ಪ್ರೀತಿಸಿ ಮದುವೆಯಾದ ದಂಪತಿ ಮಧ್ಯೆ ನಡೆದ ‘ನಾಲಿಗೆ’ ಕಿತ್ತಾಟ
ಮುತ್ತು ಕೊಡುವಾಗ ಜೋರಾಗಿ ನಾಲಿಗೆ ಕಚ್ಚಿ ಹೆಂಡತಿ ಕ್ರೌರ್ಯ
ಕಚ್ಚಿಸಿಕೊಂಡ ಗಂಡ ಪೊಲೀಸ್ ಠಾಣೆಗೆ ಹೋಗಿ ಹೇಳಿದ್ದೇನು?
ಕರ್ನೂಲ್: ಪ್ರೀತಿಸಿ ಮದುವೆಯಾದ ಹೆಂಡತಿ ತನ್ನ ಗಂಡನಿಗೆ ಮುತ್ತು ಕೊಡುವಾಗ ನಾಲಿಗೆಯನ್ನು ಗಟ್ಟಿಯಾಗಿ ಕಚ್ಚಿ ರಕ್ತ ಸುರಿಯುವಂತೆ ಮಾಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಗಂಡ, ಹೆಂಡ್ತಿ ಮಧ್ಯೆ ಒಂದಲ್ಲ ಒಂದು ಕಾರಣಕ್ಕೆ ಜಗಳಗಳು ನಡೆಯುತ್ತಾ ಇರುತ್ತೆ. ಆದ್ರೆ ಇಲ್ಲಿ ಗಂಡನ ಮೇಲಿನ ಕೋಪಕ್ಕೆ ಹೆಂಡತಿಯೊಬ್ಬಳು ಸೇಡು ತೀರಿಸಿಕೊಂಡಿದ್ದಾಳೆ. ಗಂಡ, ಹೆಂಡತಿಯ ಈ ನಾಲಿಗೆ ಕಿತ್ತಾಟ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಕರ್ನೂಲ್ ಜಿಲ್ಲೆಯ ಥಾರಚಂದ್ ನಾಯ್ಕ್ ಹಾಗೂ ಪುಷ್ಪಾವತಿ 2015ರಲ್ಲೇ ಪ್ರೀತಿಸಿ ಮದುವೆಯಾಗಿದ್ದರು. ಯಲ್ಲಮ್ಮಗುಟ್ಟಾ ಥಾಂಡಾದಲ್ಲಿ ಇವರಿಬ್ಬರು ನೆಲೆಸಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳೂ ಇದ್ದಾರೆ. ಅನ್ಯೋನ್ಯವಾಗಿದ್ದ ಗಂಡ, ಹೆಂಡ್ತಿ ಮಧ್ಯೆ ಕಳೆದ ಎರಡು ವರ್ಷಗಳಿಂದ ಆಗಾಗ ಜಗಳಗಳು ನಡೆಯುತ್ತಾ ಇತ್ತು. ಥಾಂಡಾದ ಸ್ಥಳೀಯ ನಿವಾಸಿಗಳು ಹಲವು ಬಾರಿ ಇವರಿಬ್ಬರ ಜಗಳವನ್ನು ನಿಲ್ಲಿಸೋ ಪ್ರಯತ್ನಪಟ್ಟಿದ್ದಾರೆ.
‘ಕಿರಿಕ್ ತೆಗೆದ ಗಂಡನಿಗೆ ನಾಲಿಗೆ ಕಚ್ಚಿದ ಹೆಂಡ್ತಿ’
ಕಳೆದ ಶುಕ್ರವಾರ ಕೌಟುಂಬಿಕ ಕಾರಣಕ್ಕೆ ಥಾರಚಂದ್ ನಾಯ್ಕ್ ಹಾಗೂ ಪುಷ್ಪಾವತಿ ಜೋರು ಜಗಳ ನಡೆದಿದೆ. ಮಾತಿಗೆ ಮಾತು, ಇವರಿಬ್ಬರ ಕಿತ್ತಾಟ ಇಡೀ ಬೀದಿಯ ಜನರಿಗೆಲ್ಲಾ ಕೇಳಿಸಿದೆ. ಸ್ವಲ್ಪ ಸಮಯದ ಬಳಿಕ ಇಬ್ಬರ ಕೋಪ ತಣ್ಣಗಾಗಿ ಜಗಳವೂ ನಿಂತಿದೆ. ಇಷ್ಟೆಲ್ಲಾ ಆದ ಮೇಲೂ ಥಾರಚಂದ್ ನಾಯ್ಕ್, ಪುಷ್ಪಾವತಿಗೆ ಮುತ್ತು ಕೊಡಲು ಹೋಗಿದ್ದಾನೆ. ಗಂಡ ಕಿಸ್ ಕೊಡಲು ಬಂದಾಗ ಕೋಪಗೊಂಡ ಪುಷ್ಪಾವತಿ ನಾಲಿಗೆಯನ್ನು ರಕ್ತ ಬರುವ ಹಾಗೆ ಕಚ್ಚಿದ್ದಾಳೆ. ಥಾರಚಂದ್ ನಾಯ್ಕ್ ಎಷ್ಟೇ ಪ್ರಯತ್ನಿಸಿದರು ಹೆಂಡತಿಯಿಂದ ತಪ್ಪಿಸಿಕೊಳ್ಳೋಕೆ ಆಗಿಲ್ಲ. ಪುಷ್ಪಾವತಿಯ ಈ ಕೃತ್ಯಕ್ಕೆ ಗಂಡನ ನಾಲಿಗೆಗೆ ಗಂಭೀರ ಗಾಯವಾಗಿದೆ.
ನಾಲಿಗೆ ಕಚ್ಚಿಸಿಕೊಂಡ ಗಂಡ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾನೆ. ನಾಲಿಗೆ ಕಚ್ಚಿಸಿಕೊಂಡ ನೋವಿಗೆ ಗೊಳೋ ಅಂತಾ ಅಳುತ್ತಿದ್ದಾನೆ. ನಾಲಿಗೆ ಕಚ್ಚಿದ ಬಳಿಕ ಪುಷ್ಪಾವತಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ನನ್ನ ಗಂಡ ನನ್ನಿಂದ ಬಲವಂತವಾಗಿ ಮುತ್ತು ಸ್ವೀಕರಿಸಲು ಯತ್ನಿಸಿದ ಹೀಗಾಗಿ ನಾಲಿಗೆ ಕಚ್ಚಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಗಂಡ ಕೂಡ ತನ್ನ ಹೆಂಡತಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ತನ್ನ ಹೆಂಡತಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ