newsfirstkannada.com

ಟಿ-20 ಸರಣಿ ಆಸೆ ಇನ್ನೂ ಜೀವಂತ.. ಗಿಲ್, ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್​ಗೆ ಒಲಿದ ಗೆಲುವು

Share :

13-08-2023

    ಭಾರತ-ವೆಸ್ಟ್ ​ಇಂಡೀಸ್​​ 4ನೇ ಟಿ20 ಪಂದ್ಯ

    2-2 ರಿಂದ ಸರಣಿ ಸಮಬಲ.. ಇಂದು ಫೈನಲ್ ಫೈಟ್​​..!

    ಮೊದಲ ವಿಕೆಟ್​ಗೆ ದಾಖಲೆಯ ಸೆಂಚುರಿ ಜೊತೆಯಾಟ

ಅಬ್ಬಬ್ಬಾ ಎಂತಹ ವಿಕ್ಟರಿ ಗುರು..! ಗೆಲುವಂದ್ರೆ ಹೀಗಿರ್ಬೇಕು. ಎದುರಾಳಿ ಪಡೆ ಕನಸಲ್ಲೂ ಕನವರಿಸೋ ಹಾಗೇ. ವೆಸ್ಟ್ ವಿಂಡೀಸ್ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಚಂಡ ಗೆಲುವು ಸಾಧಿಸಿದೆ. 2-2 ರಿಂದ ಸರಣಿ ಸಮಬಲಗೊಂಡಿದ್ದು, ಇಂದು ನಡೆಯುವ ಫೈನಲ್​ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಫ್ಲೋರಿಡಾದಲ್ಲಿ ಟಾಸ್​ ಗೆದ್ದು ಸಾಲಿಡ್ ಓಪನಿಂಗ್ ಪಡೆಯುವ ವಿಂಡೀಸ್ ಲೆಕ್ಕಚಾರವನ್ನು ಇಂಡಿಯನ್​ ಬೌಲರ್ಸ್​ ತಲೆಕೆಳಗಾಗಿಸಿದ್ರು. ಅರ್ಷ್​ದೀಪ್ ಸಿಂಗ್​​ ಪವರ್​​​ಫುಲ್ ಸ್ಪೆಲ್​ ಮೂಲಕ ಕೈಲ್​ ಮೇಯರ್ಸ್​-ಬ್ರೆಂಡನ್​ ಕಿಂಗ್​​ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಡೇಂಜರಸ್​ ನಿಕೋಲಸ್ ಪೂರನ್​​ ಹಾಗೂ ಕ್ಯಾಪ್ಟನ್ ಪಾವೆಲ್​​​​ಗೆ ಚೈನಾಮ್ಯಾನ್​​​​ ಸ್ಪಿನ್​ ಕುಲ್ದೀಪ್ ಯಾದವ್​​ ಒಂದೇ ಓವರ್​​ನಲ್ಲಿ ಫುಲ್​​ ಸ್ಟಾಪ್​​ ಹಾಕಿದ್ರು.

5ನೇ ವಿಕೆಟ್​ಗೆ ಹೆಟ್ಮೆಯರ್​​-ಹೋಪ್​​​ ಜುಗಲ್​​ಬಂದಿ

57 ರನ್​ಗೆ 4 ವಿಕೆಟ್​​​ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿಂಡೀಸ್​​​ ತಂಡಕ್ಕೆ ಡೇರಿಂಗ್ ಬ್ಯಾಟರ್​ ಸಿಮ್ರನ್ ಹೆಟ್ಮೆಯರ್​ ಆಸರೆಯಾದ್ರು. ಭಾರತದ ಬೌಲರ್​ಗಳನ್ನ ಮನಸೋ ಇಚ್ಛೆ ದಂಡಿಸಿದ ಹೆಟ್ಮೆಯರ್​ ಹಾಫ್​​ಸೆಂಚುರಿ ಬಾರಿಸಿ ಶೈನ್ ಆದ್ರು. ಹೆಟ್ಮೆಯರ್​ಗೆ ಉತ್ತಮ ಸಾಥ್​​ ನೀಡಿದ ಶಾಯ್ ಹೋಪ್​ ಬಿರುಸಿನ 45 ರನ್​ ಗಳಿಸಿದ್ರು. ಇಬ್ಬರು 5ನೇ ವಿಕೆಟ್​ಗೆ ಸ್ಫೋಟಕ 49 ರನ್​​ಗಳ ಜೊತೆಯಾಟವಾಡಿದರು. ಇವರನ್ನ ಬಿಟ್ಟರೆ ಮಿಕ್ಕ ಬ್ಯಾಟ್ಸ್​​​ಮನ್​ಗಳು ಹೀಗೆ ಬಂದು ಹಾಗೇ ಹೋದ್ರು. ಫೈನಲಿ ವಿಂಡೀಸ್​ ತಂಡ 20 ಓವರ್​​ಗಳಲ್ಲಿ 178 ರನ್​​ ಕಲೆ ಹಾಕ್ತು.

ಗುಡುಗಿದ ಜೈಸ್ವಾಲ್​​​-ಗಿಲ್​​​.. ನಲುಗಿದ ಕೆರಿಬಿಯನ್ಸ್​​​​..!

ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್​​​​​ ಹಾಗೂ ಶುಭ್​​ಮನ್​ ಬೊಂಬಾಟ್​ ಓಪನಿಂಗ್ ಒದಗಿಸಿದ್ರು. ಪೈಪೋಟಿಗೆ ಬಿದ್ದವರಂತೆ ಸಿಕ್ಸರ್​​-ಬೌಂಡ್ರಿಗಳ ಮಳೆಗರೆದು ವಿಂಡೀಸ್​ ಬೌಲರ್ಸ್​ಗೆ ಬೆವರಿಳಿಸಿದರು.

ಜೈಸ್ವಾಲ್​​ ಡೆಬ್ಯು ಅರ್ಧಶತಕ.. ಗಿಲ್​ ಬ್ಯಾಕ್ ವಿತ್ ಬ್ಯಾಂಗ್​​​..!

ಯಾವ ಬೌಲರ್​​ಗೂ ಬಗ್ಗದ ಖತರ್ನಾಕ್​​​​​​​ ಯಂಗ್​ಪೇರ್​​ 10 ಓವರ್​​ಗಳಲ್ಲೇ ಸ್ಫೋಟಕ 100 ರನ್​ ಗಳಿಸಿ ಗೆಲುವನ್ನ ಖಾತ್ರಿಪಡಿಸಿತು. ವಿಂಡೀಸ್​ ಬೌಲರ್ಸ್​ ಬೆಂಡೆತ್ತಿದ ಗಿಲ್​​​​ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಬ್ಯಾಕ್​​ ವಿತ್ ಬ್ಯಾಂಗ್ ಮಾಡಿದ್ರು. ಇನ್ನೊಂದೆಡೆ ಡಿಸ್ಟ್ರಾಕಿವ್​ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್​​​ ನರಸಿಂಹನ ಉಗ್ರರೂಪವನ್ನೇ ತಾಳಿದ್ರು. ಜಸ್ಟ್​​ 33 ಎಸೆತಗಳಲ್ಲಿ ಡೆಬ್ಯು ಅರ್ಧಶತಕ ಪೂರೈಸಿದ್ರು.

ಭಾರತಕ್ಕೆ 9 ವಿಕೆಟ್​ಗಳ ಪ್ರಚಂಡ ಗೆಲುವು

ಅರ್ಧಶತಕ ಸಿಡಿಸಿದ ಬಳಿಕ ಗಿಲ್​​​​-ಜೈಸ್ವಾಲ್​​​ ಮತ್ತಷ್ಟು ವೈಲೆಂಟ್​​ ಆದ್ರು. ವಿಂಡೀಸ್ ಪಾಲಿಗೆ ಸಿಂಹಸ್ವಪ್ನರಾದ ಗಿಲ್​ ಸ್ಪೋಟಕ 77 ರನ್ ಸಿಡಿಸಿ ವಿಕ್ಟರಿ ಹೊಸ್ತಿಲಲ್ಲಿ ಔಟಾದ್ರು. ಫೈನಲಿ ಜೈಸ್ವಾಲ್​ ಅಜೇಯ 84 ಹಾಗೂ ತಿಲಕ್ ವರ್ಮಾ ಅಜೇಯ 7 ರನ್​ಗಳ ನೆರವಿನಿಂದ ಭಾರತ ತಂಡ ಇನ್ನೂ 18 ಎಸೆತ ಬಾಕಿ ಇರುವಂತೆಯೇ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. 2-2 ರಿಂದ ಸರಣಿ ಸಮಬಲಗೊಂಡಿದ್ದು ಇಂದು ಗೆದ್ದೋರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಟಿ-20 ಸರಣಿ ಆಸೆ ಇನ್ನೂ ಜೀವಂತ.. ಗಿಲ್, ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್​ಗೆ ಒಲಿದ ಗೆಲುವು

https://newsfirstlive.com/wp-content/uploads/2023/08/GIL.jpg

Load More