newsfirstkannada.com

ಬಿ.ವೈ ವಿಜಯೇಂದ್ರ ಆಯ್ಕೆಗೆ ಸೀನಿಯರ್‌ ಸಿಟ್ಟು.. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಾರಾ ವಿ. ಸೋಮಣ್ಣ?

Share :

13-11-2023

    BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ವಿ. ಸೋಮಣ್ಣಗೆ ಬೇಸರ

    ವಿಜಯೇಂದ್ರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗೋದು ಕಷ್ಟ

    ವಿ. ಸೋಮಣ್ಣರನ್ನ ಕಾಂಗ್ರೆಸ್​ ಪಕ್ಷಕ್ಕೆ ಕರೆತರಲು ಕೈ ನಾಯಕರು ತಯಾರಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರು ಆಯ್ಕೆಯಾದ ಬಳಿಕ ರಾಜ್ಯ ಕಮಲ ಪಾಳಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಇದರ ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ. ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ ಹಲವರು ಮುಂದಿನ ರಾಜಕೀಯ ನಡೆ ಬಗ್ಗೆ ಚಿಂತನೆ ನಡೆಸಿದ್ದಾರೆ.

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಕೂಡ ಒಬ್ಬರು. ಬಿ.ವೈ ವಿಜಯೇಂದ್ರ ಅವರ ಆಯ್ಕೆ ಅಂತಿಮವಾಗುತ್ತಿದ್ದಂತೆ ಸೋಮಣ್ಣ ಅವರಿಗೆ ಭಾರೀ ನಿರಾಸೆಯಾಗಿದೆ ಎನ್ನಲಾಗಿದೆ. ಯಾಕಂದ್ರೆ ಯುವ ನಾಯಕ ಬಿ.ವೈ. ವಿಜಯೇಂದ್ರ ಜೊತೆಗೆ ಹಿರಿಯ ಬಿಜೆಪಿ ನಾಯಕ ಸೋಮಣ್ಣ ಅವರು ಹೊಂದಾಣಿಕೆ ಮಾಡಿಕೊಂಡು ಹೋಗುವುದು ಕಷ್ಟ. ಪ್ರಮುಖವಾಗಿ ಸೋಮಣ್ಣ ಅವರ ಮೇಲೆ ಯಡಿಯೂರಪ್ಪರಿಗೂ ಬೇಸರವಿದೆ.

ಸದ್ಯ ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿರುವ ವಿ. ಸೋಮಣ್ಣ ಅವರು ಪಕ್ಷ ತೊರೆಯುವ ಆಲೋಚನೆಯಲ್ಲಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಒಂದು ವೇಳೆ ವಿ.ಸೋಮಣ್ಣ ಅವರು ಬಿಜೆಪಿ ಪಕ್ಷ ತೊರೆಯಲು ಮುಂದಾದ್ರೆ ಮರಳಿ ಮಾತೃ ಪಕ್ಷ ಸೇರಲು ಸಜ್ಜಾಗಬಹುದು ಎನ್ನಲಾಗಿದೆ. ಬಿಜೆಪಿ ಹಿರಿಯ ನಾಯಕರ ಈ ಅಸಮಾಧಾನದ ಮಧ್ಯೆ ಆಪರೇಷನ್ ಹಸ್ತಕ್ಕೆ ‘ಕೈ’ ನಾಯಕರ ಪ್ಲಾನ್ ಮಾಡಿದ್ದಾರೆ.

ಸೋಮಣ್ಣ ನಡೆ ಕಾಂಗ್ರೆಸ್ ಕಡೆನಾ?

ಮಾಜಿ ಸಚಿವ ವಿ. ಸೋಮಣ್ಣರನ್ನ ಕಾಂಗ್ರೆಸ್​ ಪಕ್ಷಕ್ಕೆ ಕರೆತರಲು ಕೈ ನಾಯಕರು ತಯಾರಿ ನಡೆಸಿದ್ದಾರೆ. ಈ ಹಿಂದೆ ಕೂಡ ಸೋಮಣ್ಣ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಮಾತುಕತೆ ನಡೆಸಿದ್ದರು. ಇದೀಗ ಮತ್ತೆ ಸೋಮಣ್ಣ ಅವರನ್ನ ಮರಳಿ ಪಕ್ಷಕ್ಕೆ ಕರೆತರಲು ಡಿ.ಕೆ ಶಿವಕುಮಾರ್ ಆಸಕ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆಯನ್ನು ನೀಡುವ ಸಾಧ್ಯತೆ ಇದೆ. ಸದ್ಯ BJP ರಾಜ್ಯಾಧ್ಯಕ್ಷ ಸ್ಥಾನವೂ ಕೈ ತಪ್ಪಿರೋದ್ರಿಂದ ಪಕ್ಷ ತೊರೆಯುವ ಆಲೋಚನೆಯಲ್ಲಿ ಸೋಮಣ್ಣ ಅವರು ಇದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿ.ವೈ ವಿಜಯೇಂದ್ರ ಆಯ್ಕೆಗೆ ಸೀನಿಯರ್‌ ಸಿಟ್ಟು.. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಾರಾ ವಿ. ಸೋಮಣ್ಣ?

https://newsfirstlive.com/wp-content/uploads/2023/06/V-Somanna.jpg

Load More