newsfirstkannada.com

WI vs IND: ಬೃಹತ್ ಮೊತ್ತ ಕಲೆ ಹಾಕಿದ ಟೀಮ್ ಇಂಡಿಯಾ.. ಭರ್ಜರಿ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಹೇಗಿತ್ತು..?

Share :

Published July 22, 2023 at 6:57am

    ಟ್ರಿನಿಡಾಡ್​ ಟೆಸ್ಟ್​​ನ 2ನೇ ದಿನದಾಟದಲ್ಲಿ ಬ್ಯಾಟಿಂಗ್ ಅಬ್ಬರ..!

    ಭಾರತಕ್ಕೆ ಟಕ್ಕರ್ ಕೊಡಲು ಸಿಡಿದು ನಿಂತ ಕೆರಿಬಿಯನ್ ಪಡೆ

    ರವೀಂದ್ರ ಜಡೇಜಾ, ಅಶ್ವಿನ್​ ಅರ್ಧಶತಕ, ಕಿಂಗ್ ಕೊಹ್ಲಿ ಶತಕ

ಇಂಡೋ- ವಿಂಡೀಸ್​​ 2ನೇ ಟೆಸ್ಟ್​ ಫೈಟ್​ಗೆ ಟ್ವಿಸ್ಟ್​​ ಸಿಕ್ಕಿದೆ. ಸುಲಭಕ್ಕೆ ವಿಂಡೀಸ್​ ಪಡೆಯನ್ನ ಆಲೌಟ್​ ಮಾಡೋ ಆತ್ಮವಿಶ್ವಾಸದಲ್ಲಿದ್ದ ಟೀಮ್​ ಇಂಡಿಯಾದ ಲೆಕ್ಕಾಚಾರ ಉಲ್ಟಾ ಆಗಿದೆ. ಬೆಟ್ಟದಂತಾ ಸವಾಲು ಮುಂದಿದ್ರೂ, ದಿಟ್ಟ ಹೋರಾಟದ ಮುನ್ಸೂಚನೆಯನ್ನ ವಿಂಡೀಸ್​ ನೀಡಿದೆ. ಟ್ರಿನಿಡಾಡ್​ ಟೆಸ್ಟ್​ ಫೈಟ್​ನ 2ನೇ ದಿನದಾಟದ ಕಂಪ್ಲೀಟ್​ ಅಪ್​ಡೇಟ್​ ಇಲ್ಲಿದೆ.

ಟ್ರಿನಿಡಾಡ್​ನಲ್ಲಿ ನಡೆಯುತ್ತಿರೋ 2ನೇ ಟೆಸ್ಟ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ದಿಟ್ಟ ಹೋರಾಟ ನಡೆಸ್ತಿದೆ. 2ನೇ ದಿನದಾಟದಲ್ಲಿ 438 ರನ್​ಗಳಿಗೆ ಟೀಮ್​ ಇಂಡಿಯಾ ಆಲೌಟ್​ ಆದ ಬಳಿಕ ಇನ್ನಿಂಗ್ಸ್​ ಆರಂಭಿಸಿರುವ ವಿಂಡೀಸ್​ ಉತ್ತಮ ಆರಂಭ ಕಂಡಿದೆ. ತಾಳ್ಮೆಯ ಆಟದ ಮೊರೆ ಹೋಗಿರುವ ವಿಂಡೀಸ್​ ಬ್ಯಾಟರ್ಸ್​ ಟೀಮ್​ ಇಂಡಿಯಾ ಗೇಮ್​ ಪ್ಲಾನ್​ ಅನ್ನೆ ಉಲ್ಟಾ ಮಾಡಿದ್ದಾರೆ.

ವಿರಾಟ್​ ಶತಕದ ಮೆರುಗು, ಜಡೇಜಾ ಅರ್ಧಶತಕ.!

4 ವಿಕೆಟ್​​ ನಷ್ಟಕ್ಕೆ 288 ರನ್​ಗಳೊಂದಿಗೆ ದಿನದಾಟ ಆರಂಭಿಸಿದ ಟೀಮ್​ ಇಂಡಿಯಾ ಉತ್ತಮ ಆರಂಭ ಕಂಡಿತು. ಮೊದಲ ದಿನದಾಟದ ಅಂತ್ಯಕ್ಕೆ ಶತಕದ ಹೊಸ್ತಿಲಲ್ಲಿದ್ದ ವಿರಾಟ್​ ಕೊಹ್ಲಿ, 2ನೇ ದಿನದಾಟದ ಆರಂಭದಲ್ಲೇ 29ನೇ ಟೆಸ್ಟ್​ ಶತಕ ಪೂರೈಸಿದರು. ಕೊಹ್ಲಿ ಉತ್ತಮ ಸಾಥ್​ ನೀಡಿದ ರವೀಂದ್ರ ಜಡೇಜಾ ಕೂಡ ಅರ್ಧಶತಕ ಪೂರೈಸಿ ಫೇವರಿಟ್​​ ಕತ್ತಿವರಸೆ ಸೆಲಬ್ರೇಷನ್​ ಮಾಡಿ ಸಂಭ್ರಮಿಸಿದರು.

ನಿರಾಸೆ ಮೂಡಿಸಿದ ಇಶಾನ್​ ಕಿಶನ್​​.!

121 ರನ್​ಗಳಿಸಿ ಕೊಹ್ಲಿ ರನೌಟ್​ ಆದ್ರೆ, 61 ರನ್​ಗಳಿಸಿದ್ದ ಜಡೇಜಾ ಆಟಕ್ಕೆ ಕೀಮರ್​ ರೋಚ್​ ಬ್ರೇಕ್​ ಹಾಕಿದರು. ಆ ಬಳಿಕ ಕಣಕ್ಕಿಳಿದ ಇಶಾನ್​ ಕಿಶನ್​ ಉತ್ತಮ ಇನ್ನಿಂಗ್ಸ್​ ಕಟ್ಟೋ ಚಿನ್ನದಂತಾ ಅವಕಾಶ ಕೈ ಚೆಲ್ಲಿದರು. ಕೇವಲ 25 ರನ್​ಗಳಿಸಿ ಪೆವಿಲಿಯನ್​ ಸೇರಿದರು.

ಅಶ್ವಿನ್​ ಹೋರಾಟ, ಟೀಮ್​ ಇಂಡಿಯಾ ಬೃಹತ್​ ಮೊತ್ತ

ಜಯದೇವ್​ ಉನಾದ್ಕತ್​, ಮೊಹಮ್ಮದ್​ ಸಿರಾಜ್​ ಕೂಡ ಕ್ರಿಸ್​ ಕಚ್ಚಿ ನಿಲಲ್ಲಿಲ್ಲ. ಆದ್ರೆ, ವಿಂಡೀಸ್​ ಬೌಲರ್​ಗಳನ್ನ ಕಾಡಿದ ಅಶ್ವಿನ್​, ಅರ್ಧಶತಕ ಸಿಡಿಸಿದರು. 8 ಬೌಂಡರಿ ಸಹಿತ 56 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಮೊದಲ ಇನ್ನಿಂಗ್ಸ್​​ನಲ್ಲಿ ಟೀಮ್​ ಇಂಡಿಯಾ 438 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು.

ಉತ್ತಮ ಆರಂಭ ಕಂಡ ವೆಸ್ಟ್​ ಇಂಡೀಸ್​​.!

ಮೊದಲ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್​ ಇಂಡೀಸ್​ ತಂಡದ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕ್ರೇಗ್​ ಬ್ರಾಥ್​ವೇಟ್​ ಹಾಗೂ ಚಂದ್ರಪಾಲ್​​ ಎಚ್ಚರಿಕೆಯ ಆಟವಾಡಿದರು. ಬರೋಬ್ಬರಿ 208 ಎಸೆತಗಳನ್ನ ತಾಳ್ಮೆಯಿಂದ ಎದುರಿಸಿದ ಈ ಜೋಡಿ ಮೊದಲ ವಿಕೆಟ್​ಗೆ 71 ರನ್​ ಕಲೆ ಹಾಕಿತು.

ಅಂತಿಮವಾಗಿ 34.2ನೇ ಓವರ್​ನಲ್ಲಿ ಚಂದ್ರಪಾಲ್​ಗೆ ಗೇಟ್​ಪಾಸ್​ ನೀಡಿದ ಜಡೇಜಾ ಬ್ರೇಕ್​ ಥ್ರೂ ನೀಡುವಲ್ಲಿ ಯಶಸ್ವಿಯಾದ್ರು. 33 ರನ್​ಗಳಿಸಿದ್ದ ಚಂದ್ರಪಾಲ್​, ಅಶ್ವಿನ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ಆ ಬಳಿಕ ಜೊತೆಯಾದ ಬ್ರಾಥ್​ವೇಟ್​ ಹಾಗೂ ಕ್ರಿಕ್​​ ಮೆಕೆಂಝೀ ಜೋಡಿ ಉತ್ತಮ ಇನ್ನಿಂಗ್ಸ್​​ ಆಟವಾಡ್ತಿದ್ದಾರೆ. 2ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್​​ ನಷ್ಟಕ್ಕೆ ವಿಂಡೀಸ್​ 86 ರನ್​ಗಳಿಸಿದ್ದು, 352 ರನ್​​ಗಳ ಹಿನ್ನಡೆಯಲ್ಲಿದೆ. 37 ರನ್​ಗಳೊಂದಿಗೆ ಬ್ರಾಥ್​ವೇಟ್​​, 14 ರನ್​ಗಳೊಂದಿಗೆ ಮೆಕೆಂಝೀ ಕ್ರಿಸ್​ ಕಾಯ್ದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

WI vs IND: ಬೃಹತ್ ಮೊತ್ತ ಕಲೆ ಹಾಕಿದ ಟೀಮ್ ಇಂಡಿಯಾ.. ಭರ್ಜರಿ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಹೇಗಿತ್ತು..?

https://newsfirstlive.com/wp-content/uploads/2023/07/VIRAT_KOHLI_121_RUNS.jpg

Load More