Advertisment

ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ.. ಹೆಂಡತಿ ವಿರುದ್ಧ ಕೇಸ್​ ದಾಖಲಿಸಿದ ಪತಿ

author-image
AS Harshith
Updated On
ಅಬ್ಬಾ.. ಮಲಗಿದ್ದ ಗಂಡನ ಮೇಲೆ ಬಿಸಿ ಬಿಸಿ ಎಣ್ಣೆ ಸುರಿದ ಹೆಂಡತಿ; ಕಾರಣವೇನು?
Advertisment
  • 45 ವರ್ಷದ ಗಂಡನ ಕಿವಿಯನ್ನು ಕಚ್ಚಿದ ಹೆಂಡತಿ
  • ಸೆಕ್ಷನ್​ 324 ಅಡಿಯಲ್ಲಿ ಮಹಿಳೆ ವಿರುದ್ಧ ಎಫ್​ಐಆರ್​​
  • ತುಂಡಾದ ಕಿವಿಯನ್ನು ಶಸ್ತ್ರಚಿಕಿತ್ಸೆ ಮೂಲಕದ ಜೋಡಿಸಿದ ವೈದ್ಯರು

ದೆಹಲಿ: ಕೋಪದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಕಿವಿ ಕಚ್ಚಿದ ಘಟನೆ ಸುಲ್ತಾನ್​ಪುರಿಯಲ್ಲಿ ನಡೆದಿದೆ. 45 ವರ್ಷದ ಗಂಡನ ಕಿವಿಯನ್ನು ಕಚ್ಚಿದ ಪರಿಣಾಮ ಬಲ ಕಿವಿ ತುಂಡಾಗಿದ್ದು, ಕೊನೆಗೆ ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಲಾಗಿದೆ. ಈ ಸಂಬಂಧ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisment

ಗಂಡ ಕಿವಿಗೆ ಕಚ್ಚಿದ ಹೆಂಡತಿ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಪ್ರಕಾರ ಸೆಕ್ಷನ್​ 324 ಅಡಿಯಲ್ಲಿ ಮಹಿಳೆ ವಿರುದ್ಧ ಎಫ್​ಐಆರ್​​ ದಾಖಲಾಗಿದೆ. ಸದ್ಯ ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ನವೆಂಬರ್​ 20ರಂದು ಈ ಘಟನೆ ನಡೆದಿದೆ. ಗಂಡ ಬೆಳಿಗ್ಗೆ 9.20ಕ್ಕೆ ಕಸ ಎಸೆಯಲು ಮನೆಯಿಂದ ಹೊರ ಹೋಗಿದ್ದ. ಈ ವೇಳೆ ಹೆಂಡತಿ ಬಳಿ ಸ್ವಚ್ಛಗೊಳಿಸಲು ಹೇಳಿದ್ದಾನೆ. ಆದರೆ ಮನೆಗೆ ಬಂದ ಕೂಡಲೇ ಹೆಂಡತಿ ಆತನ ಬಳಿ ಜಗಳ ತೆಗೆದಿದ್ದಾಳೆ. ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಮನೆಯನ್ನು ಮಾರಿ ಪಾಲು ನೀಡುವಂತೆ ಪತ್ನಿ ಕೇಳಿಕೊಂಡಿದ್ದಾಳೆ. ಬಳಿಕ ಆಕೆಯನ್ನು ಅರ್ಥ ಮಾಡಿಸಲು ಪ್ರಯತ್ನಿಸಿದರು. ಆಕೆ ಜಗಳ ತೆಗೆದಳು. ಕೊನೆಗೆ ಹೊಡೆಯಲು ಯತ್ನಿಸಿದಳು. ಅಷ್ಟರಲ್ಲಿ ನಾನು ಆಕೆಯನ್ನು ತಡೆದೆ. ಬಳಿಕ ಮನೆಯಿಂದ ಹೊರ ಹೋಗುವ ವೇಳೆ ಆಕೆ ಹಿಂಭಾಗದಿಂದ ಬಂದು ನನ್ನ ಬಲ ಕಿವಿಯನ್ನು ಕಚ್ಚಿದ್ದಾಳೆ ಎಂದು ಗಂಡ ದೂರಿನಲ್ಲಿ ತಿಳಿಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment