newsfirstkannada.com

IND vs WI: ವಿಂಡೀಸ್​​ಗೆ ಟಕ್ಕರ್ ಕೊಡಲು ಪಾಂಡ್ಯ ಪಡೆ ರೆಡಿ.. ಗಯಾನದಲ್ಲಿ ಗೆಲ್ಲುತ್ತಾ ಟೀಮ್​ ಇಂಡಿಯಾ.?

Share :

06-08-2023

  ಗಯಾನದ ಸ್ಟೇಡಿಯಂ ಬೌಲರ್​ಗಳಿಗೆ ಹೆಚ್ಚು ಅನುಕೂಲ

  ಸೇಮ್ ಕಾಂಬಿನೇಷನ್​ನಲ್ಲೇ ಕಣಕ್ಕಿಳಿಯುತ್ತಾ ಭಾರತ?

  ವಿಂಡೀಸ್​ ಕಟ್ಟಿ ಹಾಕಲು ತಂಡದಲ್ಲಿ ಬದಲಾವಣೆ ಸಾಧ್ಯತೆ

ಮೊದಲ T20ಯಲ್ಲಿ ಸೋತ ಟೀಮ್ ಇಂಡಿಯಾ, ಈಗ 2ನೇ ಚುಟುಕು ಸಮರದಲ್ಲಿ ವಿಂಡೀಸ್​​ಗೆ ಟಕ್ಕರ್ ನೀಡೋಕೆ ರೆಡಿಯಾಗಿದೆ. ಗೆಲ್ಲೋ ಪಂದ್ಯವನ್ನ ಕೈಯಾರೆ ಚೆಲ್ಲಿದ ಟೀಮ್ ಇಂಡಿಯಾ, ತನ್ನ ಹಳೆಯ ತಪ್ಪುಗಳನ್ನ ತಿದ್ದಿಕೊಂಡು ಗಯಾನದಲ್ಲಿ ಗೆಲುವಿನ ಕಹಳೆ ಮೊಳಗಿಸುವ ಉತ್ಸಾಹದಲ್ಲಿದೆ. ಹಾಗಾದ್ರೆ, ಇಂದಿನ ಟಿ20 ಗೇಮ್​ನಲ್ಲಿ ಅಪಾಯಕಾರಿ ವಿಂಡೀಸ್​ಗೆ ಶಾಕ್ ನೀಡುತ್ತಾ ಭಾರತ..?

ವೆಸ್ಟ್​ ಇಂಡೀಸ್​​ ವಿರುದ್ಧದ ಮೊದಲ ಟಿ20 ಗೆಲ್ಲುವಲ್ಲಿ ವಿಫಲವಾದ ಟೀಮ್ ಇಂಡಿಯಾ, ಗಯಾನದಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಗೆಲುವಿನ ಉತ್ಸಾಹದಲ್ಲಿರೋ ವೆಸ್ಟ್ ಇಂಡೀಸ್​ ಮತ್ತೊಂದು ಗೆಲುವಿನ ಕನಸಿನಲ್ಲಿದೆ. ಮೊದಲ ಪಂದ್ಯದ ತಪ್ಪುಗಳಿಂದ ಪಾಠ ಕಲಿತಿರುವ ಟೀಮ್ ಇಂಡಿಯಾ ಪುಟಿದೇಳುವ ಲೆಕ್ಕಚಾರದಲ್ಲಿದೆ. ಆದ್ರೆ, ಇದೆಲ್ಲವು ಗಯಾನ ಪ್ರಾವಿಡೆನ್ಸ್​ನಲ್ಲಿ ಸುಲಭದ ಮಾತಲ್ಲ.

ಇಶನ್ ಕಿಶನ್ ಮತ್ತು ಶುಭ್​ಮನ್ ಗಿಲ್

ಬದಲಾಗಬೇಕು ಟಾಪ್ ಆರ್ಡರ್​ನ ಬ್ಯಾಟಿಂಗ್ ಅಪ್ರೋಚ್​..!

ಟ್ರಿನಿಡಾಡ್​​ನ ಕಠಿಣ ಪಿಚ್​ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಓಪನರ್ಸ್​. ಪವರ್ ಪ್ಲೇನಲ್ಲಿ ಪವರ್​ ಫುಲ್ ಬ್ಯಾಟಿಂಗ್ ನಡೆಸದ ಓಪನರ್​​​ಗಳು ಬಿಗ್ ಇನ್ನಿಂಗ್ಸ್​ ಆಡಲೇ ಇಲ್ಲ. ಟಿ20ಯಲ್ಲಿ ಟೆಸ್ಟ್​ ಮಾದರಿ ಬ್ಯಾಟಿಂಗ್ ನಡೆಸಿದ ಶುಭಮನ್​ ಗಿಲ್​​​, ಇಶಾನ್ ಕಿಶನ್ ಒಂದಂಕಿ ರನ್​ ದಾಟುವಲ್ಲಿ ಪರದಾಡಿದ್ರು. ಆದ್ರೆ, ಇವತ್ತಿನ ಪಂದ್ಯದಲ್ಲಿ ಇದು ಕಂಪ್ಲೀಟ್ ಬದಲಾಗಬೇಕಿದೆ. ಅಟ್ಯಾಕಿಂಗ್ ಬ್ಯಾಟಿಂಗ್ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಮೊರೆ ಹೋಗಬೇಕಿದೆ.

ಜವಾಬ್ದಾರಿ ಅರಿತು ಅಡಬೇಕಿದೆ ಮಿಡಲ್ ಆರ್ಡರ್​..!

ಮೊದಲ ಪಂದ್ಯದ ಸೋಲಿಗೆ ಟಾಪ್ ಅರ್ಡರ್​ ಮಾತ್ರವೇ ಕಾರಣವಲ್ಲ. ಮಿಡಲ್ ಆರ್ಡರ್ ಕೂಡ ಮೇನ್ ರೀಸನ್​ ಅನ್ನೋದು ಬಿಡಿಸಿ ಹೇಳಬೇಕಿಲ್ಲ. ಡೆಬ್ಯೂ ಸ್ಟಾರ್​ ತಿಲಕ್ ವರ್ಮ ಹೊರತು ಪಡೆಸಿದ್ರೆ. ಉಳಿದೆಲ್ಲರೂ ಆಗಿದ್ದು ಫ್ಲಾಫ್.

ಮೋಸ್ಟ್​ ಇಂಪಾರ್ಟೆಂಟ್ಲಿ ಟಿ20 ನಂಬರ್​​ ವೀರ ಸೂರ್ಯ, ಇವತ್ತು ಪ್ರತಾಪ ತೋರಿಸಬೇಕಿದೆ. ಅದಕ್ಕಿಂತ ಮಿಗಿಲಾಗಿ ನಾಯಕ ಹಾರ್ದಿಕ್ ನಾಯಕತ್ವದ ಆಟ ಆಡಬೇಕಿದೆ. ಇಲ್ದಿದ್ರೆ, ಗಯಾನದ 2ನೇ ಟಿ20 ಪಂದ್ಯದಲ್ಲೂ ಗೆಲ್ಲೋದು ಕಷ್ಟ ಸಾಧ್ಯವೇ ಆಗಿದೆ.

ಬೌಲರ್​ಗಳಿಂದ ಬರಬೇಕು ಸೇಮ್ ಪರ್ಫಾಮೆನ್ಸ್..!

ಟ್ರಿನಿಡಾಡ್​​ನ ಕಂಡೀಷನ್ಸ್​ನ ಸರಿಯಾಗಿ ಬಳಸಿಕೊಂಡ ಬೌಲರ್​ಗಳು, ಟಿ20 ದೈತ್ಯರನ್ನ ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು. ಮಿಡಲ್ ಓವರ್​ಗಳಲ್ಲಿ ಸ್ಪಿನ್ನರ್​ಗಳು ಜಾದೂ ಮಾಡಿದ್ರೆ. ಡೆತ್​ ಓವರ್​ಗಳಲ್ಲಿ ಪೇಸರ್​ಗಳು, ವಿಂಡೀಸ್​​ ಬ್ಯಾಟರ್​ಗಳಿಗೆ ಸಿಂಹಸ್ವಪ್ನವೇ ಆಗಿದ್ದರು. ಹೀಗಾಗಿ ಇಂದಿನ ಪಂದ್ಯಲ್ಲೂ ಇಂಥದ್ದೇ ಪರ್ಫಾಮೆನ್ಸ್ ನಿರೀಕ್ಷಿಸಲಾಗ್ತಿದೆ.

ವಿಂಡೀಸ್​ ಪ್ಲೇಯರ್​ ಔಟ್​ ಆದಾಗ ಭಾರತದ ಆಟಗಾರರ ಸಂಭ್ರಮ

ಗಯಾನದಲ್ಲೂ ಗೆಲ್ಲೋದು ಸುಲಭದ ಮಾತಲ್ಲ..!

ಗಯಾನ ಪ್ರಾವಿಡೆನ್ಸ್ ಪಿಚ್ ಟ್ರಿನಿಡಾಡ್​​ನ ಕಂಡೀಷನ್ಸ್​ನಷ್ಟೇ ಟ್ವಿಸ್ಟ್​ನಿಂದ ಕೂಡಿದೆ. ಆರಂಭದಲ್ಲಿ ಸ್ವಿಂಗ್ ಬೌಲರ್​ಗಳು ಮೆರೆದಾಡಿದ್ರೆ, ಪಂದ್ಯ ಸಾಗಿದಂತೆ ಸ್ಪಿನ್ನರ್​ಗಳು ಮೇಲುಗೈ ಸಾಧಿಸ್ತಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಬೀಸೋದು ಕಬ್ಬಿಣದ ಕಡಲೆಯಾಗಿದೆ. ಈ ಪಿಚ್ ಲೋಸ್ಕೋರಿಂಗ್ ಆಗಿದ್ದು, ಚೇಸಿಂಗ್​​​ ಉತ್ತಮ ಆಯ್ಕೆ ಎನಿಸಿದೆ. ಹೀಗಾಗಿ ಟಾಸ್ ನಿರ್ಣಯಕವಾಗಿದೆ. ​​​​​​​​​​​​​​​​

ಇಲ್ಲ ತಂಡದಲ್ಲಿ ಮಾಡುತ್ತಾ ಒಂದು ಬದಲಾವಣೆ..?

ಬೌಲರ್​ಗಳಿಗೆ ನೆರವಾಗೋ ಈ ಪಿಚ್​ನಲ್ಲಿ ಟೀಮ್ ಇಂಡಿಯಾ ಬದಲಾವಣೆಯ ಮೊರೆ ಹೋಗಬೇಕಿದೆ. ಪ್ರಮುಖವಾಗಿ ಅಕ್ಷರ್ ಪಟೇಲ್ ಬದಲಿಗೆ ಓರ್ವ ಸ್ಪೆಷಲಿಸ್ಟ್​ ಬ್ಯಾಟರ್​​ ಬೇಕಾಗಿದೆ. ಹೀಗಾಗಿ ಒಂದು ಬದಲಾವಣೆ ಮಾಡುವ ಅನಿವಾರ್ಯತೆ ಇದ್ದೇ ಇದೆ. ಆದ್ರೆ, ಟೀಮ್ ಮ್ಯಾನೇಜ್​ಮೆಂಟ್, ಇಂಥಹ ನಿರ್ಧಾರಕ್ಕೆ ಕೈಹಾಕುತ್ತಾ ಅನ್ನೋದು ಕಾದುನೋಡಬೇಕಿದೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs WI: ವಿಂಡೀಸ್​​ಗೆ ಟಕ್ಕರ್ ಕೊಡಲು ಪಾಂಡ್ಯ ಪಡೆ ರೆಡಿ.. ಗಯಾನದಲ್ಲಿ ಗೆಲ್ಲುತ್ತಾ ಟೀಮ್​ ಇಂಡಿಯಾ.?

https://newsfirstlive.com/wp-content/uploads/2023/07/ISHAN_KISHAN_HARDIK_PANDYA.jpg

Load More