newsfirstkannada.com

ಕೆರಿಬಿಯನ್​ ವಿರುದ್ಧ ನೆಲ ಕಚ್ಚಿದ ಯಂಗ್​​ಸ್ಟರ್ಸ್.. ಭಾರತದ ಸೋಲಿಗೆ ಬ್ಯಾಟಿಂಗ್​ ಕಾರಣವೇ..?

Share :

07-08-2023

    10ರ ಗಡಿ ದಾಟದ ಗಿಲ್​, ಸೂರ್ಯ, ಸಂಜು ಸ್ಯಾಮ್ಸನ್​ ಬ್ಯಾಟಿಂಗ್

    ಕಳಪೆ ಪ್ರದರ್ಶನ ನೀಡಿದ ಭಾರತದ ಆಟಗಾರರು, ವಿಂಡೀಸ್​ ವಿನ್

    2ನೇ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ನಡೆಸಿದ ತಿಲಕ್​ ವರ್ಮಾ.!

ಟಿ20 ಸ್ಪೆಷಲಿಸ್ಟ್​ಗಳ ಎದುರು 2ನೇ ಪಂದ್ಯದಲ್ಲೂ ಐಪಿಎಲ್​ ಸ್ಟಾರ್ಸ್​ ಮಕಾಡೆ ಮಲಗಿದ್ದಾರೆ. ಮಾಡಿದ ಯಾವ ತಪ್ಪನ್ನ ತಿದ್ದಿಕೊಳ್ಳದ ಟೀಮ್​ ಇಂಡಿಯಾ ಯಂಗ್​​ಸ್ಟರ್ಸ್​​ ಮತ್ತೆ ಸೋಲಿಗೆ ಶರಣಾಗಿದ್ದಾರೆ. ಅಷ್ಟಕ್ಕೂ ಪಾಂಡ್ಯ ಪಡೆ ಮಾಡಿದ ಪ್ರಮಾದವೇನು?.

ಟೀಮ್​ ಇಂಡಿಯಾದ ಭವಿಷ್ಯದ ಬ್ಯಾಟ್ಸ್​ಮನ್​ಗಳು ಅನಿಸಿಕೊಂಡಿರೋ ಯಂಗ್​​ಸ್ಟರ್​ಗಳು ತಪ್ಪಿನಿಂದ ಪಾಠ ಕಲಿಯೋ ಗೋಜಿಗೆ ಹೋಗ್ತಿಲ್ಲ. ಮೊದಲ ಟಿ20ಯಲ್ಲಿ ಏನ್​ ತಪ್ಪು ಮಾಡಿದ್ರೋ ಅದೇ ತಪ್ಪುಗಳನ್ನ 2ನೇ ಪಂದ್ಯದಲ್ಲೂ ಮಾಡಿದ್ರು. ಹೋದ ಪುಟ್ಟ ಬಂದ ಪುಟ್ಟ ಎಂಬ ಮಾತಿನಂತೆ ಪೆವಿಲಿಯನ್​ ಪರೇಡ್​ ನಡೆಸಿದ್ರು..

ಇಶನ್ ಕಿಶನ್ ಮತ್ತು ಗಿಲ್ ಬ್ಯಾಟಿಂಗ್

ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳ ಪ್ಲಾಫ್​ ಶೋ.!

ಟಾಸ್​ ಗೆದ್ದು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲೇ ಮುಗ್ಗರಿಸಿತು. ಶುಭ್​ಮನ್​ ಗಿಲ್​, ಸೂರ್ಯಕುಮಾರ್​ ಯಾದವ್​ ಕಣಕ್ಕಿಳಿದಷ್ಟೇ ವೇಗವಾಗಿ ಸೈಲೆಂಟಾಗಿ ಪೆವಿಲಿಯನ್​ ಸೇರಿಕೊಂಡ್ರು. ತಾಳ್ಮೆಯ ಆಟವಾಡಿ 2 ಬೌಂಡರಿ, 2 ಸಿಕ್ಸರ್​ ಸಿಡಿಸಿದ ಇಶಾನ್​ ಕಿಶನ್​ ತಂಡಕ್ಕೆ ಆಸರೆಯಾದ್ರು.

ಹಾಫ್​ ಸೆಂಚುರಿ ಸಿಡಿಸಿ ಘರ್ಜಿಸಿದ ತಿಲಕ್​ ವರ್ಮಾ.!

ಇಶಾನ್​ ಕಿಶನ್​ ಹೋರಾಟ 27 ರನ್​ಗಳಿಗೆ ಅಂತ್ಯವಾಯ್ತು. ಆ ಬಳಿಕ ಕಣಕ್ಕಿಳಿದ ಸಂಜು ಸ್ಯಾಮ್ಸನ್​ ಬೇಜವಾಬ್ದಾರಿಯುತ ರೀತಿಯಲ್ಲಿ ವಿಕೆಟ್​ ಒಪ್ಪಿಸಿದ್ರು. ಅನುಭವಿ ಆಟಗಾರರು ಪೆವಿಲಿಯನ್​ ಪರೇಡ್​ ನಡೆಸ್ತಾ ಇದ್ರೆ, 2ನೇ ಅಂತರಾಷ್ಟ್ರೀಯ ಪಂದ್ಯವನ್ನಾಡ್ತಿರೋ ತಿಲಕ್​ ವರ್ಮಾ ಘರ್ಜಿಸಿದ್ರು. ಅರ್ಧಶತಕದ ಆಟವಾಡಿ ತಂಡಕ್ಕೆ ನೆರವಾದ್ರು.

ತಿಲಕ್​ ವರ್ಮಾ 51 ರನ್​ಗಳಿಸಿ ಔಟಾದ್ರೆ, ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ 24 ರನ್​ಗಳ ಕಾಣಿಕೆ ನೀಡಿದ್ರು. ಅಂತಿಮ ಹಂತದಲ್ಲಿ ಅಕ್ಷರ್​ ಪಟೇಲ್​, ರವಿ ಬಿಷ್ನೋಯ್​ ಹಾಗೂ ಆರ್ಷ್​​ದೀಪ್​ ನೀಡಿದ ಅಲ್ಪ ರನ್​ಗಳ ನೆರವಿನಿಂದ ಟೀಮ್​ ಇಂಡಿಯಾ 152 ರನ್​ಗಳಿಸಿತು.

ವಿಂಡೀಸ್​ಗೆ ಶಾಕ್​ ಕೊಟ್ಟ ಹಾರ್ದಿಕ್​ ಪಾಂಡ್ಯ.!

152 ರನ್​ಗಳ ಸಾಧಾರಣ ಟಾರ್ಗೆಟ್​ ಬೆನ್ನತ್ತಿದ ವೆಸ್ಟ್​ ಇಂಡೀಸ್​ ತಂಡ ಆರಂಭದಲ್ಲೇ ಯಡವಟ್ಟು ಮಾಡಿಕೊಳ್ತು. ಆರಂಭಿಕರಿಬ್ಬರಿಗೂ ಬಹುಬೇಗನೆ ಪೆವಿಲಿಯನ್​ ದಾರಿ ತೋರಿಸುವಲ್ಲಿ ಹಾರ್ದಿಕ್​ ಪಾಂಡ್ಯ ಯಶಸ್ವಿಯಾದ್ರು. ಇಷ್ಟೇ ಅಲ್ಲ.. ಸ್ಫೋಟಕ ಆಟದ ಮುನ್ಸೂಚನೆ ನೀಡಿದ ಕೈಲ್​ ಮೆಯರ್ಸ್​ಗೆ ಆರ್ಷ್​ದೀಪ್​ ಬ್ರೇಕ್​​ ಹಾಕಿ ಆರಂಭಿಕ ಯಶಸ್ಸು ತಂದುಕೊಟ್ರು..

ತಿಲಕ್ ವರ್ಮಾ

ಪೂರನ್​ ರಣಾರ್ಭಟ, ಬೌಲರ್ಸ್​​ ತತ್ತರ.!

ಆದ್ರೆ, 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೊಲಸ್​ ಪೂರನ್​ ಸ್ಫೋಟಕ ಆಟವಾಡಿದ್ರು. ಪೂರನ್​ ಆಟಕ್ಕೆ ರೋವ್​ಮನ್​ ಪೊವೆಲ್​ ಸಖತ್​ ಸಾಥ್​ ನೀಡಿದ್ರು. ಬೌಂಡರಿ- ಸಿಕ್ಸರ್​ ಬಾರಿಸಿ ಆರ್ಭಟಿಸಿದ ಪೂರನ್​​, ಅಬ್ಬರದ ಅರ್ಧಶತಕ ಸಿಡಿಸಿದ್ರು.

ಪೂವೆಲ್​ 21 ರನ್​ಗಳಿಸಿ ನಿರ್ಗಮಿಸಿದ್ರೆ, 67 ರನ್​ಗಳಿಗೆ ಪೂರನ್​​ ಆಟ ಅಂತ್ಯವಾಯ್ತು. ಅದ್ರ ಬೆನ್ನಲ್ಲೇ ರೊಮಾರಿಯೋ ಶೆಫರ್ಡ್​​, ಜೇಸನ್​ ಹೋಲ್ಡರ್​ ಡಕೌಟ್​ ಆದ್ರು. ಇದ್ರ ಪಂದ್ಯಕ್ಕೆ ಟ್ವಿಸ್ಟ್​ ಸಿಕ್ತು. ಆದ್ರೆ, ದಿಟ್ಟ ಹೋರಾಟ ನಡೆಸಿದ ಅಕೈಲ್​ ಹುಸೇನ್, ಅಲ್ಜಾರಿ ಜೋಸೇಫ್​​ ವಿಂಡೀಸ್​ ಪಡೆ 7 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಮುಟ್ಟಿಸಿದ್ರು. ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೆರಿಬಿಯನ್​ ವಿರುದ್ಧ ನೆಲ ಕಚ್ಚಿದ ಯಂಗ್​​ಸ್ಟರ್ಸ್.. ಭಾರತದ ಸೋಲಿಗೆ ಬ್ಯಾಟಿಂಗ್​ ಕಾರಣವೇ..?

https://newsfirstlive.com/wp-content/uploads/2023/08/TILAK_VARMA-2.jpg

Load More