ಮೊದಲ 2 ಪಂದ್ಯ ಗೆದ್ದಿದ್ದ ವಿಂಡೀಸ್ಗೆ ಭಾರತ ಶಾಕ್
ಸರಣಿ ಕೈವಶ ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ಭಾರತ
ಟಿ20 ಸರಣಿಯನ್ನಾದ್ರೂ ವೆಸ್ಟ್ ಇಂಡೀಸ್ ಗೆಲ್ಲುತ್ತಾ..?
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಈಗಾಗಲೇ ಟೆಸ್ಟ್, ಏಕದಿನ ಸರಣಿಗಳನ್ನು ಗೆದ್ದು ವಿಜಯಮಾಲೆ ಹಾಕಿಕೊಂಡಿದೆ. ಸದ್ಯ ಟಿ20 ಸರಣಿಯು ಅಂತಿಮ ಘಟ್ಟ ತಲುಪಿದ್ದು ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ ಎರಡು ಟೀಮ್ಗಳು ಜಿದ್ದಾಜಿದ್ದಿಯಿಂದ 2-2 ರಿಂದ ಸಮಬಲ ಸಾಧಿಸಿವೆ. ಹೀಗಾಗಿ ಇಂದು ನಡೆಯುವ ಪಂದ್ಯವು ನಿರ್ಣಾಯಕವಾಗಿದ್ದು ಎರಡು ತಂಡಗಳಲ್ಲಿ ಯಾವುದು ಗೆಲ್ಲುತ್ತದೋ ಅದಕ್ಕೆ ಸರಣಿ ಕೈ ವಶವಾಗಲಿದೆ.
ಓಪನರ್ ಬ್ಯಾಟರ್ಸ್ ಆದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಮತ್ತೆ ಈ ಪಂದ್ಯದಲ್ಲಿ ಅಬ್ಬರಿಸಿದರೆ ಭಾರತಕ್ಕೆ ಗೆಲುವು ಪಕ್ಕಾ ಎನ್ನಲಾಗುತ್ತಿದೆ. ಭಾರತ ತಂಡ ಕೂಡ 5ನೇ ಪಂದ್ಯ ಗೆಲ್ಲಲು ಭಾರೀ ಕಸರತ್ತು ನಡೆಸಿದೆ. ತಿಲಕ್ ವರ್ಮಾ, ಸೂರ್ಯಕುಮಾರ್ ಬ್ಯಾಟ್ನಿಂದ ರನ್ ಹೊಳೆ ಹರಿದು ಬಂದರೆ ಕೆರಿಬಿಯನ್ನಿಂದ ಸರಣಿ ಕೈ ತಪ್ಪುವುದಂತು ಗ್ಯಾರಂಟಿ. ಇನ್ನು ವಿಂಡೀಸ್ ಕೂಡ ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನ ಸೋತಿದ್ದು ಟಿ20 ಸರಣಿಯನ್ನು ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸಿದೆ ಎಂದು ಹೇಳಲಾಗಿದೆ.
ಕ್ಯಾಪ್ಟನ್ ರೋವ್ಮನ್ ಪೊವೆಲ್ರ ಸಾರಥ್ಯದ ವಿಂಡೀಸ್ ಪಡೆ ಮೊದಲ ಎರಡು ಪಂದ್ಯಗಳನ್ನು ಗೆದ್ದು ಇನ್ನೇನು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿತ್ತು. ಆದರೆ ನಿರ್ದಿಷ್ಟ ಹೋರಾಟದಿಂದ 3 ಮತ್ತು 4ನೇ ಪಂದ್ಯವನ್ನು ಹಾರ್ದಿಕ್ ಸಾರಥ್ಯದ ಟೀಮ್ ಇಂಡಿಯಾ ಗೆದ್ದುಕೊಂಡಿತು. ಇದು ವಿಂಡೀಸ್ಗೆ ಭಾರೀ ಆಘಾತವನ್ನುಂಟು ಮಾಡಿದೆ. ಇದರಿಂದ ಸರಣಿಯಲ್ಲಿ ಎರಡು ತಂಡಗಳು ಸಮಬಲ ಸಾಧಿಸಿವೆ. ಇಂದು ರಾತ್ರಿ 8 ಗಂಟೆಗೆ ನಡೆಯುವ 5ನೇ ಟಿ20 ಪಂದ್ಯದಲ್ಲಿ ಯಾವ ತಂಡ ಜಯಭೇರಿ ಬಾರಿಸುವುದು ಆ ತಂಡಕ್ಕೆ ವಿಜಯ ಲಕ್ಷ್ಮಿ ಒಲಿಯಲಿದ್ದಾಳೆ.
ಇಂದಿನ 5ನೇ ಪಂದ್ಯವು ಫ್ಲೋರಿಡಾದ ಲಾಡರ್ಹಿಲ್ನಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಮ್ಯಾಚ್ ನಡೆಯಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ