newsfirstkannada.com

WIvsIND: ಟೀಮ್​ ಇಂಡಿಯಾಗೆ ಟಕ್ಕರ್​ ಕೊಡಲು ಕೆರಿಬಿಯನ್​ರ ದಿಟ್ಟ ಹೋರಾಟ.. ವಿಕೆಟ್​ಗಾಗಿ ರೋಹಿತ್​ ಪಡೆ​ ಪರದಾಟ

Share :

23-07-2023

    ಆತ್ಮವಿಶ್ವಾದಲ್ಲಿದ್ದ ರೋಹಿತ್​ ಬಳಗಕ್ಕೆ ವಿಂಡೀಸ್​ ತಿರುಗೇಟು

    ಕೆರಿಬಿಯನ್​ರ ತಾಳ್ಮೆ ಆಟಕ್ಕೆ ಭಾರತದ ಗೇಮ್​ ಪ್ಲಾನ್​ ಠುಸ್

    ಅಶ್ವಿನ್​ ಸ್ಪಿನ್​ ಮ್ಯಾಜಿಕ್​ಗೆ ಕ್ಯಾಪ್ಟನ್​ ಬ್ರಾಥ್​ವೇಟ್ ಬೋಲ್ಡ್​

ಟ್ರಿನಿಡಾಡ್​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾದ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗಿದೆ. ಸುಲಭಕ್ಕೆ ಆಲೌಟ್​ ಮಾಡೋ ಆತ್ಮವಿಶ್ವಾದಲ್ಲಿದ್ದ ರೋಹಿತ್​ ಪಡೆಗೆ ವಿಂಡೀಸ್​ ದಿಟ್ಟ ಹೋರಾಟದ ತಿರುಗೇಟು ನೀಡಿದೆ. ಟ್ರಿನಿಡಾಟ್​ ಟೆಸ್ಟ್​ನ 3ನೇ ದಿನದಾಟ ಹೇಗಿತ್ತು..?

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಪಾರಮ್ಯ ಮರೆದಿದ್ದ ಟೀಮ್​ ಇಂಡಿಯಾ ಬೌಲರ್ಸ್​ 2ನೇ ಟೆಸ್ಟ್​ನಲ್ಲಿ ವಿಕೆಟ್​ಗಾಗಿ ಪರದಾಡ್ತಿದ್ದಾರೆ. ವಿಂಡೀಸ್​ ಪಡೆಯ ತಾಳ್ಮೆಯ ಆಟ ಮುಂದೆ ಟೀಮ್​ ಇಂಡಿಯಾ ಗೇಮ್​ ಪ್ಲಾನ್​ ವರ್ಕೌಟ್​ ಆಗ್ತಿಲ್ಲ. 3ನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಕಬಳಿಸಿದ್ದು ಕೇವಲ 4 ವಿಕೆಟ್​.

ಚೊಚ್ಚಲ ಟೆಸ್ಟ್​ ವಿಕೆಟ್​ ಕಬಳಿಸಿದ ಮುಖೇಶ್​..!

2ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್​ ನಷ್ಟಕ್ಕೆ, 86 ರನ್​ಗಳಿಸಿದ್ದ ವೆಸ್ಟ್​ ಇಂಡೀಸ್​ ತಂಡ, 3ನೇ ದಿನದಾಟದಲ್ಲಿ ದಿಟ್ಟ ಹೋರಾಟ ನಡೆಸಿತು. ಇನ್ನಿಂಗ್ಸ್​ ಆರಂಭಿಸಿದ ನಾಯಕ ಕ್ರೇಗ್​ ಬ್ರಾಥ್​ವೇಟ್​​, ಕ್ರಿಕ್​​ ಮೆಕೆಂಝೀ ಭಾರತೀಯ ಬೌಲರ್​ಗಳನ್ನ ಕಾಡಿದ್ರು. ಅಂತಿಮವಾಗಿ ಡೆಬ್ಯೂಟಂಟ್​ ಮುಖೇಶ್​ ಕುಮಾರ್​, ಬ್ರೇಕ್​ ಥ್ರೂ ನೀಡುವಲ್ಲಿ ಯಶಸ್ವಿಯಾದ್ರು.

ಅಶ್ವಿನ್​ ಮ್ಯಾಜಿಕ್​​ಗೆ ಬ್ರಾಥ್​ವೇಟ್​​ ಸ್ಟನ್​.!

ಮೆಕೆಂಝೀ 32 ರನ್​ಗಳಿಸಿ ಔಟ್​ ಆದ್ರೆ, ಫುಲ್​ ಡಿಫೆನ್ಸಿವ್​ ಮೂಡ್​ನಲ್ಲಿ ಬ್ಯಾಟಿಂಗ್​ ನಡೆಸಿದ ವಿಂಡೀಸ್​ ನಾಯಕ ಬರೋಬ್ಬರಿ 235 ಎಸೆತಗಳನ್ನ ಎದುರಿಸಿದ್ರು. ಟೀಮ್​ ಇಂಡಿಯಾದ ಗೇಮ್​ಪ್ಲಾನ್​ಗಳಿಗೆ ತಾಳ್ಮೆಯಿಂದಲೇ ಉತ್ತರಿಸಿದ ಬ್ರಾಥ್​ವೇಟ್​ ಕ್ರಿಸ್​ ಕಚ್ಚಿ ನಿಂತಿದ್ರು. ಅಂತಿಮವಾಗಿ 75 ರನ್​ಗಳಿಸಿದ್ದ ವೇಳೆ ಅಶ್ವಿನ್​ರ ಮ್ಯಾಜಿಕಲ್​ ಸ್ಪಿನ್​ಗೆ ಕ್ಲೀನ್​ ಬೋಲ್ಡ್​ ಆಗಿ ಸ್ಟನ್​​ ಆದ್ರು.

ರಹಾನೆ ಅದ್ಭುತ ಕ್ಯಾಚ್​ಗೆ ಬ್ಲಾಕ್​ವುಡ್​​ ಬಲಿ.!

ಬ್ರಾಥ್​ವೇಟ್​​ ಬೆನ್ನಲ್ಲೇ ಜೆರ್ಮೈನ್ ಬ್ಲಾಕ್‌ವುಡ್​ ಕೂಡ ಪೆವಿಲಿಯನ್​ ಸೇರಿದ್ರು. ಜಡೇಜಾ ಬೌಲಿಂಗ್​ನಲ್ಲಿ ಸ್ಲಿಪ್​ನಲ್ಲಿದ್ದ ಅಜಿಂಕ್ಯಾ ರಹಾನೆ ಹಿಡಿದ ಅದ್ಭುತ ಕ್ಯಾಚ್​ಗೆ ಬ್ಲಾಕ್​ವುಡ್​​ ಬಲಿಯಾದ್ರು.

ಸಿರಾಜ್​ ಕಮಾಲ್​, ಡಿ ಸಿಲ್ವಾ ಕ್ಲೀನ್​ ಬೋಲ್ಡ್​.!

6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋಶ್ವಾ ಡಿ ಸಿಲ್ವಾಗೆ ಸೆಟಲ್​ ಆಗಲು ಮೊಹಮ್ಮದ್​ ಸಿರಾಜ್​ ಅವಕಾಶ ನೀಡಲಿಲ್ಲ. ಸಿರಾಜ್​ ಎಸೆತವನ್ನ ಜಡ್ಜ್​ ಮಾಡುವಲ್ಲಿ ಎಡವಿದ ಡಿ ಸಿಲ್ವಾ ಕ್ಲೀನ್​ ಬೋಲ್ಡ್​ ಆದ್ರು.

ಒಂದೆಡೆ ವಿಕೆಟ್​​ ಪತನವಾದ್ರೂ ಇನ್ನೊಂದೆಡೆ ಯುವ ಆಟಗಾರ ಅಲಿಕ್​ ಅಥಿನಾಜೆ ಉತ್ತಮ ಇನ್ನಿಂಗ್ಸ್​ ಕಟ್ತಾ ಇದ್ದಾರೆ. 3ನೇ ದಿನದಾಟದ ಅಂತ್ಯಕ್ಕೆ ವಿಂಡೀಸ್​​ 5 ವಿಕೆಟ್​​ ನಷ್ಟಕ್ಕೆ 229 ರನ್​ಗಳಿಸಿದ್ದು, ಇನ್ನೂ 209 ರನ್​ಗಳ ಹಿನ್ನಡೆಯಲ್ಲಿದೆ. 111 ಎಸೆತಗಳನ್ನ ಎದುರಿಸಿ 37 ರನ್​ಗಳಿಸಿರುವ ಅಥಿನಾಜೆಗೆ ಸದ್ಯ ಅನುಭವಿ ಜೇಸನ್​ ಹೋಲ್ಡರ್​ರ ಸಾಥ್​ ಸಿಕ್ಕಿದ್ದು, 4ನೇ ದಿನದಾಟದ ಸದ್ಯ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

WIvsIND: ಟೀಮ್​ ಇಂಡಿಯಾಗೆ ಟಕ್ಕರ್​ ಕೊಡಲು ಕೆರಿಬಿಯನ್​ರ ದಿಟ್ಟ ಹೋರಾಟ.. ವಿಕೆಟ್​ಗಾಗಿ ರೋಹಿತ್​ ಪಡೆ​ ಪರದಾಟ

https://newsfirstlive.com/wp-content/uploads/2023/07/ROHIT_SHARMA-1.jpg

Load More