ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಬರ್ಬರವಾಗಿ ಕೊಲೆ ಮಾಡಿದ ಪತ್ನಿ
ಪೊಲೀಸ್ ತನಿಖೆಯಲ್ಲಿ ಅಸಲಿ ಸತ್ಯ ಬಾಯ್ಬಿಟ್ಟ ಕೇಸ್ನ ಪ್ರಮುಖ ಆರೋಪಿಗಳು..!
ಪತಿಯನ್ನ ಕೊಲೆ ಮಾಡಿ, ಶವವನ್ನು ಗೋವಾದ ಚೋರ್ಲಾ ಘಾಟ್ನಲ್ಲಿ ಎಸೆದ ಪತ್ನಿ!
ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನ ಪ್ರಿಯಕರನ ಜೊತೆ ಸೇರಿ ಪತ್ನಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಮೃತ ರಮೇಶ್ ಕಾಂಬಳೆ (38) ಕೊಲೆಯಾದ ಪತಿ.
ಸದ್ಯ ಈ ಸಂಬಂಧ ನಾಲ್ವರು ಆರೋಪಿಗಳನ್ನ ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ರಮೇಶ್ ಅಂಬೇಡ್ಕರ್ ನಗರದ ನಿವಾಸಿ. ವೃತ್ತಿಯಲ್ಲಿ ಪೇಂಟರ್ ಆಗಿದ್ದರು. ರಮೇಶ್ ಏಕಾಏಕಿ ಮಾರ್ಚ್ 28ರಂದು ನಾಪತ್ತೆಯಾಗಿದ್ದ. ಈ ಕುರಿತು ಏಪ್ರಿಲ್ 5ರಂದು ಆತನ ಪತ್ನಿ ಸಂಧ್ಯಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಲು ಶುರು ಮಾಡಿದ ಬಳಿಕ ಅಸಲಿ ಸತ್ಯ ಬೆಳಕಿಗೆ ಬಂದಿದೆ.
ಇನ್ನು, ರಮೇಶ್ ಸ್ನೇಹಿತ ಬಾಳು ಬಿರಂಜೆ ಎಂಬಾತನೊಂದಿಗೆ ಪತ್ನಿ ಸಂಧ್ಯಾ ಅನೈತಿಕ ಸಂಬಂಧ ಇತ್ತು. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ರಮೇಶ್ನನ್ನು ಸ್ನೇಹಿತರು ಜೊತೆಗೂಡಿ ಕೊಲೆ ಮಾಡಿ, ಗೋವಾದ ಚೋರ್ಲಾ ಘಾಟ್ನಲ್ಲಿ ಶವ ಎಸೆದಿರುವುದಾಗಿ ಪೊಲೀಸ್ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಪತ್ನಿ ಸಂಧ್ಯಾ ಯಾರಿಗೂ ಅನುಮಾನ ಬಾರದಂತೆ ಪತಿ ಪರಸ್ತ್ರೀಯೊಂದಿಗೆ ಓಡಿ ಹೋಗಿದ್ದಾನೆ ಎಂದು ಕಥೆ ಕಟ್ಟಿದ್ದಳು. ರಮೇಶ್ಗೆ ನಿದ್ರೆ ಮಾತ್ರೆಯನ್ನ ನೀಡಿ, ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಈ ಸಂಬಂಧ ಕೊಲೆಯಲ್ಲಿ ಶಾಮೀಲಾಗಿದ್ದ ನಾಲ್ವರು ಆರೋಪಿಗಳನ್ನು ಎಪಿಎಂಸಿ ಪೊಲೀಸರು ಬಂಧಿಸಿ, ರಮೇಶ್ ಮೃತದೇಹ ಪತ್ತೆಗೆ ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ