ವಿಶ್ವಕಪ್ ಟೂರ್ನಿಯ 2 ಫೈನಲ್ ಪಂದ್ಯಗಳನ್ನು ಆಡಿದ ಆಟಗಾಱರು?
ಸಚಿನ್ ತೆಂಡೂಲ್ಕರ್, ಸೆಹ್ವಾಗ್ ಸೇರಿ ಇನ್ನು ಭಾರತ ಪ್ಲೇಯರ್ಸ್ ಇದ್ದಾರೆ
ಸದ್ಯಕ್ಕೆ ವಿರಾಟ್ ಕೊಹ್ಲಿ ಎಷ್ಟನೇ ವಿಶ್ವಕಪ್ ಫೈನಲ್ ಪಂದ್ಯ ಆಡ್ತಿದ್ದಾರೆ.?
ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯಗಳಲ್ಲಿ ಮೊದಲಿನಿಂದಲೂ ಟೀಮ್ ಇಂಡಿಯಾದ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಕಪಿಲ್ ದೇವ್ ಹಾಗೂ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ 2 ಎರಡು ಬಾರಿ ವಿಶ್ವಕಪ್ ಗೆದ್ದಿದೆ. ಇಲ್ಲಿವರೆಗೆ ಏಕದಿನ ವಿಶ್ವಕಪ್ನ ಎರಡು ಫೈನಲ್ ಪಂದ್ಯಗಳನ್ನು ಆಡಿರುವ ಪ್ಲೇಯರ್ಸ್ ಎಂದರೆ ಸಚಿನ್ ತೆಂಡೂಲ್ಕರ್ ಸೇರಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ.
ವಿಶ್ವಕಪ್ ಟೂರ್ನಿ ಪ್ರಾರಂಭದಿಂದ ಭಾರತ ಆಡುತ್ತಲೇ ಬರುತ್ತಿದೆ. ಆಶ್ಚರ್ಯಕರ ಸಂಗತಿ ಎಂದರೆ ಇಲ್ಲಿವರೆಗೆ 2 ವರ್ಲ್ಡ್ಕಪ್ ಫೈನಲ್ ಪಂದ್ಯಗಳನ್ನು ಕೇವಲ 5 ಆಟಗಾರರು ಮಾತ್ರ ಆಡಿದ್ದಾರೆ. ಅವರೆಂದರೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಜಹೀರ್ ಖಾನ್ ಅವರು 2003, 2011ರ ವರ್ಲ್ಡ್ಕಪ್ ಫೈನಲ್ ಪಂದ್ಯಗಳಲ್ಲಿ ಪ್ರದರ್ಶನ ತೋರಿದ್ದರು. ಇವರು ಭಾರತದ ತಂಡದ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು ಎಂದು ತಿಳಿದು ಬಂದಿದೆ.
ವಿರಾಟ್ ಕೊಹ್ಲಿಯವರು 2ನೇ ಬಾರಿ ಫೈನಲ್ ಪಂದ್ಯದಲ್ಲಿ ಆಡುತ್ತಿರುವ ಭಾರತದ 6ನೇ ಆಟಗಾರರಾಗಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ ಕಳೆದ ವಿಶ್ವಕಪ್ ಪಂದ್ಯಗಳಲ್ಲಿ ಇದ್ದರೂ ಭಾರತ ಫೈನಲ್ಗೆ ತಲುಪಿರಲಿಲ್ಲ. ಸೆಮಿಫೈನಲ್ ಪಂದ್ಯದಲ್ಲೇ ಭಾರತ ಹಿಂದಿರುಗಿತ್ತು. ಆದ್ರೆ ಈ ಬಾರಿ ತವರಿನಲ್ಲೇ ಫೈನಲ್ ಪಂದ್ಯ ನಡೆಯುತ್ತಿದ್ದರಿಂದ ಭಾರತ ಎಲ್ಲ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿ, ಫೈನಲ್ ಮ್ಯಾಚ್ ಆಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ