newsfirstkannada.com

ಡಿಕೆಶಿ ವಿರೋಧದ ಮಧ್ಯೆಯೂ ಜಾತಿಗಣತಿ ವರದಿ ರಿಲೀಸ್​​ಗೆ ಸಿಎಂ ಸಿದ್ದು ನಿರ್ಧಾರ.. ಏನಿದು ಸಂಘರ್ಷ?

Share :

21-11-2023

    ವಿರೋಧದ ನಡುವೆಯು ಜಾತಿ ಸಮೀಕ್ಷೆ ಬಿಡುಗಡೆಗೆ ಮುಂದಾದ್ರ ಸಿಎಂ?

    ಜಾತಿಗಣತಿ ವರದಿ ವಿಚಾರದಲ್ಲಿ ಸರ್ಕಾರದೊಳಗೆ ಸಂಘರ್ಷ‌ ಆರಂಭ

    ವಿರೋಧ ಮಾಡ್ತಿರುವ ಒಕ್ಕಲಿಗ, ಲಿಂಗಾಯತ ಸಮುದಾಯದ ಸಚಿವರು

ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ವರದಿಗೆ ತೀವ್ರ ವಿರೋಧದ ನಡುವೆಯು ಸಿಎಂ ಸಿದ್ದರಾಮಯ್ಯ ಅವರು ಮಂಡನೆಗೆ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡಿರುವ ಸಿಎಂ, ರಾಹುಲ್ ಗಾಂಧಿಯವರ ನಿಲುವಿಗೆ ನನ್ನ ಪೂರ್ಣ ಸಹಮತವಿದೆ ಎಂದು ಹೇಳಿದ್ದಾರೆ.

ಈಗಾಗಲೇ ಜಾತಿಗಣತಿಗೆ ಡಿಸಿಎಂ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಂತರಾಜ್ ಆಯೋಗದ ವರದಿ ತಿರಸ್ಕರಿಸಲು ಒಕ್ಕಲಿಗರ ಸಂಘ ಆಗ್ರಹಿಸಿದೆ. ಜೊತೆಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಒಕ್ಕಲಿಗರ ಸಂಘ ಸಲ್ಲಿಸಿರುವ ಮನವಿ ಪತ್ರಕ್ಕೆ ಡಿಸಿಎಂ ಸಹಿ ಹಾಕಿದ್ದಾರೆ. ಜೊತೆಗೆ ಪತ್ರದಲ್ಲಿ ಹೆಚ್.ಡಿ ದೇವೇಗೌಡ, ಎಸ್.ಎಂ ಕೃಷ್ಣ, ಡಿವಿ ಸದಾನಂದಗೌಡ, ಶೋಭಾ ಕರಂದ್ಲಾಜೆ, ಹೆಚ್.ಡಿ ಕುಮಾರಸ್ವಾಮಿ, ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ ಸೇರಿದಂತೆ ಹಲವರ ಸಹಿಗಳು ಇವೆ.

ಈ ಎಲ್ಲ ನಡೆದರೂ ಜಾತಿ ಗಣತಿ ಜಾರಿಗೆ ಮಾಡಬೇಕು ಎಂದು ಕೆಲ ಸಚಿವರು, ಶಾಸಕರು ಸಿಎಂ ಸಿದ್ದರಾಮಯ್ಯರನ್ನು ಒತ್ತಾಯ ಮಾಡಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಚಿವ ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ ಸೇರಿ ಇತರರು ಸಿಎಂರನ್ನು ಒತ್ತಾಯ ಮಾಡಿದ್ದಾರೆ. ಆದ್ರೆ ಒಕ್ಕಲಿಗ, ಲಿಂಗಾಯತ ಸಮುದಾಯದ ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ‌ ಜಾತಿಗಣತಿ ವಿಚಾರಕ್ಕೆ ಸರ್ಕಾರದೊಳಗಿನ ಸಂಘರ್ಷ ಮುನ್ನಲೆಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆಶಿ ವಿರೋಧದ ಮಧ್ಯೆಯೂ ಜಾತಿಗಣತಿ ವರದಿ ರಿಲೀಸ್​​ಗೆ ಸಿಎಂ ಸಿದ್ದು ನಿರ್ಧಾರ.. ಏನಿದು ಸಂಘರ್ಷ?

https://newsfirstlive.com/wp-content/uploads/2023/10/Siddaramaiah-Dk-Shivakumar.jpg

Load More