newsfirstkannada.com

ಟಿ-20ಯಲ್ಲಿ ಭಾರತದ ಹುಲಿಗಳ ಆರ್ಭಟ ನಡೆಯಲಿಲ್ಲ.. ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾಗೆ ಭಾರೀ ಮುಖಭಂಗ…!

Share :

04-08-2023

    ಭಾರತ-ವಿಂಡೀಸ್ ಮೊದಲ ಟಿ20 ಪಂದ್ಯ

    ಪಾವೆಲ್​​​​-ಪೂರನ್​ ಅಬ್ಬರಕ್ಕೆ ಬೆಚ್ಚಿಬಿದ್ದ ಭಾರತ..!

ಟೆಸ್ಟ್​​-ಒನ್ಡೇ ಸರಣಿ ಸೋತು ಮುಖಭಂಗ ಅನುಭವಿಸಿದ್ದ ವೆಸ್ಟ್​ಇಂಡೀಸ್​ ತಂಡ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. ವಿಂಡೀಸ್​​​ ಶಿಸ್ತುಬದ್ಧ ದಾಳಿಗೆ ಬೆದರಿ ಭಾರತ ತಂಡ ಮೊದಲ ಟಿ20 ಯಲ್ಲಿ ವೀರೋಚಿತ ಸೋಲು ಕಾಣ್ತು. ಟಿ20 ಸ್ಪೆಷಲಿಸ್ಟ್​ಗಳ ಫೇಲ್ಯೂರ್​​ ಭಾರತದ ವಿಕ್ಟರಿ ಕನಸಿಗೆ ಕೊಳ್ಳಿಯಿಟ್ಟಿತು.

ಟ್ರಿನಿಡಾಡ್​ನಲ್ಲಿ ಟಾಸ್​​ ಗೆದ್ದು ಬ್ಯಾಟಿಂಗಿಳಿದ ವೆಸ್ಟ್​ಇಂಡೀಸ್​ಗೆ ಬ್ರೆಂಡನ್​ ಕಿಂಗ್​​ ಬಿರುಸಿನ ಆರಂಭ ಒದಗಿಸಿದರು. ಮೊದಲ ನಾಲ್ಕು ಓವರ್​​ಗಳಲ್ಲಿ ವಿಂಡೀಸ್​​​​ ಓಪನರ್ಸ್​ ಭಾರತೀಯ ಬೌಲರ್​ಗಳ ಬೆಂಡೆತ್ತಿದ್ರು.

ಒಂದೇ ಓವರ್​​ನಲ್ಲಿ ಕಿಂಗ್​​-ಮೇಯರ್ಸ್​ ಬಲಿ ಪಡೆದ ಚಹಲ್

ಭಾರತಕ್ಕೆ ಸವಾಲಾಗಿದ್ದ ಆರಂಭಿಕರಿಗೆ ಸ್ಪಿನ್ ಮ್ಯಾಜಿಶಿಯನ್​​​ ಯುಜುವೇಂದ್ರ ಚಹಲ್​​​​ ಖೆಡ್ಡಾ ತೋಡಿದ್ರು. ಎಸೆದ ಮೊದಲ ಓವರ್​​​ನಲ್ಲೇ ಬ್ರೆಂಡನ್​ ಕಿಂಗ್​ ಹಾಗೂ ಕೈಲ್​​​ ಮೇಯರ್ಸ್​ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಬಳಿಕ ಬಂದ ಜಾನ್ಸನ್​ ಕಾರ್ಲೊಸ್​​​​​​ 3 ರನ್​​​ಗೆ ಸುಸ್ತಾದ್ರೆ, ನಿಕೋಲಸ್ ಪೂರನ್ ಸ್ಪೋಟಕ 41 ರನ್ ಸಿಡಿಸಿ ಹಾರ್ದಿಕ್​ ಪಾಂಡ್ಯಗೆ ವಿಕೆಟ್​ ಒಪ್ಪಿಸಿದ್ರು.

ಸ್ಲಾಗ್ ಓವರ್​​ನಲ್ಲಿ ಪಾವೆಲ್​​​ ಆರ್ಭಟ.. ವಿಂಡೀಸ್​​​ 149/6..

ಪೂರನ್​​ ಬಳಿಕ ಕ್ರೀಸ್​​ಗೆ ಎಂಟ್ರಿಕೊಟ್ಟ ಕ್ಯಾಪ್ಟನ್ ರೋವ್​ಮನ್​​ ಪಾವೆಲ್​ ಸ್ಲಾಗ್​ ಓವರ್​​ಗಳಲ್ಲಿ ಸಿಕ್ಸರ್​​​ ಬೌಂಡ್ರಿಗಳ ಮಳೆಗರೆದ್ರು. 32 ಎಸೆತಗಳಲ್ಲಿ ಸ್ಪೋಟಕ 48 ರನ್​ ಚಚ್ಚಿದ್ರು. ಪರಿಣಾಮ ವಿಂಡೀಸ್​ ತಂಡ 20 ಓವರ್​ಗಳಲ್ಲಿ 6 ವಿಕೆಟ್​ಗೆ 149 ರನ್​ ಕಲೆ ಹಾಕ್ತು.

ಕೈಕೊಟ್ಟ ಓಪನರ್ಸ್​.. ಬೇಗನೆ ಅಸ್ತವಾದ ‘ಸೂರ್ಯ’

150 ರನ್ ಗುರಿ ಬೆನ್ನಟ್ಟಿದ ಭಾರತಕ್ಕೆ ಓಪನರ್ಸ್​ ಕೈಕೊಟ್ರು. ಲೆಫ್ಟಿ ಬ್ಯಾಟರ್​ ಇಶಾನ್ ಕಿಶನ್​​​​​​ 6 ರನ್​ಗೆ ವಿಕೆಟ್​​​​​​​​ ಒಪ್ಪಿಸಿದ್ರೆ ಶುಭ್​​ಮನ್ ಗಿಲ್ ಆಟ ಜಸ್ಟ್​​ 3ಕ್ಕೆ ಸ್ಟಾಪ್​​ ಆಯ್ತು.

ಡೆಬ್ಯು ಪಂದ್ಯದಲ್ಲಿ ತಿಲಕ್ ವರ್ಮಾ ಶೈನಿಂಗ್​​​..!

ಅದ್ಭುತ ಕ್ಯಾಚ್​ ಹಿಡಿದು ಶೈನ್ ಆಗಿದ್ದ ಡೆಬ್ಯುಡಾಂಟ್​ ತಿಲಕ್ ವರ್ಮಾ ಬ್ಯಾಟಿಂಗ್​​ನಲ್ಲಿ ಕಮಾಲ್ ಮಾಡಿದ್ರು. 22 ಎಸೆತಗಳಲ್ಲಿ ಬಿರುಸಿನ 39 ರನ್​​ ಗಳಿಸಿ ಹಾಫ್​​ಸೆಂಚುರಿ ಹೊಸ್ತಿಲಲ್ಲಿ ಎಡವಿದ್ರು.

ಸದ್ದು ಮಾಡದ ಹಾರ್ದಿಕ್​​​-ಸ್ಯಾಮ್ಸನ್​ ಬ್ಯಾಟ್​​​..!

ಬಿಗ್ ಇನ್ನಿಂಗ್ಸ್ ಕಟ್ಟಿ ಮಿಂಚಬೇಕಿದ್ದ ಕ್ಯಾಪ್ಟನ್ ಹಾರ್ದಿಕ್​ ಪಾಂಡ್ಯ 12 ರನ್​ ಗಳಿಸಿ ನಿರಾಸೆ ಮೂಡಿಸಿದ್ರೆ ಬಿಗ್​​ ಹಿಟ್ಟರ್ ಸಂಜು ಸ್ಯಾಮ್ಸನ್ ಎರಡಂಕಿಗೆ ರನೌಟಾಗಿ ಗೂಡು ಸೇರಿದ್ರು.

ಕೊನೆ ಭರವಸೆ ಆಗಿ ಉಳಿದಿದ್ದ ಆಲ್​ರೌಂಡರ್ ಅಕ್ಷರ್ ಪಟೇಲ್​ 11 ರನ್ ಗಳಿಸಿ ಔಟಾಗುತ್ತಿದ್ದಂತೆ ಭಾರತಕ್ಕೆ ಸೋಲು ಖಚಿತವಾಯ್ತು. ಅಂತಿಮ ಓವರ್​​ನಲ್ಲಿ ಗೆಲುವಿಗೆ 10 ಗಳಿಸಬೇಕಿದ್ದ ಭಾರತ 4 ರನ್​​ಗಳಿಂದ ವಿರೋಚಿತ ಸೋಲು ಕಾಣ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ-20ಯಲ್ಲಿ ಭಾರತದ ಹುಲಿಗಳ ಆರ್ಭಟ ನಡೆಯಲಿಲ್ಲ.. ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾಗೆ ಭಾರೀ ಮುಖಭಂಗ…!

https://newsfirstlive.com/wp-content/uploads/2023/08/INDvsWI.jpg

Load More