5 ವರ್ಷಗಳ ಬಳಿಕ ವಿದೇಶದಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ..!
ಶತಕ ಬಾರಿಸಿದ ಬಳಿಕ ವೆಡ್ಡಿಂಗ್ ರಿಂಗ್ ಕಿಸ್ ಮಾಡಿ ಕೊಹ್ಲಿ ಸಂಭ್ರಮ
ದಾಖಲೆ ಬರೆದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಶಹಬ್ಬಾಸ್ಗಿರಿ
ವಿದೇಶದಲ್ಲಿ ಶತಕ ಯಾವಾಗ ಅನ್ನೋ ಪ್ರಶ್ನೆಗೆ ವಿರಾಟ್ ಕೊಹ್ಲಿ ಉತ್ತರ ಕೊಟ್ಟಿದ್ದಾರೆ. ಟ್ರಿನಿಡಾಡ್ನಲ್ಲಿ ವಿಂಡೀಸ್ ಬೌಲರ್ಗಳ ಬೆವರಿಳಿಸಿದ ಕೊಹ್ಲಿ 5 ವರ್ಷಗಳ ಕೊರಗನ್ನ ನೀಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಯಾರೂ ಮಾಡದ ಸಾಧನೆ ಮಾಡಿ ‘ಕಿಂಗ್’ ನಾನೇ ಎಂದು ಸಂದೇಶ ಸಾರಿದ್ದಾರೆ.
ಇಂಡೋ – ವಿಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟವನ್ನ ನೋಡಲು ಕಿಂಗ್ ಕೊಹ್ಲಿ ಅಭಿಮಾನಿಗಳು ಕಾದು ಕುಳಿತ್ತಿದ್ದರು. ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ 87 ರನ್ಗಳಿಸಿದ್ದ ಕೊಹ್ಲಿ, ಶತಕ ಸಿಡಿಸುತ್ತಾರೆ ಅನ್ನೋದು ಫ್ಯಾನ್ಸ್ ಮಹದಾಸೆ ಆಗಿತ್ತು. ಹೀಗೆ ಕಾದು ಕುಳಿದ ಫ್ಯಾನ್ಸ್ ಕಿಂಚಿತ್ತೂ ನಿರಾಸೆಯಾಗಲಿಲ್ಲ.
ಅವಿಸ್ಮರಣೀಯ ಪಂದ್ಯ.. ಅವಿಸ್ಮರಣೀಯ ಸಾಧನೆ..!
2ನೇ ದಿನದಾಟದಲ್ಲೂ ಕಾನ್ಫಿಡೆಂಟ್ ಆಗಿ ಬ್ಯಾಟ್ ಬೀಸಿದ ಕೊಹ್ಲಿ, ಸಲೀಸಾಗಿ ರನ್ಗಳಿಸಿದರು. ಎದುರಿಸಿದ 180ನೇ ಎಸೆತವನ್ನ ಬ್ಯಾಕ್ವರ್ಡ್ ಪಾಯಿಂಟ್ ಕಡೆಗೆ ಸ್ಕೈರ್ಡ್ರೈವ್ ಬಾರಿಸಿದ ವಿರಾಟ್ ಶತಕ ಸಿಡಿಸಿದರು. ಫೇವರಿಟ್ ಫಾರ್ಮೆಟ್ ಟೆಸ್ಟ್ ಕ್ರಿಕೆಟ್ನಲ್ಲಿ 29ನೇ ಸೆಂಚೂರಿ ಪೂರೈಸಿದರು.
ವೆಡ್ಡಿಂಗ್ ರಿಂಗ್ ಕಿಸ್ ಮಾಡಿ ಮಡದಿ ನೆನೆದ ವಿರಾಟ.!
ಈ ಬಾರಿ ಶತಕ ಸಿಡಿಸಿದಾಗಲೂ ಪತ್ನಿಯನ್ನ ಕಿಂಗ್ ಕೊಹ್ಲಿ ಮರೆಯಲಿಲ್ಲ. 500ನೇ ಟೆಸ್ಟ್ ಪಂದ್ಯವನ್ನ ಶತಕ ಸಿಡಿಸಿ ಅವಿಸ್ಮರಣೀಯವಾಗಿಸಿಕೊಂಡ ಬೆನ್ನಲ್ಲೇ ವೆಡ್ಡಿಂಗ್ ರಿಂಗ್ಗೆ ಕಿಸ್ ಮಾಡಿ ಸಂಭ್ರಮಿಸಿದರು.
ಈವರೆಗೆ ಯಾರೂ ಮಾಡಿಲ್ಲ ಈ ಸಾಧನೆ..!
ಸಚಿನ್ ತೆಂಡೂಲ್ಕರ್.. ರಿಕಿ ಪಾಂಟಿಂಗ್.. ರಾಹುಲ್ ದ್ರಾವಿಡ್.. ಸನತ್ ಜಯಸೂರ್ಯ ಸೇರಿದಂತೆ 9 ಮಂದಿ ದಿಗ್ಗಜ ಕ್ರಿಕೆಟಿಗರು ಇದಕ್ಕೂ ಮುನ್ನ 500 ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಸಾಧನೆ ಮಾಡಿದ್ರು. ಆದ್ರೆ, ಯಾರೂ ಕೂಡ 500ನೇ ಪಂದ್ಯದಲ್ಲಿ ಶತಕ ಸಾಧನೆ ಮಾಡಿರಲಿಲ್ಲ. ಈ ಲಿಸ್ಟ್ 10ನೇಯವನಾಗಿ ಎಂಟ್ರಿ ಕೊಟ್ಟ ಕೊಹ್ಲಿ, ಸೆಂಚೂರಿ ಸಿಡಿಸಿ ಘರ್ಜಿಸಿದ್ದಾರೆ.
ದಾಖಲೆ ಬರೆದ ಕೊಹ್ಲಿ, ಸಚಿನ್ ಶಹಬ್ಬಾಸ್ಗಿರಿ.!
500 ಪಂದ್ಯಗಳ ಲೆಕ್ಕಾಚಾರದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅನ್ನೇ ವಿರಾಟ್ ಕೊಹ್ಲಿ ಹಿಂದಿಕ್ಕಿದರು. 500 ಪಂದ್ಯವನ್ನಾಡಿದ ಬಳಿಕ ಸಚಿನ್ ಖಾತೆಯಲ್ಲಿ 75 ಸೆಂಚುರಿಗಳಿದ್ದವು. ಇದೀಗ ಕೊಹ್ಲಿ, ಸಚಿನ್ ರನ್ನ ಹಿಂದಿಕ್ಕಿದ್ದು 76 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಕೊಹ್ಲಿಯ ಈ ಸಾಧನೆಯನ್ನ ಕ್ರಿಕೆಟ್ ದೇವರು ಮೆಚ್ಚಿದ್ದು, ಶುಭಕೋರಿ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
ಕ್ರಿಕೆಟ್ ದೇವರ ಹಾದಿಯಲ್ಲಿ ವಿರಾಟ್.!
ಕಾಕಾತಾಳೀಯ ಎಂಬಂತೆ 29ನೇ ಟೆಸ್ಟ್ ಶತಕವನ್ನ ಸಚಿನ್, ವೆಸ್ಟ್ ಇಂಡೀಸ್ ವಿರುದ್ಧವೇ ಸಿಡಿಸಿದರು. ಇದೀಗ ಕೊಹ್ಲಿ ಕೂಡ ವಿಂಡೀಸ್ ವಿರುದ್ಧವೇ ಈ ಸಾಧನೆ ಮಾಡಿದ್ದಾರೆ.
Sachin Tendulkar scored his 29th Test hundred in Port of Spain in 2002.
Virat Kohli scored his 29th Test hundred in Port of Spain in 2023.
Two GOAT's 💯pic.twitter.com/mLBRllLC6Y
— Johns. (@CricCrazyJohns) July 21, 2023
ಕೊಹ್ಲಿಯೇ ಕಿಂಗ್..! ಉಳಿದವರು ತೀರಾ ಹಿಂದೆ..!
2018ರಲ್ಲಿ ಪರ್ತ್ನಲ್ಲಿ ಸೆಂಚುರಿ ಸಿಡಿಸಿದ ಕೊಹ್ಲಿ ಆ ಬಳಿಕ ವಿದೇಶದಲ್ಲಿ ಶತಕದ ಬರ ಎದುರಿಸಿದರು. ಇದೀಗ 5 ವರ್ಷಗಳ ಬಳಿಕ ಆ ಶತಕದ ಕೊರಗನ್ನ ನೀಗಿಸಿಕೊಂಡಿದ್ದು, ನಾನೇ ಕಿಂಗ್ ಎಂದು ಸಾರಿ ಹೇಳಿದ್ದಾರೆ. ಆ್ಯಕ್ಟೀವ್ ಕ್ರಿಕೆಟ್ ಪ್ಲೇಯರ್ಸ್ ಪಟ್ಟಿಯಲ್ಲಿ ಕೊಹ್ಲಿ 76 ಶತಕಗಳೊಂದಿಗೆ ನಂ.1 ಸ್ಥಾನದಲ್ಲಿದ್ರೆ, 2ನೇ ಸ್ಥಾನದಲ್ಲಿರೋ ಜೋ ರೂಟ್ ಖಾತೆಯಲ್ಲಿರೋದು ಕೇವಲ 46 ಸೆಂಚೂರಿಸ್.
500ನೇ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ಕೊಹ್ಲಿ, ವೆರಿ ವೆರಿ ಸ್ಪೆಷಲ್ ಪಂದ್ಯವನ್ನ ಅವಿಸ್ಮರಣೀಯಗೊಳಿಸಿಕೊಂಡಿದ್ದು ಮಾತ್ರವಲ್ಲ, ಸಾಮರ್ಥ್ಯ ಪ್ರಶ್ನಿಸಿ ಟೀಕಿಸಿದವರಿಗೂ ಟಕ್ಕರ್ ಕೊಟ್ಟಿದ್ದಾರೆ. ವೈಟ್ ಬಾಲ್ ಬಳಿಕ ರೆಡ್ ಬಾಲ್ನಲ್ಲಿ ಅಸಲಿ ಖದರ್ಗೆ ಮರಳಿರೋ ಕೊಹ್ಲಿ ಮುಂದೆ ಹೀಗೆ ಅಬ್ಬರಿಸಲಿ ಅನ್ನೋದೇ ಫ್ಯಾನ್ಸ್ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ