newsfirstkannada.com

ಕೊಲೆ ಕಥೆ ಕೇಳಿ ದರ್ಶನ್‌ ಪತ್ನಿ ಶಾಕ್‌.. ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್‌ಗೆ ವಿಜಯಲಕ್ಷ್ಮಿ ಖಡಕ್ ಮೆಸೇಜ್; ಏನದು?

Share :

Published June 12, 2024 at 8:50pm

  21 ವರ್ಷಗಳ ದಾಂಪತ್ಯ ಜೀವನದಲ್ಲಿ ವಿಜಯಲಕ್ಷ್ಮಿ ಅನುಭವಿಸಿದ್ದೆಷ್ಟು?

  ಹೆಣ್ಣಿನಿಂದಲೇ ಪದೇ ಪದೇ ಸುದ್ದಿಯಾಗಿದ್ದ ಸ್ಯಾಂಡಲ್‌ವುಡ್‌ ನಟ ದರ್ಶನ್‌

  ಮಗನ ಮುಖ ನೋಡಿಕೊಂಡು ಯಾತನೆ ಸಹಿಸಿಕೊಂಡ್ರಾ ವಿಜಯಲಕ್ಷ್ಮಿ?

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮರ್ಡರ್ ಕೇಸ್‌ನಲ್ಲಿ ಬಂಧವಾಗ್ತಿದ್ದಂತೆ ಅವರ ಪತ್ನಿ ವಿಜಯಲಕ್ಷ್ಮಿ ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾರಂತೆ. ನಿರಂತರವಾಗಿ ಕಣ್ಣೀರು ಹಾಕ್ತಿದ್ದಾರಂತೆ. ತನ್ನ ಸ್ಥಿತಿ ಯಾವ ಪಾಪಿಗೂ ಬೇಡ ಅಂತ ಗೋಳಾಡುತ್ತಿದ್ದಾರಂತೆ. ಹೌದು, ದರ್ಶನ್ ವಿಚಾರದಲ್ಲಿ ವಿಜಯಲಕ್ಷ್ಮಿಯವರು ಬಲಿಪಶು ಆಗಿಬಿಟ್ರಾ ಎಂಬ ಚರ್ಚೆ ಶುರುವಾಗಿದೆ. ದರ್ಶನ್ ಅರೆಸ್ಟ್ ಆಗ್ತಿದ್ದಂತೆ ಇನ್‌ಸ್ಟಾ ಖಾತೆಯಲ್ಲಿ ಡಿಪಿ, ಕೆಲ ಫೋಟೋಸ್ ಡಿಲೀಟ್ ಮಾಡ್ಕೊಂಡಿರೋ ವಿಜಯಲಕ್ಷ್ಮಿ ದರ್ಶನ್ ಖಾತೆಯನ್ನು ಅನ್‌ಫಾಲೋ ಮಾಡಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಹೆಣ್ಣಿನಿಂದಲೇ ಪದೇ ಪದೇ ಸುದ್ದಿಯಾಗಿದ್ದ ನಟ ದರ್ಶನ್‌ ಇದೀಗ ಕೊಲೆ ಕೇಸ್‌ನಲ್ಲಿ ಸಿಲುಕಿದ್ದಾರೆ. ಗೆಳತಿ ಪವಿತ್ರಾ ಗೌಡ ವಿರುದ್ಧ ಕೆಟ್ಟ ಕಾಮೆಂಟ್ ಮಾಡಿದ್ದ ಕಾರಣಕ್ಕೆ ತನ್ನ ಅಭಿಯಾನಿಯನ್ನೇ ಕೊಲ್ಲಿಸಿರೋ ಆರೋಪದಲ್ಲಿ ಬಂಧನವಾಗಿರೋ ಚಾಲೆಂಜಿಗ್ ಸ್ಟಾರ್ ದರ್ಶನ್ ಸುತ್ತ ಟೀಕೆ, ಆಕ್ರೋಶದ ಸುಳಿ ಸುತ್ತಿಕೊಂಡಿದೆ. ಗಂಡನನ್ನು ಕಳೆದುಕೊಂಡ ಗರ್ಭಿಣಿಯ ಯಾತನೆ, ಮನೆಗೆ ಆಸರೆಯಾಗಿದ್ದ ಏಕೈಕ ಮಗನನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರೋ ಹೆತ್ತವರು ದರ್ಶನ್‌ ಮತ್ತು ಗ್ಯಾಂಗ್‌ಗೆ ಹಿಡಿಶಾಪ ಹಾಕ್ತಿದ್ದಾರೆ. ಹೀಗಿರುವಾಗ ಅಲ್ಲಿ ಮತ್ತೊಬ್ಬ ಹೆಣ್ಣುಮಗಳು ಇದೇ ದರ್ಶನ್‌ರಿಂದಾಗಿ ಮನದೊಳಗೆ ನರಕಯಾತನೆ ಅನುಭವಿಸ್ತಿದ್ದಾರೆ.

ಇದನ್ನೂ ಓದಿ: VIDEO: ನಟ ದರ್ಶನ್​ ಫೋಟೋಗೆ ಚಪ್ಪಲಿಯಿಂದ ಒದ್ದು, ಬೆಂಕಿ ಹಚ್ಚಿ ಆಕ್ರೋಶ

ಇದು ಇವತ್ತು ಬಂದಿರೋ ನೋವಲ್ಲ. ವರ್ಷಗಟ್ಟಲೆಯಿಂದ ಅನುಭವಿಸಿರೋ ನರಕಯಾತನೆ. ಆ ಯಾತನೆ, ನೋವು ಆಕೆಯನ್ನು ಹತ್ತಾರು ವರ್ಷಗಳಿಂದ ಬೆಂಬಿಡದೆ ಕಾಡುತ್ತಿದೆ. ಮುದ್ದಿನ ಮಗನ ಮುಖ ನೋಡಿಕೊಂಡು ಸಹಿಸಬಾರದನ್ನೆಲ್ಲಾ ಸಹಿಸಿಕೊಂಡಿದ್ದ ಆ ಹೆಣ್ಣುಮಗಳು ಈಗ ಅಕ್ಷರಶಃ ದಾರಿ ಕಾಣದೇ ಕೂರುವಂತಾಗಿದೆ. ಹತ್ಯೆಯಾದ ತನ್ನ ಪತಿಯನ್ನು ನೆನೆದು ಕಣ್ಣೀರಿಡುತ್ತಿರೋ ಗರ್ಭಿಣಿ ಸಹನಾಳ ದುಃಖ ಒಂದುಕಡೆಯಾದ್ರೆ. ಮತ್ತೊಂದು ಕಡೆ ಇದೇ ದರ್ಶನ್‌ರಿಂದ ನೋವು, ನೋವು.. ನೋವನ್ನು ಬಿಟ್ಟು ಮತ್ತೇನನ್ನು ಹೆಚ್ಚಿಗೆ ಕಾಣದೆ ಮಾನಸಿಕವಾಗಿ ನರಳತ್ತಿರೋ ಆ ಹೆಣ್ಣುಮಗಳು. ಆಕೆ ಬೇಱರೂ ಅಲ್ಲ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ ಪತ್ನಿ ವಿಜಯಲಕ್ಷ್ಮಿ ಈಗ ಇದ್ದ ಒಂಚೂರು ನೆಮ್ಮದಿಯನ್ನೂ ಕಳೆದುಕೊಂಡು ಬದುಕುವಂತಾಗಿದೆ. ತನ್ನ ಸಂಸಾರದಲ್ಲಿ ಅಪ್ಪಳಿಸಿದ್ದ ಬಿರುಗಾಳಿಯಿಂದಲೇ ಮಾನಸಿಕವಾಗಿ ಜರ್ಜರಿತರಾಗಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದೀಗ ಮತ್ತೊಂದು ಶಾಕ್‌ಗೆ ಒಳಗಾಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹೆಸರಿನ ಯುವಕನ ಬರ್ಬರ ಹತ್ಯೆ ಕೇಸ್‌ನಲ್ಲಿ ಗಂಡ ದರ್ಶನ್ ಬಂಧನವಾಗಿರೋದು, ಕೊಲೆಯ ಸುತ್ತ ಹತ್ತಾರು ಬೆಚ್ಚಿಬೀಳಿಸೋ ಸಂಗತಿಗಳು ಕಿವಿಗಿ ಬೀಳ್ತಿದ್ದಂತೆ ವಿಜಯಲಕ್ಷ್ಮಿಗೆ ಬಹುದೊಡ್ಡ ಆಘಾತವಾಗಿರೋದಂತೂ ಸತ್ಯ. ಇದೇ ಬೆನ್ನಲ್ಲೇ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಮ್‌ ಡಿಪಿ ಡಿಲೀಟ್ ಮಾಡ್ಕೊಂಡಿದ್ದಾರೆ. ಮತ್ತು ದರ್ಶನ್‌ರನ್ನು ಅನ್‌ಫಾಲೋ ಮಾಡಿದ್ದಾರೆ.

ಹೌದು, ಪತಿಯ ಆಟಾಟೋಪ, ಸಾಂಸಾರಿಕ ಕಲಹಗಳ ಕಾರಣದಿಂದಾಗಿ ಮೊದಲೇ ನೊಂದು ಬೇಸತ್ತಿದ್ದರು ವಿಜಯಲಕ್ಷ್ಮಿ. ಈಗ ಅಂತಹ ವಿಜಯಲಕ್ಷ್ಮಿಗೆ ಈ ಮರ್ಡರ್ ಕೇಸ್‌ ಬರಸಿಡಿಲು ಬಡಿದಂತಾಗಿದೆ. ಅದೂ ಕೂಡ, ಈ ಕೊಲೆಗೆ ಕಾರಣವಾಗಿದ್ದ ಪತಿಯ ಗೆಳತಿ ಪವಿತ್ರಾ ಗೌಡ ಎಂಬ ಆರೋಪಗಳಂತೂ ವಿಜಯಲಕ್ಷ್ಮಿಯವರನ್ನು ನೋವಿನ ಶೋಕದಲ್ಲಿ ದೂಡಿವೆ. ದಾರಿತಪ್ಪಿದ್ದ ಗಂಡ ಮತ್ತೆ ಟ್ರ್ಯಾಕ್‌ಗೆ ಬರ್ತಿದ್ದಾರೆ ಎಂಬ ಸಣ್ಣ ನಿಟ್ಟುಸಿರು ಬಿಟ್ಟು ಆಸೆಗಳ ಬೆಟ್ಟವನ್ನೇ ಕಟ್ಟಿಕೊಂಡಿದ್ದ ವಿಜಯಲಕ್ಷ್ಮಿಗೆ ಈಗ ಆಕಾಶವೇ ತಲೆಮೇಲೆ ಕುಸಿದುಬಿದ್ದಂತಾಗಿದೆ ಅಂದ್ರೂ ತಪ್ಪಿಲ್ಲ. ಪತಿ ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆಗ್ತಿದ್ದಂತೆ ತಮ್ಮ ಇನ್‌ಸ್ಟಾ ಡಿಪಿ ಡಿಲೀಟ್ ಮಾಡಿ ಪತಿಯನ್ನು ಅನ್‌ಫಾಲೋ ಮಾಡೋ ಮೂಲಕ ತಮ್ಮ ನೋವು ಮತ್ತು ತಮಗೆ ಆಗಿರೋ ಆಘಾತವನ್ನು ಹೊರಹಾಕಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಪರಸ್ಪರ ಪ್ರೀತಿಸಿ ಮದುವೆ ಆದವರು. ದರ್ಶನ್ ಅಂದು ಡಿಬಾಸ್, ಚಾಲೆಂಜಿಂಗ್ ಸ್ಟಾರ್ ಬಾಕ್ಸಾಫೀಸ್ ಸುಲ್ತಾನ್​ ಎನ್ನುವಂತಹ ಯಾವುದೇ ಬಿರುದುಗಳನ್ನ ದಕ್ಕಿಸಿಕೊಂಡಿರಲಿಲ್ಲ. ಅಂದು ದರ್ಶನ್ ಒಬ್ಬ ಸಾಮಾನ್ಯ ನಟನಾಗಿದ್ದರಷ್ಟೇ ದರ್ಶನ್ ಯಾರೆಂಬುದು ಕೆಲವರಿಗಷ್ಟೇ ತಿಳಿದಿತ್ತು. ನಟ ದರ್ಶನ್ ಆಗ ಅವಕಾಶಗಳಿಗಾಗಿ ಅಲೆಯುತ್ತಿದ್ರು. ಕೈಲಿ ಹೇಳಿಕೊಳ್ಳುವಂತ ದುಡಿಮೆನೂ ಇರಲಿಲ್ಲ. ದೊಡ್ಡ ದೊಡ್ಡ ಪಾತ್ರಗಳಲ್ಲೂ ನಟಿಸಿರಲಿಲ್ಲ. ಭವಿಷ್ಯವನ್ನು ಕಟ್ಟಿಕೊಳ್ಳೋದಕ್ಕೆ ಅಲೆದಾಡುತ್ತಿದ್ದ ವೇಳೆ ದರ್ಶನ್‌ ಸಾಂಗತ್ಯಕ್ಕೆ ಬಂದು ದರ್ಶನ್‌ಗೆ ಬಲತುಂಬಿದವರು ವಿಜಯಲಕ್ಷ್ಮಿ.

ದರ್ಶನ್ ಬಳಿ ದುಡ್ಡಿರಲಿಲ್ಲ. ಅವಕಾಶಗಳೂ ಅಷ್ಟಕ್ಕಷ್ಟೇ. ಭವಿಷ್ಯದ ಬಗ್ಗೆ ಸ್ಪಷ್ಟತೆಯೇ ಇರಲಿಲ್ಲ. ಆ ಸಂದರ್ಭದಲ್ಲಿ ದರ್ಶನ್‌ರಿಗೆ ಆರ್ಥಿಕವಾಗಿಯೂ ಶಕ್ತಿ ತುಂಬಿದ್ದರು ವಿಜಯಲಕ್ಷ್ಮಿ. ದರ್ಶನ್ ಕಾಣುತ್ತಿದ್ದ ಕನಸುಗಳನ್ನು ತನ್ನ ಕನಸುಗಳನ್ನಾಗಿ ಸ್ವೀಕರಿಸಿದ್ರು. 2003ರ ಮೇ ತಿಂಗಳ 19 ನೇ ತಾರೀಖು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದರ್ಶನ್ ಮತ್ತು ವಿಜಯಲಕ್ಷ್ಮಿ ಜೋಡಿಗೆ ನೂರುಕಾಲ ಸುಖವಾಗಿ ಸಂಸಾರ ಸಾಗಿಸಿ ಅಂತ ಹಿರಿಯರೆಲ್ಲೂ ಆಶೀರ್ವದಿಸಿದ್ರು. ಅಂತೆಯೇ ಮದುವೆಯಾದ ಕೆಲಸಮಯ ಎಲ್ಲವೂ ಚೆನ್ನಾಗಿತ್ತು. ದರ್ಶನ್ ಮತ್ತು ವಿಜಯಲಕ್ಷ್ಮಿ ಜೋಡಿ ಸುಖವಾಗಿ ಸಂಸಾರ ಸಾಗಿಸುತ್ತಿತ್ತು. ಆದ್ರೆ, ಯಾವಾದ ದರ್ಶನ್‌ಗೆ ಹಣ, ಕೀರ್ತಿ ಬರಲು ಶುರುವಾಯ್ತೋ ವಿಜಯಲಕ್ಷ್ಮಿ ನೆಮ್ಮದಿಯ ದಿನಗಳು ದೂರವಾಗೋಕೆ ಶುರುವಾಯ್ತು ಎನ್ನಲಾಗುತ್ತೆ. ಅದು 2011 ನೇ ಇಸವಿಯಲ್ಲಿ ದರ್ಶನ್ ಅದಾಗಲೇ ಸ್ಟಾರ್ ಪಟ್ಟ ದಕ್ಕಿಸಿಕೊಂಡಿದ್ರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ರು. ಹಣ ಮತ್ತು ಫೇಮ್ ಕಾಲಬುಡಕ್ಕೆ ಬಂದು ಬಿದ್ದಿತ್ತು. ಆ ಸಂದರ್ಭದಲ್ಲಿ ದರ್ಶನ್ ಲೈಫ್‌ಸ್ಟೈಲ್ ಕೂಡ ಬದಲಾಗಿತ್ತು ಅಂತ ಹೇಳಲಾಗುತ್ತೆ. ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗೆ ಗಂಡುಮಗುವಾಗಿತ್ತು. ಗಂಡು ಮಗುವಿಗೆ ವಿನೀಶ್ ಎಂಬ ಹೆಸರನ್ನು ನಾಮಕರಣ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇದ್ದಕ್ಕಿಂದತೇ ನಟಿಯೊಬ್ಬಳ ಹೆಸರು ದರ್ಶನ್ ಜೊತೆ ತಳಕುಹಾಕಿಕೊಳ್ಳುತ್ತೆ. ಇತ್ತ, ದರ್ಶನ್ ತನ್ನ ಪ್ರೀತಿಯ ಪತ್ನಿಯ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ ಮಾಡಿಬಿಡ್ತಾರೆ. ಗಂಡನಿಂದಲೇ ಹಲ್ಲೆಗೆ ಒಳಗಾದ ವಿಜಯಲಕ್ಷ್ಮಿ ಆಸ್ಪತ್ರೆಗೆ ಸೇರಿ ದೈಹಿಕವಾಗಿ ಮತ್ತು ಮಾನಸಿವಾಗಿ ನರಳುವಂತಾಯ್ತು.

ಇದನ್ನೂ ಓದಿ: ‘ಭಂಡ ಧೈರ್ಯ ಇರೋನಿಗೆ ಕಾಲ ಇಲ್ಲ’- ನಟ ದರ್ಶನ್​​​ ಬಗ್ಗೆ ಉಮಾಪತಿ ಗೌಡ ಆಡಿದ್ದ ಮಾತು ವೈರಲ್​​!

ಗಂಡ ದರ್ಶನ್‌ರ ವರ್ತನೆ ಸಹಿಸಿಕೊಂಡು ಬೇಸತ್ತಿದ್ದ ವಿಜಯಲಕ್ಷ್ಮಿ ಆ ಹಲ್ಲೆಯ ಬಳಿಕ ತಾಳ್ಮೆ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರ್ತಾರೆ. ಗಂಡನಿಂದ ತನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆಯಾಗಿದೆ ಅಂತ ದೂರು ಕೊಡ್ತಾರೆ. ಆ ಕೇಸ್‌ನಲ್ಲಿ ದರ್ಶನ್ ಜೈಲು ಸೇರ್ತಾರೆ. ಅಲ್ಲದೆ, ದರ್ಶನ್‌ರಿಂದ ಮಾನಸಿಕ ಹಿಂಸೆ ತಾಳಲಾರದೇ ಡಿವೋರ್ಸ್‌ಗೂ ಮುಂದಾಗ್ತಾರೆ. ಭರ್ತಿ 28 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದ ದರ್ಶನ್ ಹೊರಬರ್ತಾರೆ. ಗಂಡನಾದವನು ಎಷ್ಟೇ ಕ್ರೂರಿಯಾದ್ರೂ ಪತ್ನಿಗೆ ಗಂಡನ ಮೇಲಿನ ಪ್ರೀತಿಮಾತ್ರ ಕಡಿಮೆಯಾಗೋದಿಲ್ಲ ಎಂಬ ಮಾತು. ವಿಜಯಲಕ್ಷ್ಮಿ ವಿಚಾರದಲ್ಲೂ ಸತ್ಯವಾಗಿತ್ತು. ಕುಟುಂಬಸ್ಥರು, ಸಿನಿರಂಗದ ಹಿರಿಯರ ಮಾತುಕಥೆ ಬಳಿಕ ವಿಜಯಲಕ್ಷ್ಮೀ ದೂರು ವಾಪಸ್ ಪಡೆದುಕೊಳ್ತಾರೆ. ಅಲ್ಲದೇ, ಗಂಡ ಇನ್ನು ಮುಂದಾದ್ರೂ ಸರಿಯಾಗಿ ಜೀವನ ಸಾಗಿಸ್ತಾರೆ ಎಂಬ ಹೊಸ ಕನಸು ಕಟ್ಟಿಕೊಂಡ ವಿಜಯಲಕ್ಷ್ಮಿಯವರು ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದು ಮತ್ತೆ ಸಂಸಾರ ಆರಂಭಿಸ್ತಾರೆ. ಆದ್ರೆ, ವಿಜಯಲಕ್ಷ್ಮಿ ಪಾಲಿನ ನೋವು, ಯಾತನೆ ದಿನಗಳ ಅಲ್ಲಿಗೇ ಅಂತ್ಯವಾಗಲಿಲ್ಲ. 2011 ವಿಜಯಲಕ್ಷ್ಮಿ ಪಾಲಿಗೆ ಅತ್ಯಂತ ನೋವಿನ ವರ್ಷವಾಗಿತ್ತು. ಅದಾದ ಬಳಿಕವಾದ್ರೂ ಪತಿ ದರ್ಶನ್ ಸರಿಯಾದ ದಾರಿಯಲ್ಲಿ ಸಾಗ್ತಾರೆ. ಸುಖ ಸಂಸಾರ ಸಾಗಿಸ್ತಾರೆ ಎಂದುಕೊಂಡಿದ್ದ ವಿಜಯಲಕ್ಷ್ಮಿಗೆ ಮತ್ತೊಮ್ಮೆ ಆಘಾತ. ಎಲ್ಲವೂ ಸರಿಯಾಯ್ತು ಎಂಬಷ್ಟರಲ್ಲೇ ದರ್ಶನ್ ಮತ್ತು ವಿಜಯಲಕ್ಷ್ಮಿ ಲೈಫ್‌ನಲ್ಲಿ ಮತ್ತೊಬ್ಬಾಕೆಯ ಎಂಟ್ರಿಯಾಯ್ತು ಎನ್ನಲಾಗುತ್ತೆ. ದರ್ಶನ್ ಆಕೆಯ ಹಿಂದಿಂದೆಯೇ ಸುತ್ತಲಾರಂಭಿಸಿದ್ರು ಎನ್ನಲಾಗುತ್ತೆ. ಅಲ್ಲದೆ, ಆಕೆಯಿಂದಲೇ ವಿಜಯಲಕ್ಷ್ಮಿ ಕಣ್ಣೀರಲ್ಲಿ ಕೈ ತೊಳೆಯುವಂತಾ ದುಸ್ಥಿತಿ ಬಂತು ಎನ್ನಲಾಗುತ್ತೆ. ಆಕೆ ಬೇಱರೂ ಅಲ್ಲ. ದರ್ಶನ್ ಸಂಗಾತಿ ಎನ್ನಲಾಗುತ್ತಿರೋ ಪವಿತ್ರಾ ಗೌಡ.

ಹೌದು, ಸ್ಯಾಂಡಲ್‌ವುಡ್‌ನಲ್ಲಿ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದ ಪವಿತ್ರಾ ಗೌಡ ದರ್ಶನ್‌ ಸಂಪರ್ಕಕ್ಕೆ ಬಂದು ಅತ್ಯಂತ ಆತ್ಮೀಯರಾದ್ರಂತೆ. ಆತ್ಮೀಯತೆ ಪ್ರೀತಿಗೂ ತಿರುಗಿತ್ತಂತೆ. ಪವಿತ್ರಾ ಗೌಡ ದರ್ಶನ್‌ ಲೈಫ್‌ನಲ್ಲಿ ಎಂಟ್ರಿಯಾದ ಬಳಿಕ ವಿಜಯಲಕ್ಷ್ಮಿ ನೆಮ್ಮದಿ ಮತ್ತಷ್ಟು ಹಾಳಾಯ್ತು ಎನ್ನಲಾಗುತ್ತೆ. ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧದ ಬಗ್ಗೆ ವಿಜಯಲಕ್ಷ್ಮೀಗೆ ಅರಿವಿದ್ದರೂ ಕೂಡ ಮಗನ ಮುಖ ನೋಡ್ಕೊಂಡು ಎಲ್ಲವೂ ಸಹಿಸಿಕೊಂಡು ಸಾಗಲು ನಿರ್ಧರಿಸ್ತಾರಂತೆ. ಆದ್ರೆ, ಯಾವಾಗ ಪವಿತ್ರಾ ಗೌಡ ತಮ್ಮ ಸಂಸಾರಕ್ಕೆ ಮುಳುವಾಗ್ತಿದ್ದಾರೆ ಎಂಬ ಆತಂಕ ಹುಟ್ಟಿತೋ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋ ಮೂಲಕ ತಮ್ಮ ಆಕ್ರೋಶ ಹೊರಗೆಡವ್ತಾರೆ. ಆ ಘಟನೆ ಬಳಿಕ ವಿಜಯಲಕ್ಷ್ಮಿ ಬಳಿ ತೆರಳಿದ್ದ ದರ್ಶನ್ ಕುಡಿದ ಮತ್ತಿನಲ್ಲಿ ಮತ್ತೊಮ್ಮೆ ಹಲ್ಲೆ ಮಾಡಿದ್ರಂತೆ. ಅಲ್ಲದೆ, ಆ ಸಮಯದಲ್ಲಿ ವಿಜಯಲಕ್ಷ್ಮಿಗೆ ದರ್ಶನ್ ಹೊಡೆಯೋದನ್ನು ಬಿಡಿಸಲು ಮುಂದಾದ ಸ್ಯಾಂಡಲ್‌ವುಡ್‌ನ ಖ್ಯಾತ ನಟನೊಬ್ಬನ ಮೇಲೆಯೂ ದರ್ಶನ್ ಹಲ್ಲೆ ಮಾಡಿದ್ರಂತೆ. ಹೀಗೆ, ಮೇಲಿಂದ ಮೇಲೆ ಮಾನಸಿಕವಾಗಿ ಪೆಟ್ಟು ತಿನ್ನುತ್ತಲೇ ಬಂದಿದ್ದ ವಿಜಯಲಕ್ಷ್ಮೀ ಪಾಲಿಗೆ ಅತಿದೊಡ್ಡ ಯಾತನೆ ಅನುಭವಿಸುವಂತೆ ಮಾಡಿದ್ದ ಕೆಲವು ತಿಂಗಳ ಹಿಂದೆ ಪವಿತ್ರಾ ಗೌಡ ಮಾಡಿದ ಪೋಸ್ಟ್. ಅಲ್ಲೀವರೆಗೂ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧದ ಬಗ್ಗೆ ಅಧಿಕೃತವಾಗಿ ಯಾರೂ ಹೇಳಿಕೆ ನೀಡಿರಲಿಲ್ಲ. ಅವೆಲ್ಲಾ ಗಾಸಿಪ್‌ಗಳ ರೀತಿಯಲ್ಲೇ ಹರಿದಾಡ್ತಿದ್ವು. ಆದ್ರೆ, ಖುದ್ದು ಪವಿತ್ರಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡೋ ಮೂಲಕ ದರ್ಶನ್ ಜೊತೆಗಿನ ಸಂಬಂಧದ ಬಗ್ಗೆ ಜಗತ್ ಜಾಹೀರು ಮಾಡಿದ್ರು. ತಮ್ಮದು 10 ವರ್ಷದ ಸಂಬಂಧ ಅಂತ ಬಹಿರಂಗಗೊಳಿಸಿದ್ರು.

ಪವಿತ್ರಾ ಗೌಡರ ಆ ಪೋಸ್ಟ್‌ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಕ್ಷರಶಃ ಆಘಾತ ತಂದಿತ್ತು. ಮೊದಲೇ ಎದೆಯೊಳಗೆ ಕುದಿಯುತ್ತಿದ್ದ ನೋವಿನ ಜ್ವಾಲೆಗೆ ತುಪ್ಪ ಸುರಿದಂತಾಗಿತ್ತು. ಆ ಘಟನೆ ಬಳಿಕ ವಿಜಯಲಕ್ಷ್ಮೀ ಅಕ್ಷರಶಃ ಕುಸಿದು ಹೋಗಿದ್ರು ಅಂತ ಹೇಳಲಾಗುತ್ತೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿ ಪವಿತ್ರಾ ಗೌಡ ವಿರುದ್ಧ ಆಕ್ರೋಶ ಹೊರಗೆಡವಿದ್ದ ವಿಜಯಲಕ್ಷ್ಮಿ ತಾಳ್ಮೆ ಕಳೆದುಕೊಂಡರೇ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಅಂತ ಎಚ್ಚರಿಸಿದ್ರು. ಈ ಸಂದರ್ಭದಲ್ಲಿ ಪವಿತ್ರಾ ಗೌಡ ಮತ್ತು ವಿಜಯಲಕ್ಷ್ಮಿ ನಡುವೆ ಸೋಷಿಯಲ್ ಮೀಡಿಯಾದಲ್ಲೇ ದೊಡ್ಡ ವಾರ್ ನಡೆದಿತ್ತು. ಆ ವಿವಾದದ ಬಳಿಕ ಇರೋ ಸ್ವಲ್ಪ ನೆಮ್ಮದಿಯನ್ನೂ ಕಳೆದುಕೊಂಡಿದ್ದ ವಿಜಯಲಕ್ಷ್ಮೀಯವರು ಮಗನ ನೆಮ್ಮದಿ, ಖುಷಿ ಕಾರಣಕ್ಕೆ ದರ್ಶನ್ ಮತ್ತು ಪವಿತ್ರಾ ಗೌಡರ ಆ್ಯಕ್ಟಿವಿಟಿಗಳನ್ನು ಸಹಿಸಿಕೊಂಡು ಮುಂದೆ ಸಾಗಲು ನಿರ್ಧರಿಸಿದ್ರು ಎನ್ನಲಾಗುತ್ತೆ.

ಇದನ್ನೂ ಓದಿ: ಗಂಡನ ಸಾವಿಗೆ ಅಸಲಿ ಕಾರಣ ಬಿಚ್ಚಿಟ್ಟ ರೇಣುಕಾಸ್ವಾಮಿ ಪತ್ನಿ; ದರ್ಶನ್​​-ಪವಿತ್ರಾ ಮಾಡಿದ್ದೇನು?

ಅಷ್ಟರಲ್ಲೇ, ದರ್ಶನ್ ಮತ್ತು ಪವಿತ್ರಾ ಗೌಡ ಹೆಸರು ಮುನ್ನೆಲೆಗೆ ಬಂದಿದೆ. ಈ ಬಾರಿ ಯಾವುದೋ ಸಾಮಾನ್ಯವಾದ ವಿಚಾರವಲ್ಲ. ಚಿತ್ರದುರ್ಗದ ಯುವಕನನ್ನು ಬರ್ಬರವಾಗಿ ಕೊಂದಿರೋ ಕೇಸ್‌ನಲ್ಲಿ ದರ್ಶನ್ ಲಾಕ್ ಆಗಿದ್ದಾರೆ. ಅಲ್ಲದೆ, ಇದೆಲ್ಲವೂ ನಡೆದಿದ್ದು ಪವಿತ್ರಾ ಗೌಡ ಕಾರಣಕ್ಕೆ ಎಂಬ ಆರೋಪ ವಿಜಯಲಕ್ಷ್ಮಿಯನ್ನು ಮತ್ತಷ್ಟು ಜರ್ಜರಿತಗೊಳಿಸಿದೆ ಎನ್ನಲಾಗ್ತಿದೆ. ದರ್ಶನ್ ವಿಚಾರವಾಗಿ ಹಲವು ನೋವು ತಿಂದಿರಬಹುದು. ದರ್ಶನ್ ಆಟಾಟೋಪಗಳಿಂದಾಗಿ ನಿಜವಾಗಿಯೂ ಬಲಿಪಶು ಆಗಿರೋದು ಅಂದ್ರೆ ವಿಜಯಲಕ್ಷ್ಮಿ ಅಂದ್ರೂ ತಪ್ಪಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕಥೆ ಕೇಳಿ ದರ್ಶನ್‌ ಪತ್ನಿ ಶಾಕ್‌.. ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್‌ಗೆ ವಿಜಯಲಕ್ಷ್ಮಿ ಖಡಕ್ ಮೆಸೇಜ್; ಏನದು?

https://newsfirstlive.com/wp-content/uploads/2024/06/darshan15.jpg

Load More