ಪತ್ನಿ ಮೇಲೆ ಅನುಮಾನ ಕೊಂದೇ ಬಿಟ್ಟ ಪತಿ
ಪತಿಯ ನಡವಳಿಕೆಯಿಂದ ಬೇಸರಗೊಂಡಿದ್ದ ಪತ್ನಿ
230 ಕಿ.ಮೀ ಕ್ರಮಿಸಿ ಪತ್ನಿಯನ್ನು ಕೊಂದ, ತಾನು ವಿಷ ಸೇವಿಸಿದ
ಬೆಂಗಳೂರು: ಕಾನ್ಸ್‌ಟೇಬಲ್ ಒಬ್ಬ ತನ್ನ ಪತ್ನಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಹೆಂಡತಿಗೆ 150 ಬಾರಿ ಕರೆ ಮಾಡಿದ್ದ ಪೇದೆ ಪತಿ ಕರೆಗೆ ಉತ್ತರಿಸದೇ ಇದ್ದದ್ದಕ್ಕೆ ಕೋಪಗೊಂಡು 230 ಕಿ.ಮೀ ಕ್ರಮಿಸಿ ಆಕೆಯನ್ನು ಕೊಂದಿದ್ದಾನೆ.
ಆರೋಪಿಯನ್ನು ಕಿಶೋರ್ ಎಂದು ಗುರುತಿಸಲಾಗಿದೆ. ಪತ್ನಿ ಪ್ರತಿಭಾಳನ್ನು ಕೊಂದ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಕಿಶೋರ್ ಹೆಂಡತಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಪತಿ 150 ಬಾರಿ ಕರೆ ಮಾಡಿದರೂ ಸಹ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಕಿಶೋರ್ ಕೋಪಗೊಂಡಿದ್ದಾನೆ. ಆಕೆಯ ಮೇಲೆ ಅನುಮಾನಗೊಂಡ ಪತಿ ತಾಳ್ಮೆ ಕಳೆದುಕೊಂಡಿದ್ದಾನೆ. ನಂತರ ಚಾಮರಾಜನಗರದಿಂದ ಹೊಸಕೋಟೆಗೆ ಪ್ರಯಾಣಿಸಿದ್ದಾನೆ. ನೇರವಾಗಿ ಅತ್ತೆ ಮನೆಗೆ ಬಂದ ಕಿಶೋರ್ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಕಿಶೋರ್ ಕೈಯಾರೆ ಕೊಲೆಯಾದ ಪ್ರತಿಭಾ ಬೆಟ್ಟಹಲಸೂರು ಗ್ರಾಮದವಳಾಗಿದ್ದು, ಅಲ್ಲಿನ ಪಂಚಾಯತಿ ಕಾರ್ಯದರ್ಶಿ ಸುಬ್ರಮಣಿ ಅವರ ಕಿರಿಯ ಮಗಳಾಗಿದ್ದಾಳೆ. 2022ರಲ್ಲಿ ಈ ಜೋಡಿ ವಿವಾಹವಾಗಿದ್ದು, ಕಿಶೋರ್ಗೆ ತನ್ನ ಪತ್ನಿ ಮೇಲೆ ಅನುಮಾನಗೊಂಡಿದ್ದ. ಆಗಾಗ ಆಕೆಯ ಫೋನ್ ಪರಿಶೀಲಿಸುತ್ತಿದ್ದ. ಮೆಸೇಜ್, ಕರೆಯನ್ನು ಆಲಿಸುತ್ತಿದ್ದ ಎಂದು ತಿಳಿದುಬಂದಿದೆ.
ಕಿಶೋರ್ ನಡತೆಯಿಂದ ಪತ್ನಿ ಪ್ರತಿಭಾ ಬೇಸರಗೊಂಡಿದ್ದಳು. ಪತಿಯ ನಡವಳಿಕೆಯಿಂದ ಅಳತೊಡಗಿದ್ದಾಳೆ. ಆದರೆ ಹೀಗೆ ಅಳುತ್ತಿದ್ದರೆ ಮಗುವಿನ ಆರೋಗ್ಯದ ಮೇಲೆ ತೊಂದರೆ ಆಗುತ್ತದೆ ಎಂದು ತಾಯಿ ಮೊಬೈಲ್ ಅನ್ನು ಬಳಸದಂತೆ ಹೇಳಿದ್ದಾರೆ. ಆದರೆ ಅಷ್ಟರಲ್ಲಿ ಕಿಶೋರ್ 150 ಬಾರಿ ಕರೆ ಮಾಡಿದ್ದಾನೆ.
ಅದರಂತೆಯೇ ಭಾನುವಾರದಂದು ಕರೆಯನ್ನು ಸ್ವೀಕರಿಸದೆ ಇದ್ದ ಪತ್ನಿ ಮೇಲೆ ಕೋಪಗೊಂಡ ಕಿಶೋರ್ ಅತ್ತೆ ಮನೆಗೆ ಬಂದು ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಕಿಶೋರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ