newsfirstkannada.com

ಇಂದು ದೆಹಲಿಗೆ ತೆರಳುತ್ತಾರಾ ಹೆಚ್​ ಡಿ ಕುಮಾರಸ್ವಾಮಿ? ಪ್ರಧಾನಿಯನ್ನು ಭೇಟಿ ಮಾಡುತ್ತಾರಾ? ಇಲ್ಲಿದೆ ಮಾಹಿತಿ 

Share :

12-09-2023

    ಲೋಕಸಭೆ ಚುನಾವಣೆಗಾಗಿ ನಡೆಯುತ್ತಿದೆ ಮೆಗಾ ಪ್ಲಾನ್​

    ಬಿಜೆಪಿ-ಜೆಡಿಎಸ್​ ಮೈತ್ರಿ ಬಗ್ಗೆ ಮೋದಿ ಜೊತೆಗೆ ಹೆಚ್​ಡಿಕೆ ಚರ್ಚೆ

    ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ ಬಿಜೆಪಿ-ಜೆಡಿಎಸ್​ ಮೈತ್ರಿ ವಿಚಾರ

ಲೋಕ ಸಭೆ ಚುನಾವಣೆಯ ಹಿನ್ನಲೆ ರಾಜ್ಯಾದ್ಯಂತ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇತ್ತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನಕ್ಕೆ ಕಾಯುತ್ತಿದ್ದು, ಇಂದು ದೆಹಲಿಗೆ ತೆರಳಬೇಕಿತ್ತು. ಆದರೆ ಮೋದಿಯವರ ಕರೆ ಬಾರದ ಹಿನ್ನಲೆ ಹೆಚ್​​ಡಿಕೆ ಇಂದು ದೆಹಲಿಗೆ ತೆರಳುವ ಕಾರ್ಯಕ್ರಮವನ್ನು ಸ್ಥಗಿತ ಮಾಡಿದ್ದಾರೆ.

ಸೆಪ್ಟೆಂಬರ್ 12 ಅಥವಾ 13 ರಂದು ಹೆಚ್ ಡಿ ಕುಮಾರಸ್ವಾಮಿ ದೆಹಲಿ ತೆರಳಬೇಕಾಗಿತ್ತು. ಆದರೆ ಜಿ20 ಶೃಂಗಸಭೆ ಮುಗಿದು ಹಲವು ಕಾರ್ಯಕ್ರಮಗಳಳ್ಲಿ ಪ್ರಧಾನಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಮೋದಿ ಆಹ್ವಾನ ಬಂದ ಕೂಡಲೇ ಹೆಚ್​ಡಿಕೆ ದೆಹಲಿಯತ್ತ ಮುಖ ಮಾಡಲಿದ್ದಾರೆ. ಪ್ರಧಾನಿ ಜೊತೆಗೆ ಕುಳಿತು ಮುಂಬರುವ ಚುನಾವಣೆ ಕುರಿತಂತೆ ಚರ್ಚಿಸಲಿದ್ದಾರೆ.

ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಗಾಗಿ ಭಾರೀ ಜಿದ್ದಾ ಜಿದ್ದಿ ನಡೆಯುತ್ತಿದೆ. ಇತ್ತ ಬಿಜೆಪಿ ಪಕ್ಷ ಜೆಡಿಎಸ್​ ಜೊತೆಗೆ ಮೈತ್ರಿ ಮಾಡಲು ಮುಂದಾದರೆ, ಅತ್ತ ಕಾಂಗ್ರೆಸ್​ ತನ್ನದೇ ಯೋಚನೆಯಲ್ಲಿದೆ. ಒಟ್ಟಿನಲ್ಲಿ ಪಕ್ಷಗಳು ತಂತ್ರ-ಕುತಂತ್ರ ಮಾಡಲು ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ದೆಹಲಿಗೆ ತೆರಳುತ್ತಾರಾ ಹೆಚ್​ ಡಿ ಕುಮಾರಸ್ವಾಮಿ? ಪ್ರಧಾನಿಯನ್ನು ಭೇಟಿ ಮಾಡುತ್ತಾರಾ? ಇಲ್ಲಿದೆ ಮಾಹಿತಿ 

https://newsfirstlive.com/wp-content/uploads/2023/09/HDK-Modi.jpg

Load More