newsfirstkannada.com

RR ನಗರಕ್ಕೆ ಮುನಿರತ್ನ MLA ಆದ್ರೂ ಎಲ್ಲ ನಡೆಯೋದು ಕುಸುಮಾ ದರ್ಬಾರ್.. ಸೋತ ಅಭ್ಯರ್ಥಿ ಸ್ಟ್ರಾಂಗ್​ ಆದ್ರಾ?

Share :

29-10-2023

    ಆರ್​ಆರ್​ ನಗರದಲ್ಲಿ ಕುಸುಮಾ ವರ್ಸಸ್ ಶಾಸಕ ಮುನಿರತ್ನ

    ಶಾಸಕರ ಮಾತಿಗಿಂತ ಪರಾಜಿತ ಅಭ್ಯರ್ಥಿ ಮಾತಿಗೆ ಹೆಚ್ಚು ಬೆಲೆ

    ಡಿಸಿಎಂ ಡಿ.ಕೆ ಶಿವಕುಮಾರ್ ಕಾಲಿಗೆ ಬಿದ್ದಿದ್ದ ಶಾಸಕ ಮುನಿರತ್ನ

ಆರ್​ಆರ್​ ನಗರದಲ್ಲಿ ಕುಸುಮಾ ವರ್ಸಸ್ ಮುನಿರತ್ನ ಕುರುಕ್ಷೇತ್ರ ಮುಂದುವರಿದಿದೆ. ಕ್ಷೇತ್ರದಲ್ಲಿ ಸೋತ ಅಭ್ಯರ್ಥಿ ಹೇಳಿದಂತೆ ಕೆಲಸವಾಗುತ್ತೆ ಎಂಬ ಶಾಸಕ ಮುನಿರತ್ನ ಆರೋಪಕ್ಕೆ ಪುಷ್ಟಿ ನೀಡುವಂತ ಪತ್ರವೊಂದು ಹರಿದಾಡುತ್ತಿದೆ.

ಮತ್ತೊಂದು ಸುತ್ತಿನ ತಿಕ್ಕಾಟಕ್ಕೆ ಕಾರಣವಾಯ್ತು ಪತ್ರ!

ಮುನಿರತ್ನ.. ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ. ಯಾವುದೇ ಕ್ಷೇತ್ರವಿರಲಿ ಅಲ್ಲಿ ಶಾಸಕರ ಅಣತಿಯಂತೆ ಕೆಲಸ ಕಾರ್ಯಗಳು ಆಗ್ತಾವೆ. ಆದ್ರೆ, ಆರ್​ಆರ್​ನಗರ ಕ್ಷೇತ್ರದಲ್ಲಿ ಮಾತ್ರ ಶಾಸಕರ ಮಾತಿಗಿಂತ ಪರಾಜಿತ ಅಭ್ಯರ್ಥಿ ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡ್ತಾರಂತೆ. ಈಗಂತ ಶಾಸಕ ಮುನಿರತ್ನ ಹಲವು ಭಾರಿ ಆರೋಪ ಮಾಡಿದ್ರು. ಇದೀಗ ಶಾಸಕ ಮುನಿರತ್ನ ಆರೋಪಕ್ಕೆ ಪುಷ್ಠಿ ನೀಡುವಂತ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆರ್​ಆರ್​ನಗರ ಕುರುಕ್ಷೇತ್ರದಲ್ಲಿ ಮತ್ತೊಂದು ಸುತ್ತಿನ ತಿಕ್ಕಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.

DCM ಡಿ.ಕೆ ಶಿವಕುಮಾರ್ ಕಾಲಿಗೆ ಬಿದ್ದಿದ್ದ ಶಾಸಕ ಮುನಿರತ್ನ

ಈಗಾಗಲೇ ಕ್ಷೇತ್ರದ ಅಭಿವೃದ್ಧಿ ಮತ್ತು ಅನುದಾನದ ವಿಚಾರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್​ ಜೊತೆ ಮುನಿರತ್ನ ವಾಕ್ಸಮರ ನಡೆಸಿದ್ದಾರೆ. ಕ್ಷೇತ್ರದ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಕಾಲಿಗೂ ಮುನಿರತ್ನ ಬಿದ್ದಿದ್ದರು. ಇದೀಗ ಕುಸುಮಾರ ಹೆಸರಲ್ಲಿನ ಶಿಫಾರಸು ಪತ್ರ ಹರಿದಾಡುತ್ತಿರುವುದು, ಮುನಿರತ್ನರ ಕಣ್ಣನ್ನು ಕೆಂಪಗಾಗಿಸಿದೆ.

ಮುನಿರತ್ನ ಅಸಮಾಧಾನ

  • ನನ್ನ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿ ಹೇಳಿದಂತೆ ಕೆಲಸವಾಗುತ್ತೆ
  • ಪರಾಜಿತ ಅಭ್ಯರ್ಥಿಯೇ ಅಧಿಕಾರಿಗಳ ಸಭೆ ನಡೆಸುತ್ತಾರೆ
  • ಈಗ ಕುಸುಮಾರ ಹೆಸರಿನ ಪತ್ರ ಹರಿದಾಡ್ತಿದ್ದು ಆರೋಪಕ್ಕೆ ಪುಷ್ಟಿ
  • ಕಸದ ಗುತ್ತಿಗೆ ಸಂಸ್ಥೆಯೊಂದಕ್ಕೆ ನೀಡಲು ಶಿಫಾರಸ್ಸಿನ ಪತ್ರ
  • ಮೀನಾಕ್ಷಿ ಎಂಟರ್​ಪ್ರೈಸಸ್ ಸಂಸ್ಥೆಗೆ ನೀಡುವಂತೆ ಶಿಫಾರಸು
  • ಕುಸುಮಾ ಹನುಮಂತರಾಯಪ್ಪ ಹೆಸರಲ್ಲಿ ಜಂಟಿ ಆಯುಕ್ತರಿಗೆ ಪತ್ರ
  • ಕುಸುಮಾರ ಪತ್ರದಲ್ಲಿ ಸರ್ಕಾರಿ ಅಧಿಕಾರಿಗಳ ಸಹಿ ಕೂಡ ಇದೆ

ಕ್ಷೇತ್ರದ ವಿಚಾರದಲ್ಲಿ ಕುಸುಮಾ ಹಸ್ತಕ್ಷೇಪದ ಬಗ್ಗೆ ಈ ಹಿಂದೆ ಶಾಸಕ ಮುನಿರತ್ನ ಸಾಕಷ್ಟು ಆರೋಪ ಮಾಡಿದ್ರು.. ಆದ್ರೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ, ಶಾಸಕರ ಆರೋಪಕ್ಕೆ ಪುಷ್ಟಿ ನೀಡುವಂತಿದೆ. ಇದು ಕುಸುಮಾ ಮತ್ತು ಮುನಿರತ್ನ ನಡುವೆ ಮತ್ತೊಂದು ಸುತ್ತಿನ ವಾಗ್ಯುದ್ಧಕ್ಕೂ ಸಾಕ್ಷಿಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RR ನಗರಕ್ಕೆ ಮುನಿರತ್ನ MLA ಆದ್ರೂ ಎಲ್ಲ ನಡೆಯೋದು ಕುಸುಮಾ ದರ್ಬಾರ್.. ಸೋತ ಅಭ್ಯರ್ಥಿ ಸ್ಟ್ರಾಂಗ್​ ಆದ್ರಾ?

https://newsfirstlive.com/wp-content/uploads/2023/10/KUSUMA_MUNIRATNA.jpg

Load More