newsfirstkannada.com

Video: ರಸ್ತೆ ದಾಟುವ ವೇಳೆ ಬಸ್ಸನ್ನು ಅಟ್ಟಿಸಿಕೊಂಡು ಬಂದ ಕಾಡಾನೆ! ಇದು ಕೊಡಗಿನಲ್ಲಿ ನಡೆದ ಬೆಚ್ಚಿ ಬೀಳಿಸುವ ದೃಶ್ಯ

Share :

22-07-2023

    ಕೆಎಸ್‌ಆರ್‌ಟಿಸಿ ಬಸ್ ಅನ್ನು ಅಟ್ಟಿಸಿಕೊಂಡು ಬಂದ ಗಜರಾಜ

    ಕೊಡಗಿನಲ್ಲಿ ನಡೆದ ಈ ದೃಶ್ಯ ಕಂಡರೆ ಭಯವಾಗೋದು ಗ್ಯಾರಂಟಿ

    ಇಂಥಾ ಸಮಯದಲ್ಲಿ ಚಾಲಕ ಮತ್ತು ಪ್ರಯಾಣಿಕರ ಸ್ಥಿತಿ ಹೇಗಿತ್ತು ಗೊತ್ತಾ?

ಕೊಡಗು: ಹಾಡುಹಗಲೇ ಕಾಡಾನೆಯೊಂದು ಕೆಎಸ್‌ಆರ್‌ಟಿಸಿ ಬಸ್ ಅನ್ನು ಅಡ್ಡಗಟ್ಟಿ ಅಟ್ಟಿಸಿಕೊಂಡು ಬಂದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ದೆವರಪುರದಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಬೆಳಗ್ಗೆ ನಡೆದ ಘಟನೆ ಇದಾಗಿದ್ದು. ಪ್ರಯಾಣಿಕರೋರ್ವರ ಮೊಬೈಲ್​ನಲ್ಲಿ ಕಾಡಾನೆ ಕೆಎಸ್‌ಆರ್‌ಟಿಸಿ ಬಸ್ ಅನ್ನು ಅಟ್ಟಿಸಿಕೊಂಡು ಬಂದ ದೃಶ್ಯ ಸೆರೆಯಾಗಿದೆ.

ದೃಶ್ಯದಲ್ಲಿ ಕಂಡಂತೆ ಕಾಡಾನೆ ರಸ್ತೆ ದಾಟುತ್ತಿದ್ದರಿಂದ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ ನಿಲ್ಲಿಸಿದ್ದಾನೆ. ಆದರೆ ಈ ವೇಳೆ ಆನೆ ಬಸ್ ಬಳಿಗೆ ಓಡೋಡಿ ಬಂದಿದೆ. ಇದರಿಂದ ಗಾಬರಿಗೆ ಒಳಗಾದ ಚಾಲಕ ಮತ್ತು ಪ್ರಯಾಣಿಕರು ಒಂದು ಬಾರಿ ಸ್ತಬ್ಧರಾಗಿದ್ದಾರೆ.

ಆದರೆ ಅದೃಷ್ಟ ಎಂಬಂತೆ ಬಸ್ಸಿನ ಬಳಿಗೆ ಬಂದ ಕಾಡಾನೆ ಹಾಗೆಯೇ ಹೊರಟುಹೋಗಿದೆ. ಮಾತ್ರವಲ್ಲದೆ, ಯಾವುದೇ ಹಾನಿಯನ್ನು ಮಾಡದೆ ಗಜರಾಜ ಅಲ್ಲಿಂದ ಕಾಡಿನತ್ತ ಮುಖಮಾಡಿದ್ದಾನೆ. ಆದರೆ  ಬಸ್​ ಪ್ರಯಾಣಿಕರು, ಚಾಲಕ ಮತ್ತು ನಿರ್ವಾಹಕರು ಬದುಕಿದೆಯೆ ಬಡ ಜೀವ ಎಂಬ ಉದ್ಗಾರ ತೆಗೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ರಸ್ತೆ ದಾಟುವ ವೇಳೆ ಬಸ್ಸನ್ನು ಅಟ್ಟಿಸಿಕೊಂಡು ಬಂದ ಕಾಡಾನೆ! ಇದು ಕೊಡಗಿನಲ್ಲಿ ನಡೆದ ಬೆಚ್ಚಿ ಬೀಳಿಸುವ ದೃಶ್ಯ

https://newsfirstlive.com/wp-content/uploads/2023/07/Elephant-2.jpg

Load More