ಸರಣಿ ಕ್ಲೀನ್ಸ್ವೀಪ್ ಮಾಡುವ ತವಕದಲ್ಲಿ ರೋಹಿತ್ ಪಡೆ..!
4ನೇ ದಿನದಾಟದಲ್ಲಿ ಆಬ್ಬರದ ಬ್ಯಾಟಿಂಗ್, ಕಿಶನ್ ಅರ್ಧಶತಕ
ಕೆರಿಬಿಯನ್ರ ತಾಳ್ಮೆ ಆಟಕ್ಕೆ ಬ್ರೇಕ್ ಹಾಕಿದ ಸ್ಪಿನ್ನರ್ ಅಶ್ವಿನ್
ಇಂಡೋ- ವಿಂಡೀಸ್ ನಡುವಿನ ಟ್ರಿನಿಡಾಡ್ ಟೆಸ್ಟ್ ಫೈಟ್ ಕುತೂಹಲ ಘಟ್ಟ ತಲುಪಿದೆ. ಬೌಲಿಂಗ್ -ಬ್ಯಾಟಿಂಗ್ ಎರಡರಲ್ಲೂ ಆರ್ಭಟಿಸಿರುವ ಟೀಮ್ ಇಂಡಿಯಾ ಸರಣಿ ಕ್ಲೀನ್ಸ್ವೀಪ್ ಮಾಡೋ ತವಕದಲ್ಲಿದೆ. ಹಾಗಾದ್ರೆ, 4ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ್ಫಾಮೆನ್ಸ್ ಹೇಗಿತ್ತು.? ಇಲ್ಲಿದೆ ಹೈಲೆಟ್ಸ್
ಭಾರತ- ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯ ಕುತೂಹಲದ ಘಟ್ಟ ತಲುಪಿದೆ. ಪಂದ್ಯದಲ್ಲಿ ಮೇಲುಗೈ ಸಾಧಿಸಿರುವ ಟೀಮ್ ಇಂಡಿಯಾ ಗೆಲ್ಲೋ ಹಾಟ್ ಫೇವರಿಟ್ ಎನಿಸಿದೆ. ಆದ್ರೆ, ಡಿಫೆನ್ಸಿವ್ ಮೂಡ್ಗೆ ಶಿಫ್ಟ್ ಆಗಿರೋ ವೆಸ್ಟ್ ಇಂಡೀಸ್ ಡ್ರಾ ಮಾಡಿಕೊಳ್ಳಲು ಹರಸಾಹಸ ಪಡ್ತಿದೆ.
7.4 ಓವರ್, 5 ವಿಕೆಟ್, ವಿಂಡೀಸ್ ಉಡೀಸ್..!
5 ವಿಕೆಟ್ ನಷ್ಟಕ್ಕೆ 229 ರನ್ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್ ತಂಡದ ಟೀಮ್ ಇಂಡಿಯಾ ದಾಳಿಗೆ ನಲುಗಿತು. ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ದಾಳಿಗೆ ತತ್ತರಿಸಿದ ವಿಂಡೀಸ್ ಆಟಗಾರರು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದರು. ಕೇವಲ 7.4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಆಲೌಟ್ ಆಯ್ತು. ಕೆರಬಿಯನ್ನರನ್ನ ಮೊದಲ ಇನ್ನಿಂಗ್ಸ್ನಲ್ಲಿ 255 ರನ್ಗಳಿಗೆ ಕಟ್ಟಿ ಹಾಕಿದ ಟೀಮ್ ಇಂಡಿಯಾ, 183 ರನ್ಗಳ ಲೀಡ್ ಪಡೆದುಕೊಳ್ತು.
ರೋಹಿತ್ -ಜೈಸ್ವಾಲ್ ಆರ್ಭಟ, ವಿಂಡೀಸ್ ತತ್ತರ.!
ವಿಂಡೀಸ್ ಆಲೌಟ್ ಆದ ಬಳಿಕ 2ನೆ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಬೊಂಬಾಟ್ ಓಪನಿಂಗ್ ನೀಡಿದ್ರು. ಟಿ20 ಸ್ಟೈಲ್ನಲ್ಲಿ ಬ್ಯಾಟ್ ಬೀಸಿದ ರೋಹಿತ್ ಅರ್ಧಶತಕ ಸಿಡಿಸಿ ಔಟಾದ್ರೆ, ಜೈಸ್ವಾಲ್ 38 ರನ್ಗಳ ಕಾಣಿಕೆ ನೀಡಿದ್ರು.
ಟೆಸ್ಟ್ನಲ್ಲಿ ಕಿಶನ್ ಚೊಚ್ಚಲ ಅರ್ಧಶತಕ.!
3ನೇ ವಿಕೆಟ್ಗೆ ಜೊತೆಯಾದ ಶುಭ್ಮನ್ ಗಿಲ್, ಇಶಾನ್ ಕಿಶನ್ ರನ್ವೇಗವನ್ನ ಮತ್ತಷ್ಟು ಹೆಚ್ಚಿಸಿದ್ರು. 4 ಬೌಂಡರಿ, 2 ಸಿಕ್ಸರ್ ಸಿಡಿಸಿ ಕಿಶನ್ ಟೆಸ್ಟ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸ್ತಿದ್ದಂತೆ, ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದ್ರು. 2ನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ 2 ವಿಕೆಟ್ ನಷ್ಟಕ್ಕೆ 181 ರನ್ಗಳಿಸಿತು.
ವಿಂಡೀಸ್ ತಾಳ್ಮೆಯ ಆಟಕ್ಕೆ ಅಶ್ವಿನ್ ಗುನ್ನ..!
365 ರನ್ಗಳ ಬೃಹತ್ ಟಾರ್ಗೆಟ್ ಪಡೆದ ವಿಂಡೀಸ್ ತಾಳ್ಮೆಯ ಆಟದ ಮೊರೆ ಹೋಯ್ತು. ಆದ್ರೆ, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿದ ಅಶ್ವಿನ್, ವಿಂಡೀಸ್ಗೆ ಶಾಕ್ ನೀಡಿದ್ರು. ನಾಯಕ ಕ್ರೇಗ್ ಬ್ರಾಥ್ವೇಟ್, ಕ್ರಿಕ್ ಮೆಕೆಂಝಿ ಅಶ್ವಿನ್ ಸ್ಪಿನ್ ಮೋಡಿಗೆ ಬಲಿಯಾದ್ರು.
ಆರಂಭಿಕನಾಗಿ ಕಣಕ್ಕಿಳಿದ ತೇಜ್ನರೈನ್ ಚಂದ್ರಪಾಲ್ ಡಿಫೆನ್ಸಿವ್ ಮೂಡ್ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದಾರೆ. ಚಂದ್ರಪಾಲ್ಗೆ ಬ್ಲಾಕ್ವುಡ್ ಸಾಥ್ ನೀಡ್ತಿದ್ದು, ದಿನದಾಟದ ಅಂತ್ಯಕ್ಕೆ ವಿಂಡೀಸ್ 2 ವಿಕೆಟ್ ನಷ್ಟಕ್ಕೆ 76 ರನ್ಗಳಿಸಿದೆ. ಇಂದಿನ ದಿನದಾಟದಲ್ಲಿ ವಿಂಡೀಸ್ ಗೆಲುವಿಗೆ 289 ರನ್ ಬೇಕಿದ್ರೆ, ಭಾರತಕ್ಕೆ 8 ವಿಕೆಟ್ಗಳಿ ಬೇಕಿವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ