/newsfirstlive-kannada/media/post_attachments/wp-content/uploads/2024/11/DEVENDRA-FADNAVIS.jpg)
ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದ ಸರ್ಕಾರ ರಚನೆ ಕಗ್ಗಂಟು ಬಗೆಹರಿದಂತೆ ಗೋಚರಿಸ್ತಿವೆ. ದೇವೇಂದ್ರ ಫಡ್ನವೀಸ್​ಗೆ ಸಿಎಂ ಪಟ್ಟ ಕಟ್ಟಲು ನಿರ್ಧಾರ ಆಗಿದೆ ಎನ್ನಲಾಗಿದೆ. ಸಿಎಂ ಸ್ಥಾನ ಬಿಟ್ಟುಕೊಡಲು ಒಪ್ಪಿರುವ ಏಕನಾಥ್ ಶಿಂಧೆ ಹಾಗೂ ಎನ್​ಸಿಪಿ ಅಜಿತ್ ಪವಾರ್ ಬಣ ಪ್ರಬಲ ಖಾತೆಗಳಿಗೆ ಡಿಮ್ಯಾಂಡ್ ಇರಿಸಿದೆ.
ಅಧಿಕಾರ ಅಂದರೆ ಹೀಗೇನೆ. ಎಲ್ಲರಿಗೂ ಅಧಿಕಾರ ಬೇಕು, ಕುರ್ಚಿ ಮೇಲೆ ಕುಳಿತುಕೊಳ್ಳ ಬೇಕು ಅದರಲ್ಲೂ ಮಹಾರಾಜ ಆಗೋದು ಅಂದ್ರೆ ಸುಮ್ನೇನಾ. ಅರ್ಹತೆ ಬೇಕು. ಜೊತೆಗೆ ಅದೃಷ್ಟನೂ ಇರಬೇಕು ಅಂತಾರೆ. ಮಹಾರಾಷ್ಟ್ರದಲ್ಲಿ ಮಹಾ ಸಮರವನ್ನೇ ಗೆದ್ದಾಗಿದೆ. ಆದ್ರೆ ಅಧಿಕಾರ ಹಂಚಿಕೆ ಇದೆಯಲ್ಲಾ ಅದೊಂಥರ ಮಹಾಯುದ್ಧ ಗೆದ್ದಂತೆ.
/newsfirstlive-kannada/media/post_attachments/wp-content/uploads/2024/11/EKNATH-SHINDE.jpg)
ಮೈತ್ರಿ ಮಧುರ.. ತ್ಯಾಗ ಅಮರ ಎಂದರಾ ಏಕನಾಥ ಶಿಂಧೆ?
ಮಹಾರಾಷ್ಟ್ರದಲ್ಲಿ ಸಿಎಂ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ. ಹೊಸ ಸರ್ಕಾರದಲ್ಲೂ ಶಿಂಧೆ ಅರ್ಧ ಟೆರ್ಮ್​ ಸಿಎಂ ಆಗಬೇಕು ಅಂತ ಶಿಂಧೆ ಬಣ ಹಠ ಹಿಡಿದಿತ್ತು. ಆದ್ರೆ ಹೆಚ್ಚು ಸ್ಥಾನಗಳನ್ನು ಪಡೆದಿರೋ ಬಿಜೆಪಿ ಸುಮ್ನಿರಬೇಕಲ್ಲ.. ಫಡ್ನವೀಸ್​ರನ್ನು ಗದ್ದುಗೆಗೆ ಕೂರಿಸುವಾಸೆ.. ಎತ್ತು ಏರಿಗೆ ಎಳೆದ್ರೆ ಕೋಣ ನೀರಿಗೆ ಎಳೆದಂತೆ ಹಗ್ಗ ಹಿಡಿದು ಎಳೆದು ಸುಸ್ತಾದ ಏಕನಾಥ್ ಶಿಂಧೆ ಸಿಎಂ ಪದವಿ ತ್ಯಾಗ ಮಾಡುವ ಸುಳಿವು ನೀಡಿದ್ದಾರೆ. ಮೋದಿ, ಅಮಿತ್ ಶಾ ನಿರ್ಧಾರಕ್ಕೆ ಬದ್ಧವಾಗಿರ್ತೀವಿ ಅಂತ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ದೇವೇಂದ್ರ ಫಡ್ನವಿಸ್​ಗೆ ಸಿಎಂ ಸ್ಥಾನ ಬಹುತೇಕ ಖಚಿತ ಆದಂತಿದೆ.
ಮಹಾಯುತಿ ಎಲ್ಲರಿಗೂ ಧನ್ಯವಾದ ಹೇಳುತ್ತೆ, ಮತದಾರರಿಗೆ ಧನ್ಯವಾದ ಹೇಳುತ್ತೇವೆ, ಎರಡೂವರೆ ವರ್ಷಗಳ ಕಾಲ ಸಿಎಂ ಆಗುವ ಅವಕಾಶ ಸಿಕ್ತು, ಶಿವಸೇನೆ ನಾಯಕರು ಮುಖ್ಯಮಂತ್ರಿ ಆಗಬೇಕು ಅನ್ನೋದು ಬಾಳಾ ಸಾಹೇಬ್ ಠಾಕ್ರೆ ಕನಸಾಗಿತ್ತು, ಠಾಕ್ರೆ ಕನಸನ್ನು ಮೋದಿಜೀ, ಅಮಿತ್ ಶಾ ಈಡೇರಿಸಿದ್ದಾರೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/04/Amit-shah-3.jpg)
ಇನ್ನು ಮಹಾರಾಷ್ಟ್ರ ಸರ್ಕಾರ ರಚನೆ ಕಸರತ್ತು ಮುಂದುವರಿದ ಬೆನ್ನಲ್ಲೇ ಕೇಂದ್ರ ಗೃಹಸಚಿವ ಅಮಿತ್ ಶಾ ಎಂಟ್ರಿಕೊಟ್ಟಿದ್ದು ನಿನ್ನೆ ದೆಹಲಿಯಲ್ಲಿ ಸಭೆ ನಡೆಸಿ ಚಿಂತನ-ಮಂಥನ ನಡೆಸಿದ್ದಾರೆ. ಸದ್ಯ ಸಿದ್ಧಸೂತ್ರಕ್ಕೆ ಬರಲು ಮಹಾಯುತಿ ಘಟಬಂದನ್ ಮುಂದಾಗಿದೆ ಎನ್ನಲಾಗಿದ್ದು ಬಿಜೆಪಿ, ಶಿಂಧೆ, ಎನ್​ಸಿಪಿ ಮೈತ್ರಿಪಡೆ ಪ್ರಬಲ ಖಾತೆಗಳಿಗೆ ಡಿಮ್ಯಾಂಡ್ ಇಟ್ಟಿದೆ.
ಇದನ್ನೂ ಓದಿ: ಮಹಾರಾಷ್ಟ್ರ ನೂತನ ಸಿಎಂ ಯಾರಾಗ್ತಾರೆ? ಏಕನಾಥ್ ಶಿಂಧೆ ರಾಜೀನಾಮೆ ಕೊಡುತ್ತಿದ್ದಂತೆ ಮೆಗಾ ಟ್ವಿಸ್ಟ್!
ಸಿಎಂ ಸ್ಥಾನ ಸೇರಿ 20 ಸಚಿವ ಸ್ಥಾನಗಳಿಗೆ ಬಿಜೆಪಿ ಡಿಮ್ಯಾಂಡ್ ಇರಿಸಿದೆ ಎನ್ನಲಾಗಿದೆ. ಇನ್ನು ಶಿಂಧೆ ಶಿವಸೇನೆ ಬಣಕ್ಕೆ 12 ಸಚಿವ ಸ್ಥಾನ ನೀಡೋ ಬಗ್ಗೆ ಚರ್ಚೆ ನಡೆದಿದೆ. ಎನ್​ಸಿಪಿ ಅಜಿತ್ ಪವಾರ್ ಬಣಕ್ಕೆ 8ರಿಂದ 10 ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಗೃಹಇಲಾಖೆ ಜೊತೆಗೆ ಪ್ರಬಲ ಖಾತೆಗಳ ಮೇಲೆ ಶಿಂಧೆ ಬಣ ಕಣ್ಣಿಟ್ಟಿದೆ. ಶಿವಸೇನೆ ಹಾಗೂ ಎನ್​ಸಿಪಿಗೆ ಡಿಸಿಎಂ ಸ್ಥಾನ ನೀಡೋ ಬಗ್ಗೆಯೂ ಒಮ್ಮತ ಮೂಡಿದೆ ಎನ್ನಲಾಗಿದೆ. ಗೃಹ ಹಾಗೂ ಹಣಕಾಸು ಇಲಾಖೆಯನ್ನ ತನ್ನಲ್ಲೇ ಇರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ ಎನ್ನಲಾಗಿದೆ.
ಎರಡೂವರೆ ವರ್ಷಗಳ ಕಾಲ ಮಹಾರಾಷ್ಟ್ರ ಸಿಎಂ ಆಗಿ ಅಧಿಕಾರದ ಸವಿಯುಂಡ ಏಕನಾಥ್ ಶಿಂಧೆ ಮೈತ್ರಿ ಮಧುರ.. ತ್ಯಾಗ ಅಮರ ಅಂದಂತೆ ಕಾಣ್ತಿದ್ದು ನೂತನ ಸಿಎಂ ಹೆಸರು ಘೋಷಣೆಯೊಂದೇ ಬಾಕಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us