newsfirstkannada.com

ಹಾರ್ದಿಕ್​ ಪಾಂಡ್ಯ ಸಾರಥ್ಯಕ್ಕೆ ಬೇಕಿದೆ ಭರವಸೆ; ನೂತನ ಸೆಲೆಕ್ಟರ್​ ಅಗರ್ಕರ್​ ಮುಂದಿರೋ ಅಸಲಿ ಸವಾಲುಗಳೇನು?

Share :

06-07-2023

    ಟಿ20 ವಿಶ್ವಕಪ್​ ಟೂರ್ನಿಯೇ ಟೀಮ್‌ ಇಂಡಿಯಾಕ್ಕೆ ಟಾರ್ಗೆಟ್​.!

    ರೋಹಿತ್​ ಇರಲ್ಲ.. ಅಡಕತ್ತರಿಯಲ್ಲಿ ಕೋಚ್​ ದ್ರಾವಿಡ್​ ಭವಿಷ್ಯ

    ಮುಂದಿನ ಟಿ20 ವಿಶ್ವ​ಕಪ್​ ಗೆಲ್ಲಲು ಬಿಸಿಸಿಐನಿಂದ ಬಿಗ್​ ಪ್ಲಾನ್​

ಕೊನೆಗೂ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿಯ ಮುಖ್ಯಸ್ಥನ ಹುದ್ದೆಗೆ ಸಮರ್ಥ ಅಭ್ಯರ್ಥಿ ಬಂದಾಗಿದೆ. ಸಾಕಷ್ಟು ಲೆಕ್ಕಾಚಾರ ಹಾಕಿ, ಎಲ್ಲಾ ಫಾರ್ಮೆಟ್​ ಕ್ರಿಕೆಟ್​ ಆಡಿರೋ ಅಜಿತ್​ ಅಗರ್ಕರ್​ಗೆ ಬಿಸಿಸಿಐ ಮಣೆ ಹಾಕಿದೆ. ಬಿಸಿಸಿಐ ಏನೋ ಸ್ಟಾರ್​​ ಆಟಗಾರನಿಗೆ ಪಟ್ಟ ಕಟ್ಟಿ ಕೈ ತೊಳೆದುಕೊಳ್ತು. ಈಗ ಅಗರ್ಕರ್​ ಮುಂದಿರೋದು ಚಾಲೆಂಜ್​. ಅದ್ರಲ್ಲೂ, ಫಸ್ಟ್​​ ಟಾಸ್ಕೇ ಅಗರ್ಕರ್​ ಪಾಲಿಗೆ​ ಟಫೆಸ್ಟ್​​ ಟಾಸ್ಕ್ ಆಗಿದೆ​​.

ಟೀಮ್​ ಇಂಡಿಯಾ ನೂತನ ಸೆಲೆಕ್ಟರ್​ ಆಗಿ ಆಯ್ಕೆಯಾಗಿರುವ ಅಜಿತ್​ ಅಗರ್ಕರ್​ ಮುಂದೆ ಸಾಲು ಸಾಲು ಸವಾಲಿವೆ. ಏಕದಿನ ವಿಶ್ವಕಪ್​ಗೆ ಬಲಿಷ್ಠ ತಂಡದ ಆಯ್ಕೆ, ಸೀನಿಯರ್​ ಆಟಗಾರರ ಭವಿಷ್ಯ ನಿರ್ಧಾರ, ರೋಹಿತ್​ ಉತ್ತರಾಧಿಕಾರಿ ನೇಮಕ. ಹೀಗೆ ದೊಡ್ಡ ದೊಡ್ಡ ಸವಾಲುಗಳು ಅಗರ್ಕರ್​ ಮುಂದಿವೆ.

ವೆಸ್ಟ್‌ ಇಂಡೀಸ್​ ಸರಣಿಯಿಂದಲೇ ಸಿದ್ಧವಾಗಬೇಕು ಬ್ಲೂ ಪ್ರಿಂಟ್​.!

2007ರ ಚೊಚ್ಚಲ ಆವೃತ್ತಿಯಲ್ಲಿ ಟಿ20 ವಿಶ್ವಕಪ್​ ಕಿರೀಟಕ್ಕೆ ಮುತ್ತಿಕ್ಕಿದ ಟೀಮ್​ ಇಂಡಿಯಾ ಆ ಬಳಿಕ ಟಿ20 ಕಿರೀಟ ಗೆಲ್ಲುವಲ್ಲಿ ವಿಫಲವಾಗಿದೆ. ಟಿ20 ಫಾರ್ಮೆಟ್​ನಲ್ಲಿ ಎಷ್ಟೇ ಬಲಿಷ್ಠ ತಂಡವಾಗಿ ರೂಪುಗೊಂಡರು ಚಾಂಪಿಯನ್​ ಪಟ್ಟ ಕನಸಾಗಿ ಉಳಿದಿದೆ. 2024ರಲ್ಲಿ ವೆಸ್ಟ್ ​ಇಂಡೀಸ್​ ಹಾಗೂ ಯುಎಸ್​ಎನಲ್ಲಿ ನಡೆಯೋ ಟೂರ್ನಿಯಲ್ಲಾದ್ರೂ, ಕಪ್​ ಗೆಲ್ಲಬೇಕು ಅನ್ನೋದು ಬಿಸಿಸಿಐನ ಲೆಕ್ಕಾಚಾರವಾಗಿದೆ. ಹಾಗಾಗಬೇಕಂದ್ರೆ ಈ ಬಾರಿಯ ಇಂಡೀಸ್​ ಪ್ರವಾಸದಿಂದಲೇ ಬ್ಲ್ಯೂ ಪ್ರಿಂಟ್​ ಸಿದ್ಧವಾಗಬೇಕಿದೆ.

ಅಜಿತ್​ ಅಗರ್ಕರ್​ ಹೆಗಲ ಮೇಲಿದೆ ಪೂರ್ತಿ ಭಾರ..!

ಕಳೆದ ಟಿ20 ವಿಶ್ವಕಪ್​ ಬಳಿಕ ರೋಹಿತ್​ ಶರ್ಮಾ ಟಿ20 ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ 2024ರ ಟಿ20 ವಿಶ್ವಕಪ್​ನಿಂದ ಹೊರಗುಳಿಯೋದು ಬಹುತೇಕ ಕನ್​ಫರ್ಮ್​​. ಇನ್ನು ಕೋಚ್​​ ದ್ರಾವಿಡ್​​, ಒಪ್ಪಂದ ಏಕದಿನ ವಿಶ್ವಕಪ್​ ಬಳಿಕ ಮುಗಿಯಲಿದೆ. ಆ ಬಳಿಕ ದ್ರಾವಿಡ್​ ಮುಂದುವರೆಯೋದು ಅನುಮಾನ. ಹೀಗಾಗಿ ಭವಿಷ್ಯದ ಟಿ20 ತಂಡವನ್ನ ರೂಪಿಸುವ ಸಂಪೂರ್ಣ ಜವಾಬ್ದಾರಿ ಈಗ ಅಜಿತ್​ ಅಗರ್ಕರ್​ ಹೆಗಲೇರಿದೆ.

ಕ್ಯಾಪ್ಟನ್​ ಯಾರು ಎಂಬ ಪ್ರಶ್ನೆಗೆ ಬೇಕಿದೆ ಉತ್ತರ.!

ಕಳೆದ ಟಿ20 ವಿಶ್ವಕಪ್​ ಅಂತ್ಯದ ಬಳಿಕ ಹಾರ್ದಿಕ್​ ಪಾಂಡ್ಯನೇ ಶಾರ್ಟೆಸ್ಟ್​ ಫಾರ್ಮೆಟ್​​ನಲ್ಲಿ ತಂಡವನ್ನ ಮುನ್ನಡೆಸ್ತಾ ಬರುತ್ತಿದ್ದಾರೆ. ಟಿ20 ತಂಡಕ್ಕೆ ಇನ್ಮುಂದೆ ಹಾರ್ದಿಕ್​ ಪಾಂಡ್ಯ ಸಾರಥಿ ಎಂಬ ಮಾತು ಬಿಸಿಸಿಐ ಮೂಲಗಳಿಂದ ಪದೇ ಪದೇ ಕೇಳಿ ಬಂದಿದೆ. ಆದ್ರೆ, ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಇದನ್ನು ಓದಿ: Pawan Kalyan: ಡಿವೋರ್ಸ್ ವದಂತಿಗೆ ಪವನ್ ಕಲ್ಯಾಣ್ ಸ್ಪಷ್ಟನೆ -ನಿಟ್ಟುಸಿರು ಬಿಟ್ಟ ಅಭಿಮಾನಿಗಳು

ಟಿ20 ಫಾರ್ಮೆಟ್​ನಿಂದ ಸೀನಿಯರ್​ ಆಟಗಾರರನ್ನ ಹೊರಗಿಟ್ಟು, ಯಂಗ್​​ಸ್ಟರ್​​ಗಳನ್ನ ಕರೆತರಲು ಬಿಸಿಸಿಐ ತೆರೆಮರೆಯಲ್ಲೇ ಕಸರತ್ತು ನಡೆಸ್ತಿದೆ. ಸರಣಿಯಿಂದ ಸರಣಿಗೆ ಯುವ ಆಟಗಾರರಿಗೆ ಚಾನ್ಸ್​ ನೀಡ್ತಾ ಬಂದಿದೆ. ಆದ್ರೆ, ಸ್ಥಾನಕ್ಕಿರೋ ಪೈಪೋಟಿ ಆಟಗಾರರಲ್ಲಿ ಅಭದ್ರತೆಯನ್ನ ಸೃಷ್ಟಿಸಿದೆ. ಈ ಆತಂಕದಿಂದ ಯುವ ಆಟಗಾರರನ್ನ ಹೊರ ತಂದು ಕೋರ್​ ಟೀಮ್​ ಕಟ್ಟೋ ಸವಾಲು ಅಗರ್ಕರ್​ ಹೆಗಲಮೇಲಿದೆ.

ಮುಂಬರುವ ಅಕ್ಟೋಬರ್​ -ನವೆಂಬರ್​​ನಲ್ಲಿ ನಡೆಯೋ ಏಕದಿನ ವಿಶ್ವಕಪ್​ ಬಳಿಕ ಟೀಮ್​ ಇಂಡಿಯಾ ಹೆಚ್ಚು ಹೆಚ್ಚು ಟಿ20 ಸರಣಿಗಳನ್ನ ಆಡಲಿದೆ. ಸಿರೀಸ್​​ ಬೈ ಸಿರೀಸ್​​ ಆಟಗಾರರನ್ನ ಶಾರ್ಟ್​ ಲಿಸ್ಟ್​ ಮಾಡುವ ಅವಕಾಶವಿದೆ. ಆದ್ರೂ, ಮುಂದಿನ ಎಲ್ಲ ಲೆಕ್ಕಾಚಾರಗಳು ಸಲೀಸಾಗಿ ನಡೆಯಬೇಕಂದ್ರೆ, ಈ ವೆಸ್ಟ್​ ಇಂಡೀಸ್​ ಸರಣಿಯಿಂದ ಸಿದ್ಧತೆ ಆರಂಭಿಸಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​ ಪಾಂಡ್ಯ ಸಾರಥ್ಯಕ್ಕೆ ಬೇಕಿದೆ ಭರವಸೆ; ನೂತನ ಸೆಲೆಕ್ಟರ್​ ಅಗರ್ಕರ್​ ಮುಂದಿರೋ ಅಸಲಿ ಸವಾಲುಗಳೇನು?

https://newsfirstlive.com/wp-content/uploads/2023/07/ISHAN_KISHAN_HARDIK_PANDYA.jpg

Load More