newsfirstkannada.com

WI vs IND: ರೋಹಿತ್​, ವಿರಾಟ್​ ಅಬ್ಬರದ ಬ್ಯಾಟಿಂಗ್​.. ಮತ್ತೆ ಎಡವಿದ ಗಿಲ್, ರಹಾನೆ.. ಮೊದಲ ದಿನದ ಆಟ ಹೇಗಿತ್ತು..?

Share :

21-07-2023

    ಕ್ಯಾಪ್ಟನ್​​ ರೋಹಿತ್- ಜೈಸ್ವಾಲ್​ ಆಟಕ್ಕೆ ವಿಂಡೀಸ್​ ಕಂಗಾಲು

    3ನೇ ಸೆಷನ್​ನಲ್ಲಿ ವಿರಾಟ್​ ಕೊಹ್ಲಿ -ಜಡೇಜಾ ಜುಗಲ್ ​ಬಂದಿ

    2ನೇ ಟೆಸ್ಟ್​ನ ಫಸ್ಟ್​ ಇನ್ನಿಂಗ್ಸ್​ನಲ್ಲಿ ಭಾರತಕ್ಕೆ ಉತ್ತಮ ಆರಂಭ

ವೆಸ್ಟ್​ ಇಂಡೀಸ್​​ ವಿರುದ್ಧದ 2ನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲೇ ಟೀಮ್​ ಇಂಡಿಯಾ ಪಾರಮ್ಯ ಮೆರೆದಿದೆ. ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ಗಳ ಆರ್ಭಟದ ಮುಂದೆ ವಿಂಡೀಸ್​ ಪಡೆ ಥಂಡಾ ಹೊಡೆದಿದೆ. ಟ್ರಿನಿಡಾಡ್​ ಟೆಸ್ಟ್​ ಫೈಟ್​ನ ಮೊದಲ ದಿನದಾಟ ಹೇಗಿತ್ತು.?

ವೆಸ್ಟ್​​ ಇಂಡೀಸ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲೆ ಟೀಮ್​ ಇಂಡಿಯಾ ಅದಿಪತ್ಯ ಸಾಧಿಸಿದೆ. ಟ್ರಿನಿಡಾಡ್​ನ ಕ್ವಿನ್ಸ್​ ಪಾರ್ಕ್​ ಓವಲ್​ನಲ್ಲಿ ವಿಂಡೀಸ್​ ಬೌಲರ್​​ಗಳ ಮೇಲೆ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಸವಾರಿ ಮಾಡಿದ್ರು. ಮೊದಲ ಹಾಗೂ 3ನೇ ಸೆಷನ್​ನಲ್ಲಿ ಉತ್ತಮ ಬ್ಯಾಟಿಂಗ್​ ನಡೆಸಿದ ಟೀಮ್​ ಇಂಡಿಯಾ ಬ್ಯಾಟರ್ಸ್​ ಮೊದಲ ದಿನದ ಗೌರವಕ್ಕೆ ಪಾತ್ರರಾದ್ರು.

ಟ್ರಿನಿಡಾಡ್​​ನಲ್ಲೂ ವಿಂಡೀಸ್​​ಗೆ ಮುಂಬೈಕರ್ಸ್​​ ಕಾಟ.!

ಟಾಸ್​​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾಗೆ ಸಾಲಿಡ್​ ಆರಂಭ ಕಂಡುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ, ಯಶಸ್ವಿ ಜೈಸ್ವಾಲ್​ ವಿಂಡೀಸ್​ ಬೌಲರ್​ಗಳ ಬೆಂಡೆತ್ತಿದ್ರು. ಮೊದಲ ವಿಕೆಟ್​​ ಶತಕದ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿದ್ರು. ಮೊದಲ ಸೆಷನ್ ಅಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೆ ಟೀಮ್​ ಇಂಡಿಯಾ 121 ರನ್​ಗಳಿಸಿತು.

2ನೇ ಸೆಷನ್​ನಲ್ಲಿ ವೆಸ್ಟ್​ ಇಂಡೀಸ್​ ಕಮ್​ಬ್ಯಾಕ್​.!

2ನೇ ಸೆಷನ್​ನಲ್ಲಿ ವೆಸ್ಟ್​ ಇಂಡೀಸ್​​ ಭರ್ಜರಿ ಕಮ್​ಬ್ಯಾಕ್​ ಮಾಡಿತು. ಸಿಕ್ಕ 3 ಜೀವದಾನಗಳನ್ನ ಬಳಸಿಕೊಂಡು ಬಿಗ್​ಸ್ಕೋರ್​​ ಕಲೆ ಹಾಕುವಲ್ಲಿ ಯಶಸ್ವಿ ಜೈಸ್ವಾಲ್​ ಎಡವಿದರು. ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಹೋಲ್ಡರ್​ಗೆ ವಿಕೆಟ್​ ಒಪ್ಪಿಸಿದರು. ಇದ್ರೊಂದಿಗೆ 139 ರನ್​ಗಳ ಜೊತೆಯಾಟಕ್ಕೆ ಬ್ರೇಕ್​ ಬಿತ್ತು.

2ನೇ ಟೆಸ್ಟ್​ನಲ್ಲೂ ನಿರಾಸೆ ಮೂಡಿಸಿದ ಶುಭ್​ಮನ್​.!

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್​ಮನ್​ ಗಿಲ್​ 2ನೇ ಟೆಸ್ಟ್​ನಲ್ಲೂ ನಿರಾಸೆ ಮೂಡಿಸಿದರು. ಕೇವಲ 10 ರನ್​ಗಳಿಸಿ ನಿರ್ಗಮಿಸಿದರು.

ಶತಕದ ಅಂಚಿನಲ್ಲಿ ಎಡವಿದ ರೋಹಿತ್​ ಶರ್ಮಾ.!

ಮೊದಲ ಟೆಸ್ಟ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಕ್ಯಾಪ್ಟನ್​ ರೋಹಿತ್​ ಶರ್ಮಾ, 2ನೇ ಟೆಸ್ಟ್​ನಲ್ಲೂ ಅದ್ಭುತ ಇನ್ನಿಂಗ್ಸ್​ ಕಟ್ಟಿದರು. ತಾಳ್ಮೆಯೊಂದಿಗೆ ಎಚ್ಚರಿಕೆಯ ಆಟವಾಡಿದ ರೋಹಿತ್​​ 143 ಎಸೆತಗಳನ್ನ ಎದುರಿಸಿ 80 ರನ್​ಗಳಿಸಿದರು. 9 ಬೌಂಡರಿ, 2 ಸಿಕ್ಸರ್​ ಸಿಡಿಸಿದ್ದ ಮುಂಬೈಕರ್​, ಶತಕದ ಅಂಚಿನಲ್ಲಿ ಎಡವಿದರು.

ಉಪನಾಯಕ ಅಜಿಂಕ್ಯಾ ರಹಾನೆ ಫ್ಲಾಪ್ ಶೋ​.!

ಮೊದಲ ಟೆಸ್ಟ್​ನಲ್ಲೂ ಫ್ಲಾಪ್​ ಶೋ ನೀಡಿದ ರಹಾನೆ, 2ನೇ ಟೆಸ್ಟ್​ನಲ್ಲೂ ರನ್​ಗಳಿಕೆಗೆ ಪರದಾಡಿದ್ರು. 36 ಎಸೆತ ಎದುರಿಸಿದ ಅಜಿಂಕ್ಯಾ ರಹಾನೆ ಕೇವಲ 8 ರನ್​ಗಳಿಸಿ ಪೆವಿಲಿಯನ್​ ಸೇರಿದರು. 2ನೇ ಸೆಷನ್​ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 182 ರನ್​ಗಳಿಸ್ತು.

ಇದನ್ನು ಓದಿ: ಆಹ್ಹಾ.. ಚಗಳಿ ಗೊಜ್ಜು..! ಮಾವಿನ ಮರವೇರಿ.. ಕೆಂಪಿರುವೆ ತಂದು.. ಚೆಟ್ನಿ ಮಾಡಿ ರೊಟ್ಟಿ ಜೊತೆ ಸವಿದ ಡ್ಯಾನ್ಸರ್ ಕಿಶನ್..! ವಿಡಿಯೋ

ತಿಣುಕಾಡಿದ ವಿಂಡೀಸ್​, ಟೀಮ್​ ಇಂಡಿಯಾ ಮೇಲುಗೈ

2ನೇ ಸೆಷನ್​ನಲ್ಲಿ 4 ವಿಕೆಟ್​ ಕಿತ್ತ ಆತ್ಮವಿಶ್ವಾಸದಲ್ಲಿದ್ದ ವಿಂಡೀಸ್​ ಪಡೆಗೆ ಟೀಮ್​ ಇಂಡಿಯಾ 3ನೇ ಸೆಷನ್​ನಲ್ಲಿ ತಿರುಗೇಟು ನೀಡಿತು. ವಿರಾಟ್​ ಕೊಹ್ಲಿ- ರವೀಂದ್ರ ಜಡೇಜಾ ಜುಗಲ್​ ಬಂದಿಯ ಮುಂದೆ ಕಂಗಾಲಾದ ವಿಂಡೀಸ್​​ ವಿಕೆಟ್​ಗಾಗಿ ಪರದಾಟ ನಡೆಸಿತು. ಲೀಲಾಜಾಲವಾಗಿ ರನ್​ಗಳಿಸಿದ ಕೊಹ್ಲಿ -ಜಡ್ಡು ಜೋಡಿ 5ನೇ ವಿಕೆಟ್​ಗೆ ಅಜೇಯ 106 ರನ್​ಗಳ ಜೊತೆಯಾಟವಾಡಿತು.

ದಿನದಾಟದ ಅಂತ್ಯಕ್ಕೆ ಟೀಮ್​ ಇಂಡಿಯಾ 4 ವಿಕೆಟ್​ ನಷ್ಟಕ್ಕೆ 288 ರನ್​ಗಳಿಸಿದ್ದು, ಮೊದಲ ದಿನದ ಗೌರವಕ್ಕೆ ಪಾತ್ರವಾಗಿದೆ. 87 ರನ್​ಗಳೊಂದಿಗೆ ವಿರಾಟ್​ ಕೊಹ್ಲಿ, 36 ರನ್​ಗಳೊಂದಿಗೆ ಜಡೇಜಾ ಕ್ರಿಸ್​ ಕಾಯ್ದುಕೊಂಡಿದ್ದಾರೆ. ಇಂದಿನ ದಿನದಾಟದಲ್ಲಿ ಬೃಹತ್​ ಮೊತ್ತ ಪೇರಿಸೋ ಲೆಕ್ಕಾಚಾರದಲ್ಲಿ ಟೀಮ್​ ಇಂಡಿಯಾ ಇದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

WI vs IND: ರೋಹಿತ್​, ವಿರಾಟ್​ ಅಬ್ಬರದ ಬ್ಯಾಟಿಂಗ್​.. ಮತ್ತೆ ಎಡವಿದ ಗಿಲ್, ರಹಾನೆ.. ಮೊದಲ ದಿನದ ಆಟ ಹೇಗಿತ್ತು..?

https://newsfirstlive.com/wp-content/uploads/2023/07/ROHIT_KOHLI_JIASWAL.jpg

Load More