newsfirstkannada.com

×

ಸೂರ್ಯಕುಮಾರ್​ ಬ್ಯಾಟಿಂಗ್​ ಮತ್ತೆ ವಿಫಲ.. ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್​ಗೆ ಇವತ್ತಾದ್ರೂ ಸಿಗುತ್ತಾ ಚಾನ್ಸ್?

Share :

Published July 29, 2023 at 10:28am

Update July 29, 2023 at 10:29am

    ಬ್ಯಾಟಿಂಗ್ ಕ್ರಮಾಂಕದಲ್ಲಿ ಮತ್ತೆ ಪ್ರಯೋಗ ಮಾಡೋದು ಗ್ಯಾರಂಟಿ

    ಇಂದಿನ ಪಂದ್ಯದಲ್ಲಿ ಬದಲಾವಣೆಗೆ ಕೈ ಹಾಕುತ್ತಾ ಮ್ಯಾನೇಜ್​​ಮೆಂಟ್?

    ಈ ಪಂದ್ಯ ಟೀಮ್​ ಇಂಡಿಯಾ ಗೆದ್ದರೆ ಸರಣಿ ಕೈವಶ ಆಗೋದು ಪಕ್ಕಾ

ವೆಸ್ಟ್​ ಇಂಡೀಸ್ ಪ್ರವಾಸದ ಟೆಸ್ಟ್​ ಸರಣಿ ಗೆದ್ದ ಟೀಮ್ ಇಂಡಿಯಾ, ಏಕದಿನ ಸರಣಿಯಲ್ಲೂ ನಿರೀಕ್ಷೆಯಂತೆ ಶುಭಾರಂಭ ಮಾಡಿದೆ. ಇದೀಗ ಏಕದಿನ ಸರಣಿಯ ಕೈವಶ ಮಾಡಿಕೊಳ್ಳುವ ಲೆಕ್ಕಚಾರದಲ್ಲಿರುವ ಟೀಮ್ ಇಂಡಿಯಾ ಪರ ಏನೆಲ್ಲ ಪ್ರಯೋಗಗಳು ನಡೆಯಬಹುದು!

ಮೊದಲ ಏಕದಿನ ಮ್ಯಾಚ್ ಗೆದ್ದಾಯ್ತು. ಈಗ ಟೀಮ್ ಇಂಡಿಯಾ ಚಿತ್ತ 2ನೇ ಏಕದಿನ ಪಂದ್ಯದ ಮೇಲೆ ನೆಟ್ಟಿದೆ. ಇಂದಿನ ಬಾರ್ಬಡೋಸ್​ನ 2ನೇ ಪಂದ್ಯದಲ್ಲೇ ವಿಂಡೀಸ್​​ನ ಮಣ್ಣು ಮುಕ್ಕಿಸಿ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ. ಆದರೆ, ಕಠಿಣ ಪಿಚ್​ನಲ್ಲಿ ಸಾಧಾರಣ ಮೊತ್ತವನ್ನೇ ಚೇಸ್​ ಮಾಡೋಕೆ ತಿಣುಕಾಡಿದ್ದ ಟೀಮ್ ಇಂಡಿಯಾ, ಈಗ ಅದೇ ಪಿಚ್​​ನಲ್ಲಿ ಪ್ರಯೋಗತ್ಮಕ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್

ಬದಲಾವಣೆಗೆ ಕೈ ಹಾಕಲಿದೆ ಮ್ಯಾನೇಜ್​​ಮೆಂಟ್..!

ಮೊದಲ ಪಂದ್ಯ ಗೆದ್ದಿರೋ ಟೀಮ್ ಇಂಡಿಯಾ, ಇಂದಿನ ಪಂದ್ಯದಲ್ಲಿ ಮತ್ತೆ ಎಕ್ಸ್​ಪರಿಮೆಂಟ್​ ಮೊರೆ ಹೋಗ್ತಿದೆ. ಈಗಾಗಲೇ ಆಟಗಾರರ ಪಯೋಗದ ಬಗ್ಗೆ ಕೋಚ್ ದ್ರಾವಿಡ್ ಆ್ಯಂಡ್​ ರೋಹಿತ್ ಕ್ಲಿಯರೆನ್ಸ್ ನೀಡಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್, ಉನಾದ್ಕಟ್, ಅಕ್ಷರ್ ಪಟೇಲ್​ಗೆ ಚಾನ್ಸ್​ ನೀಡುವ ಲೆಕ್ಕಚಾರ ಇದೆ. ಆದ್ರೆ, ಇಂದಿನ ಆಡುವ 11ರ ಬಳಗದಲ್ಲಿ ಯಾರಿಗೆ ಚಾನ್ಸ್​ ನೀಡ್ತಾರೆ ಎಂಬ ಕುತೂಹಲ ಹುಟ್ಟಿಹಾಕಿದೆ.

ಬ್ಯಾಟಿಂಗ್​ನಲ್ಲಿ ಮತ್ತೆ ಎಕ್ಸ್​ಪೀರಿಮೆಂಟ್ ಸಾಧ್ಯತೆ..!

ಮೊದಲ ಏಕದಿನ ಪಂದ್ಯದಲ್ಲಿ ಮಿಡಲ್ ಆರ್ಡರ್ ಬ್ಯಾಟಿಂಗ್​ ಲೈನ್​​-ಆಫ್​​ನ ಎಕ್ಸ್​ಪರಿಮೆಂಟ್​​ಗೆ ಇಳಿಸಿದ್ದ ಟೀಮ್​ ಮ್ಯಾನೇಜ್​​ಮೆಂಟ್, ಇಂದಿನ ಪಂದ್ಯದಲ್ಲೂ ಆಟಗಾರರ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡೋದು ಗ್ಯಾರಂಟಿ. ಯಾಕಂದ್ರೆ, ಮುಂದಿನ ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಆಟಗಾರರ ಸಾಮರ್ಥ್ಯ ಕಂಡುಕೊಳ್ಳಲು ಹಾಗೂ ಎಲ್ಲಕ್ಕೂ ಆಟಗಾರರು ಮೆಂಟಲಿ ರೆಡಿ ಮಾಡೋ ನಿಟ್ಟಿನಲ್ಲಿ ಪ್ರಯೋಗ ತಪ್ಪಿದಿಲ್ಲ.

ಜಡೇಜಾ-ಕುಲ್ದೀಪ್​​ ಸ್ಪಿನ್ ಜೋಡಿ ಫಿಕ್ಸ್..!

ಮೊದಲ ಏಕದಿನ ಪಂದ್ಯದಲ್ಲಿ ನಿಜಕ್ಕೂ ವಿಂಡೀಸ್​ ಪಡೆಯನ್ನ ತಿಪ್ಪರ್ಲಾಗ ಹಾಕಿಸಿದ್ದು, ಜಡೇಜಾ ಹಾಗೂ ಕುಲ್ದೀಪ್ ಜೋಡಿ. ಬಾರ್ಬಡೋಸ್​ನ ಸ್ಪಿನ್ ಫ್ರೆಂಡ್ಲಿಯಲ್ಲಿ ಸ್ಪಿನ್ನರ್​ಗಳದ್ದೇ ಪಾರುಪತ್ಯ. ಈ ನಿಟ್ಟಿನಲ್ಲಿ ಜಡೇಜಾ ಹಾಗೂ ಕುಲ್ದೀಪ್ ಜೋಡಿ ಕಣಕ್ಕಿಳಿಯೋದು ಗ್ಯಾರಂಟಿ. ಇವರಿಗೆ ಸಾಥ್​ ನೀಡಲು ಇಂದು ಅಕ್ಷರ್​​​​​​ ಪಟೇಲ್​ ಕಣಕ್ಕಿಳಿದರೂ ಅಚ್ಚರಿ ಇಲ್ಲ.

ಸೂರ್ಯಕುಮಾರ್​ ಯಾದವ್​ಗೆ ಲಾಸ್ಟ್ ವಾರ್ನಿಂಗ್..?

ಟಿ20 ಕ್ರಿಕೆಟ್​ನ ನಂಬರ್​​.1 ಬ್ಯಾಟರ್ ಆಗಿರೋ ಸೂರ್ಯಕುಮಾರ್, ಏಕದಿನ ಫಾರ್ಮೆಟ್​ನಲ್ಲಿ ಅಟ್ಟರ್​ಫ್ಲಾಫ್ ಆಗಿದ್ದಾರೆ. ಮೊದಲ ಪಂದ್ಯದಲ್ಲೂ ನಿರೀಕ್ಷೆ ಉಳಿಸಿಕೊಳ್ಳದ ಸೂರ್ಯಕುಮಾರ್​​ ಯಾದವ್​​ಗೆ, ಮತ್ತೊಂದು ಚಾನ್ಸ್ ಸಿಗೋ ನಿರೀಕ್ಷೆ ಸಹಜವಾಗೇ ಇದೆ. ಆದ್ರೆ, ಇಂದಿನ ಪಂದ್ಯದಲ್ಲಿ ಸೂರ್ಯ ಮತ್ತೊಮ್ಮೆ ಫೇಲ್ಯೂರ್ ಆಗಿಬಿಟ್ರೆ, ಅಂತಿಮ ಪಂದ್ಯದಲ್ಲಿ ಬೆಂಚ್ ಕಾಯೋದು ಕನ್ಫರ್ಮ್​..

ಅಕ್ಷರ್ ಪಟೇಲ್ ಮತ್ತು ರವಿಂದ್ರ ಜಡೇಜಾ

ಐವರು ಬೆಂಚ್​ನಲ್ಲಿ, ಅವ್ರ ಕಥೆ ಏನು..?

ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದ ಸಂಜು ಸ್ಯಾಮ್ಸನ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಜೈದೇವ್​ ಉನಾದ್ಕಟ್, ಋತುರಾಜ್​​ ಬೆಂಚ್ ಕಾದಿದ್ದರು. ಆದ್ರೆ, ಈ ಐವರಲ್ಲಿ ಪೈಕಿ ಕನಿಷ್ಠ ಇಬ್ಬರಿಗೆ ಚಾನ್ಸ್ ಸಿಗೋ ಸಾಧ್ಯತೆ ಇದೆ. ಅವರಲ್ಲಿ ಸಂಜು ಸ್ಯಾಮ್ಸನ್ ಮೊದಲಿಗರಾದರೂ ಅಚ್ಚರಿ ಇಲ್ಲ. ವೇಗಿ ಉನಾದ್ಕಟ್​ ಜೊತೆ ಅಕ್ಷರ್​ ಪಟೇಲ್ ಕೂಡ ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ. ಇನ್ನುಳಿದಂತೆ ಋತುರಾಜ್ ಗಾಯಕ್ವಾಡ್​​, ಯಜುವೇಂದ್ರ ಚಹಲ್ ಬೆಂಚ್ ಕಾಯಬೇಕಿರೋದು ಬಹುತೇಕ ಕನ್ಫರ್ಮ್..

ಮಳೆಗೆ ಆಹುತಿಯಾಗುತ್ತಾ ಇಂದಿನ ಏಕದಿನ ಪಂದ್ಯ..?

ಮೊದಲ ಪಂದ್ಯ ನಡೆಯಲು ಅನುವು ಮಾಡಿಕೊಟ್ಟಿದ್ದ ವರುಣರಾಯ, ಇಂದಿನ ಪಂದ್ಯಕ್ಕೆ ಅಡ್ಡಿಯುಟ್ಟು ಮಾಡುವ ಸಾಧ್ಯತೆ ಇದೆ. ಶೇಖಡ 78ರಿಂದ 86ರಷ್ಟು ಮಳೆ ಬೀಳುವ ಎಚ್ಚೆರಿಕೆಯನ್ನ ಹವಾಮಾನ ಇಲಾಖೆ ನೀಡಿದೆ. ಅದೇನೇ ಆಗಲಿ. ಏಷ್ಯಾಕಪ್​ಗೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಜಸ್ಟ್​ ಎರಡೇ ಎರಡು ಪಂದ್ಯಗಳು ಮಾತ್ರವೇ ಮುಂದಿವೆ. ಹೀಗಾಗಿ ಸಿಕ್ಕ ಅವಕಾಶದಲ್ಲಿ ಪ್ರಯೋಗಕ್ಕಿಳಿಸಲು ಟೀಮ್ ಮ್ಯಾನೇಜ್​ಮೆಂಟ್ ಮುಂದಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸೂರ್ಯಕುಮಾರ್​ ಬ್ಯಾಟಿಂಗ್​ ಮತ್ತೆ ವಿಫಲ.. ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್​ಗೆ ಇವತ್ತಾದ್ರೂ ಸಿಗುತ್ತಾ ಚಾನ್ಸ್?

https://newsfirstlive.com/wp-content/uploads/2023/07/SURYA_KUMAR_SANJU_AXAR.jpg

Load More