newsfirstkannada.com

ಪದೇ ಪದೇ ಗಂಡಾಂತರ.. ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್ ಆದ್ಮೇಲೆ ವಿಜಯಲಕ್ಷ್ಮಿ ಶಾಕಿಂಗ್ ನಿರ್ಧಾರ; ಏನದು?

Share :

Published June 12, 2024 at 3:50pm

    ಏಕಾಏಕಿ ಇನ್​ಸ್ಟಾಗ್ರಾಮ್​ ಪ್ರೊಫೈಲ್​ ಪಿಕ್ಚರ್​ ಡಿಲೀಟ್ ಮಾಡಿದ ವಿಜಯಲಕ್ಷ್ಮಿ

    ಕೊಲೆ ಕೇಸ್​ನಲ್ಲಿ ನಟ ದರ್ಶನ್​​ ಅರೆಸ್ಟ್​ ಆಗುತ್ತಿದ್ದಂತೆ ಮೌನ ತಾಳಿದ ಪತ್ನಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್​ ಪತ್ನಿ ವಿಜಯಲಕ್ಷ್ಮಿ ನಿರ್ಧಾರಕ್ಕೆ ಫ್ಯಾನ್ಸ್‌ ಶಾಕ್‌!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಗೌಡ ಸೇರಿ ಒಟ್ಟು 13 ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ಅಧಿಕಾರಿಗಳು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.

ಇದನ್ನೂ ಓದಿ: ಪವಿತ್ರಗೌಡಗೆ ಕಳುಹಿಸಿದ್ನಂತೆ ‘ಆ’ ಫೋಟೋ.. ದರ್ಶನ್​ಗೆ ಗೊತ್ತಾದ ಮೇಲೆ ನಡೆಯಿತು ಅನಾಹುತ..!

ಆದರೆ ನಟ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪ ಮೇಲೆ ಪೊಲೀಸ್​ ಠಾಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇತ್ತ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಪತಿಯಿಂದ ಅಂತರ ಕಾಯ್ದುಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪತಿಯನ್ನೇ ಅನ್ ಫಾಲೋ ಮಾಡಿದ್ದಾರೆ. ಜೊತೆಗೆ ಇನ್​ಸ್ಟಾಗ್ರಾಮ್​ ಡಿಪಿಯನ್ನು ಕೂಡ ವಿಜಯಲಕ್ಷ್ಮಿ ಅವರು ಡಿಲೀಟ್​ ಮಾಡಿದ್ದಾರೆ. ಇದೀಗ ಇದೇ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಸದ್ಯ ನಟ ದರ್ಶನ್​ ಸೇರಿ ಒಟ್ಟು 13 ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಆದರೆ ಈ ಕೇಸ್​ ಸಂಬಂಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕೇಸ್​​ ಸಂಬಂಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮೌನ ವಹಿಸಿದ್ದಾರೆ. ಈ ಘಟನೆ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ. ಈ ಘಟನೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಕೂಡ ಹಾಕಿಲ್ಲ. ಹೀಗಿರುವಾಗಲೇ ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ ಪ್ರೊಫೈಲ್​ ಫೋಟೋವನ್ನು ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲದೇ ನಟ ದರ್ಶನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ. ಇನ್ನು ಈ ವಿಚಾರ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್​ಸ್ಟಾಗ್ರಾಮ್​ ಪ್ರೊಫೈಲ್​​ ಅನ್ನು ಚೆಕ್​ ಮಾಡುತ್ತಿದ್ದಾರೆ. ಅಲ್ಲದೇ ವಿಜಯಲಕ್ಷ್ಮಿ ಅವರ ಈ ನಡೆ ಅಭಿಮಾನಿಗಳಲ್ಲಿ ಸಾಕಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪದೇ ಪದೇ ಗಂಡಾಂತರ.. ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್ ಆದ್ಮೇಲೆ ವಿಜಯಲಕ್ಷ್ಮಿ ಶಾಕಿಂಗ್ ನಿರ್ಧಾರ; ಏನದು?

https://newsfirstlive.com/wp-content/uploads/2024/06/dboss7.jpg

Load More