪಾತ್ರ ದೊಡ್ಡದಿದೆ.

ಆರಂಭದಲ್ಲಿ ಮಿಸ್ಟಲ್ ಕೂಲ್ ಧೋನಿ ರೋಹಿತ್ ಶರ್ಮಾಗೆ ಹೆಚ್ಚು ಅವಕಾಶಗಳನ್ನ ನೀಡಿದ್ರು. ನಂತರ ನಾಯಕರಾಗಿದ್ದ ಕಿಂಗ್ ಕೊಹ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಕಲ್ಪಿಸಿದ್ರು. ಪರಿಣಾಮ ಬೆಂಚ್​ಗೆ ಸೀಮಿತವಾಗಿದ್ದ ಮುಂಬೈಕರ್, ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿ ಹೊಸ ಭಾಷ್ಯ ಬರೆದರು.

ಡೆಬ್ಯು ಮಾಡಿದ್ದ ರೋಹಿತ್ ಬೆಂಚ್ ಕಾದಿದ್ದೆ ಹೆಚ್ಚು

2013 ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಡೆಬ್ಯು ಮಾಡಿದ್ದ ರೋಹಿತ್ ಆರಂಭದಲ್ಲಿ ಆಡಿದ್ದಕ್ಕಿಂತ ಬೆಂಚ್ ಕಾದಿದ್ದೆ ಹೆಚ್ಚು. ಹೆಸರಿಗೆ ಆಗೊಂದು, ಈಗೊಂದು ಚಾನ್ಸ್ ಇರುತ್ತಿತ್ತು. ಫಿಕ್ಸ್ ಸ್ಲಾಟ್ ಅನ್ನೋದೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ನಾಯಕರಾಗಿದ್ದ ವಿರಾಟ್ ಕೊಹ್ಲಿ, ರೋಹಿತ್​ಗಾಗಿ ಒಂದು ಕಠಿಣ ನಿರ್ಧಾರ ತೆಗೆದುಕೊಳ್ತಾರೆ. ಇದುವೇ ಹಿಟ್​ಮ್ಯಾನ್​ ಬಿಗ್ ದೊಡ್ಡ ಟರ್ನಿಂಗ್ ಪಾಯಿಂಟ್ ಆಗುತ್ತೆ.

ಸದಾ ತಂಡದ ಒಳಿತನ್ನ ಬಯಸುವ ಕಿಂಗ್ ಕೊಹ್ಲಿ 2016 ರಲ್ಲಿ ರೋಹಿತ್​ಗಾಗಿ ತಮ್ಮ ಸ್ಲಾಟ್ ಅನ್ನ ತ್ಯಾಗ ಮಾಡಿದ್ರು. ವೆಸ್ಟ್ಇಂಡೀಸ್ ಎದುರು ಆಡುವ ಹನ್ನೊಂದರ ಬಳಗದಲ್ಲಿ ಚೇತೇಶ್ವರ್ ಪೂಜಾರರನ್ನ ಹೊರಗಿಟ್ಟು ರೋಹಿತ್​ಗೆ ಮಣೆ ಹಾಕ್ತಾರೆ. ಆಗ 4ನೇ ಕ್ರಮಾಂಕದಲ್ಲಿ ಆಡಬೇಕಿದ್ದ ಕೊಹ್ಲಿ 3ನೇ ಸ್ಥಾನದಲ್ಲಿ ಕಣಕ್ಕಿಳಿದ್ರು. ರಹಾನೆ 4 ರಲ್ಲಿ ಆಡಿದ್ರೆ ರೋಹಿತ್ ಶರ್ಮಾ 5ನೇ ಸ್ಲಾಟ್ ನಲ್ಲಿ ಆಡಲು ಚಾನ್ಸ್ ನೀಡಿ ತ್ಯಾಗಮಯಿ ಅನ್ನಿಸಿಕೊಳ್ತಾರೆ.

ರೋಹಿತ್ ಶರ್ಮಾ ಗೇಮ್ ಚೇಂಜರ್’

ಚೇತೇಶ್ವರ್ ಪೂಜಾರ ಅವರ ಬದಲು ರೋಹಿತ್ ಶರ್ಮಾ ಆಡುತ್ತಾರೆ. ಯಾಕಂದ್ರೆ ರೋಹಿತ್ ತುಂಬಾ ಚೆನ್ನಾಗಿ ಆಡುತ್ತಾರೆ. ಒಂದು ಸೆಷನ್ನಲ್ಲಿ ಟೆಸ್ಟ್ ಪಂದ್ಯದ ಗತಿಯನ್ನ ಬದಲಿಸಬಲ್ಲರು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಆಡಲು ಅವಕಾಶ ನೀಡಬೇಕು.

ವಿರಾಟ್ ಕೊಹ್ಲಿ, ಮಾಜಿ ನಾಯಕ

2019 ರಲ್ಲಿ ಓಪನರ್ ಆಗಿ ಹಿಟ್​ಮ್ಯಾನ್​ಗೆ ಬಡ್ತಿ..!

ಕ್ಯಾಪ್ಟನ್ ಕೊಹ್ಲಿ, ರೋಹಿತ್​ಗೆ ಟೆಸ್ಟ್ ತಂಡದಲ್ಲಿ ಆಡಲು ಅವಕಾಶ ನೀಡಿ ಸುಮ್ಮನಾಗಲಿಲ್ಲ. 2019 ರಲ್ಲಿ ಇದೇ ಹಿಟ್​ಮ್ಯಾನ್​ಗೆ ಓಪನರ್ ಆಗಿ ಬಡ್ತಿ ನೀಡ್ತಾರೆ ಅಷ್ಟೇ. ಬಳಿಕ ಡಬಲ್ ಸೆಂಚುರಿ ಸ್ಪೆಶಲಿಸ್ಟ್ ಹಿಂತಿರುಗಿ ನೋಡಿದ್ದೇ ಇಲ್ಲ. ಆರಂಭಿಕನಾಗಿ ಅಬ್ಬರಿಸಿ ಖಾಯಂ ಸ್ಥಾನ ಉಳಿಸಿಕೊಂಡ್ರು.

ಟೆಸ್ಟ್​ನಲ್ಲಿ ಆರಂಭಿಕನಾಗಿ ರೋಹಿತ್ ಸಾಧನೆ..!

ಆರಂಭಿಕನಾಗಿ ಒಟ್ಟು 39 ಇನ್ನಿಂಗ್ಸ್​ಗಳಲ್ಲಿ ಆಡಿರೋ ರೋಹಿತ್ ಶರ್ಮಾ 52.28 ರ ಎವರೇಜ್​ನಲ್ಲಿ 1,882 ರನ್ ಬಾರಿಸಿದ್ದಾರೆ. ಇದರಲ್ಲಿ 6 ಅಮೋಘ ಶತಕ ಹಾಗೂ 4 ಅರ್ಧಶತಕ ಸೇರಿಕೊಂಡಿವೆ. ಎನಿವೇ ಕಿಂಗ್ ಕೊಹ್ಲಿ ಅಂದು ತೆಗೆದುಕೊಂಡು ಒಂದು ನಿರ್ಧಾರ ರೋಹಿತ್ ಶರ್ಮಾರ ಟೆಸ್ಟ್ ಲೈಫನ್ನೇ ಬದಲಿಸಿದ್ದು ಸುಳ್ಳಲ್ಲ. ಇದೇ ವಿಚಾರಕ್ಕೆ ಕಿಂಗ್ ಕೊಹ್ಲಿ ಎಲ್ಲರಿಗೂ ಇಷ್ಟವಾಗೋದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್ ಶರ್ಮಾರ ಕ್ರಿಕೆಟ್​ ದಿಕ್ಕನ್ನೇ ಬದಲಿಸಿದ ಇಬ್ಬರು ಆಟಗಾರರು ಇವರು.. ಒಬ್ಬರು ಕೊಹ್ಲಿ, ಇನ್ನೊಬ್ಬರು ಯಾರು?

https://newsfirstlive.com/wp-content/uploads/2023/07/ROHIT_SHARMA_VIRAT.jpg

Load More