newsfirstkannada.com

ಗಂಡ ಕಪ್ಪಗಿದ್ದಾನೆಂದು ಪೆಟ್ರೋಲ್​ ಸುರಿದು ಕೊಂದ ಹೆಂಡತಿ.. 25,000 ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

Share :

07-11-2023

    ಗಂಡನ ಚರ್ಮದ ಬಣ್ಣದಿಂದ ಬೇಸತ್ತು ಕೊಂದ ಪತ್ನಿ

    ಬೆಳಗ್ಗಿನ ಜಾವ ಗಂಡನಿಗೆ ಪೆಟ್ರೋಲ್​ ಸುರಿದು ಕೊಲೆ

    ಅಣ್ಣನನ್ನು ಕೊಂದ ಅತ್ತಿಗೆ ವಿರುದ್ಧ ಕೋರ್ಟ್​ ಮೊರೆ ಹೋದ ತಮ್ಮ

ಉತ್ತರ ಪ್ರದೇಶ: ಪತಿ ಕಪ್ಪಗಿದ್ದಾನೆಂದು ಪೆಟ್ರೋಲ್​ ಸುರಿದು ಕೊಲೆ ಮಾಡಿದ್ದ ಪತ್ನಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿದೆ. ಜೊತೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

2019ರಲ್ಲಿ ಬಿಚೆಟ್ಟಾ ಗ್ರಾಮದಲ್ಲಿ ಈ ಪ್ರಕರಣ ನಡೆದಿದ್ದು, ಸೋಮವಾರದಂದು ಸಂಭಾಲ್​ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ.

ಗಂಡ ಸತ್ಯವೀರ್ ಕಪ್ಪು ಬಣ್ಣವನ್ನು ಹೊಂದಿದ್ದಾನೆಂದು ಪತ್ನಿ ಪ್ರೇಮಶ್ರೀ ಅಲಿಯಾಸ್​​ ನಹಿ ಆತ ಮಲಗಿದ್ದ ವೇಳೆ ಪೆಟ್ರೋಲ್​ ಸುರಿದು ಸಜೀವ ದಹನ ಮಾಡಿದ್ದಳು. ಈ ಪ್ರಕರಣದಡಿ ಮಹಿಳೆಗೆ ಶಿಕ್ಷೆಯ ಜೊತೆಗೆ 25 ಸಾವಿರ ದಂಡವನ್ನು ವಿಧಿಸಿತ್ತು. ಆದರೆ ಈ ಪ್ರಕರಣವು ಹೆಚ್ಚುವರಿ ಸೆಷನ್ಸ್​ ನ್ಯಾಯಾಲದ ಮೆಟ್ಟಿಲೇರಿದ್ದು, ಸೋಮವಾರದಂದು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದೆ.

ಪ್ರೇಮಶ್ರೀ ಬೆಳಗ್ಗೆ 6 ಗಂಟೆಯ ಹೊತ್ತಿಗೆ ಗಂಡನಿಗೆ ಪೆಟ್ರೋಲ್​ ಸುರಿಯುತ್ತಾಳೆ. ಬೆಂಕಿಗೆ ಗಂಡ ಸತ್ಯವೀರ್​ ಸಂಪೂರ್ಣ ಸುಟ್ಟು ಕರಕಲಾಗಿದ್ದನು. ಈ ಪ್ರಕರಣದ ಸಂಬಂಧ ಮೃತನ ಸಹೋದರ ಹರ್ವೀರ್​ ಸಿಂಗ್ ಅತ್ತಿಗೆ ವಿರುದ್ಧ ಕೋರ್ಟ್​ ಮೆಟ್ಟಿಲೇರಿ ನ್ಯಾಯದ ಮೊರೆ ಹೋಗಿದ್ದನು. ಅದರಂತೆ ಕೋರ್ಟ್​ ಮಹಿಳೆಗೆ ಶಿಕ್ಷೆ ವಿಧಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ ಕಪ್ಪಗಿದ್ದಾನೆಂದು ಪೆಟ್ರೋಲ್​ ಸುರಿದು ಕೊಂದ ಹೆಂಡತಿ.. 25,000 ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್​

https://newsfirstlive.com/wp-content/uploads/2023/11/UP.jpg

Load More