500ನೇ ಪಂದ್ಯದಲ್ಲಿ 21ನೇ ಎಸೆತಕ್ಕೆ ಮೊದಲ ರನ್ ಗಳಿಸಿದ ಕೊಹ್ಲಿ
ಅವಿಸ್ಮರಣೀಯ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಶತಕದ ಹಾದಿ.!
ಮೊದಲ ದಿನದಾಟದಲ್ಲಿ ಬೊಂಬಾಟ್ ಆಟ ಆಡಿದ ವಿರಾಟ್ ಕೊಹ್ಲಿ
500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡ್ತಿರೋ ಕಿಂಗ್ ಕೊಹ್ಲಿ ಅವಿಸ್ಮರಣೀಯ ಸಾಧನೆ ಮಾಡೋ ಹೊಸ್ತಿಲಲ್ಲಿದ್ದಾರೆ. ಜಸ್ಟ್ 13 ರನ್ ಸಿಡಿಸಿದ್ರೆ, ಬರೋಬ್ಬರಿ 1678 ದಿನಗಳ ಇಂದೇ ಬ್ರೇಕ್ ಬೀಳಲಿದೆ. 2ನೇ ಟೆಸ್ಟ್ನ ಮೊದಲ ದಿನದಾಟದಲ್ಲಿ ಕೊಹ್ಲಿ 2.O ದರ್ಶನವೂ ಆಗಿದೆ. ಟ್ರಿನಿಡಾಡ್ನಲ್ಲಿ ಕೊಹ್ಲಿಯ ಬೊಂಬಾಟ್ ಆಟ ಹೇಗಿತ್ತು..?
ವಿಂಡೀಸ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಕಣಕ್ಕಿಳಿಯೋದ್ರೊಂದಿಗೆ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, 500ನೇ ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಸಾಧನೆ ಮಾಡಿದ್ರು. ಈ ಮೂಲಕ ಭಾರತೀಯ ಕ್ರಿಕೆಟ್ ಕಂಡ ದಿಗ್ಗಜ ಆಟಗಾರರ ಪಟ್ಟಿಗೆ ಸೇರ್ಪಡೆಯಾದರು.
1,678 ದಿನಗಳ ಕೊರಗಿಗೆ ಇಂದೇ ಬ್ರೇಕ್..?
ಕೊಹ್ಲಿಯ ಕರಿಯರ್ನಲ್ಲಿ ಕಳೆದ ಕೆಲ ವರ್ಷಗಳಿಂದ ಡೌನ್ಫಾಲ್ ಶುರುವಾಗಿದೆ. ಫಾರ್ಮ್ ಸಮಸ್ಯೆ, ಶತಕದ ಬರ, ಸಾಲು ಸಾಲು ಟೀಕೆಗಳು. ಕೊಹ್ಲಿ ಸುತ್ತ ಗಿರಕಿ ಹೊಡೆದಿವೆ. ಈಗ ಫಾರ್ಮ್ಗೆ ಬಂದಾಗಿದೆ. ಶತಕದ ಬರಕ್ಕೂ ಬ್ರೇಕ್ ಹಾಕಿ ಆಗಿದೆ. ಆದ್ರೆ, ವಿದೇಶದಲ್ಲಿ ಸೆಂಚೂರಿ ಸಿಡಿಸಿಲ್ಲ ಅನ್ನೋ ಕೊರಗು ಬರೋಬ್ಬರಿ 1,678 ದಿನದಿಂದ ಕಾಡ್ತಿದೆ. ಅದಕ್ಕೆ ಇಂದೇ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ.
500ನೇ ಪಂದ್ಯದಲ್ಲಿ ವಿರಾಟ್ 2.O ದರ್ಶನ.!
ಈ ಹಿಂದಿನ 499 ಪಂದ್ಯಗಳಲ್ಲಿ ಕಂಡ ಕೊಹ್ಲಿಯೇ ಬೇರೆ ನಿನ್ನೆಯ ದಿನದಾಟದಲ್ಲಿ ಕಂಡ ಕೊಹ್ಲಿಯೇ ಬೇರೆ. ಅಗ್ರೆಸ್ಸಿವ್ ಆ್ಯಟಿಟ್ಯೂಡ್ನ ಕಿಂಗ್ ಕೊಹ್ಲಿ ಕಂಪ್ಲೀಟ್ ಮಾಯವಾಗಿದರು. ಮೈದಾನಕ್ಕಿಳಿದ ಆರಂಭದಿಂದ ದಿನದಾಟದ ಅಂತ್ಯವರೆಗೂ ತಾಳ್ಮೆಯ ಮಂತ್ರ ಪಠಿಸಿದರು.
21ನೇ ಎಸೆತಕ್ಕೆ ಮೊದಲ ರನ್..!
ಅಚ್ಚರಿಯಾದ್ರು ಇದೇ ಸತ್ಯ. ಪಂದ್ಯದಲ್ಲಿ ಶುಭ್ಮನ್ ಗಿಲ್ ನಿರ್ಗಮನದ ಬಳಿಕ ರಾಜಗಾಂಭಿರ್ಯದಲ್ಲಿ ಕಣಕ್ಕಿಳಿದ ಕೊಹ್ಲಿ, ಮೊದಲ ರನ್ಗಳಿಸಿದ್ದು ಬರೋಬ್ಬರಿ 21ನೇ ಎಸೆತಕ್ಕೆ. ಒಳ್ಳೆಯ ಎಸೆತಗಳನ್ನ ರೆಸ್ಪೆಕ್ಟ್ ಮಾಡಿದ ಕೊಹ್ಲಿ, ಒಂದೇ ಒಂದು ಅನಗತ್ಯ ಶಾಟ್ ಬಾರಿಸೋಕೆ ಕೈ ಹಾಕಲಿಲ್ಲ. 21ನೇ ಎಸೆತದಲ್ಲಿ ಪರ್ಫೆಕ್ಟ್ ಸ್ಟೈಟ್ ಡ್ರೈವ್ ಬಾರಿಸಿದ ಕೊಹ್ಲಿ, ಬೌಂಡರಿ ಮೂಲಕ ಮೊದಲ ರನ್ಗಳಿಸಿದರು.
ಮನಮೋಹಕ ಕವರ್ ಡ್ರೈವ್, ಖಾತೆಗೆ 2ನೇ ಬೌಂಡರಿ.!
ಕವರ್ ಡ್ರೈವ್ ಕೊಹ್ಲಿಗೆ ಪಂಚಪ್ರಾಣ. ಆದ್ರೆ, ಇತ್ತೀಚೆಗೆ ಅದೇ ವೀಕ್ನೆಸ್ ಆಗಿ ಬದಲಾಗಿದ್ರಿಂದ ಕೊಹ್ಲಿ, ರಿಸ್ಕ್ ತೆಗೆದುಕೊಳ್ಳೋಕೆ ಹಿಂಜರಿತಾ ಇದಾರೆ. ನಿನ್ನೆಯ ದಿನದಾಟದಲ್ಲೂ ವಿರಾಟ್, ಪೇಶನ್ಸ್ನಿಂದ ಸುಮ್ಮನಿದ್ರು. ಆದ್ರೆ, ಮನಸ್ಸು ತಡೀಬೇಕಲ್ಲ. 45.2ನೇ ಓವರ್ನಲ್ಲಿ ಮನಮೋಹಕ ಬೌಂಡರಿ ಬಾರಿಸೇ ಬಿಟ್ರು.
ಮೊದಲ 2 ಬೌಂಡರಿ ಸಿಡಿಸಿದ ಬಳಿಕ ಕೊಹ್ಲಿ ಗೇರ್ ಚೇಂಜ್ ಮಾಡಿದ್ರು. 21ನೇ ಎಸೆತಕ್ಕೆ ಅಕೌಂಟ್ ಓಪನ್ ಮಾಡಿದ ಕೊಹ್ಲಿ, ಆ ಬಳಿಕ ಎದುರಿಸಿದ 23 ಎಸೆತಗಳಲ್ಲಿ 18 ರನ್ ಸಿಡಿಸಿದರು.
ಅವಿಸ್ಮರಣೀಯ ಪಂದ್ಯದಲ್ಲಿ ಅದ್ಭುತ ಅರ್ಧಶತಕ
ಟೀ ಬ್ರೇಕ್ ಬಳಿಕ ಕೊಹ್ಲಿ ಮತ್ತಷ್ಟು ವೇಗವಾಗಿ ಬ್ಯಾಟ್ ಬೀಸಿದರು. 96 ಎಸೆತಗಳಲ್ಲೆ ಹಾಫ್ ಸೆಂಚೂರಿ ಪೂರೈಸಿ, 500ನೇ ಪಂದ್ಯವನ್ನ ಮತ್ತಷ್ಟು ಅವಿಸ್ಮರಣೀಯಗೊಳಿಸಿಕೊಂಡ್ರು.
ದಿನದ ಅಂತ್ಯಕ್ಕೆ ಅಜೇಯ, ಶತಕ ಸಿಡಿಸೋ ಹಂಬಲ.!
500ನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿರುವ ವಿರಾಟ್ ಕೊಹ್ಲಿ ಶತಕ ಸಿಡಿಸೋ ಹೊಸ್ತಿಲಲ್ಲಿದ್ದಾರೆ. ಮೊದಲ ದಿನದ ಅಂತ್ಯಕ್ಕೆ 87 ರನ್ಗಳಿಸಿರೋ ಕೊಹ್ಲಿಯ ಶತಕಕ್ಕೆ ಕೇವಲ 13 ರನ್ಗಳು ಮಾತ್ರ ಬೇಕು. ಗುಡ್ ಟಚ್ನಲ್ಲಿರೋ ಕೊಹ್ಲಿಗೆ ಇದು ಅಸಾಧ್ಯದ ವಿಚಾರವೇನಲ್ಲ. ಎಚ್ಚರಿಕೆಯ ಆಟವಾಡಿ ವಿರಾಟ್ ಶತಕ ಸಾಧನೆ ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ