newsfirstkannada.com

KL ರಾಹುಲ್ ಬ್ಯಾಟಿಂಗ್ ಮಾನಿಟರ್​ ಮಾಡಿದ ಅಗರ್ಕರ್, ದ್ರಾವಿಡ್.. ಪಾಕ್​ ವಿರುದ್ಧದ ಮ್ಯಾಚ್​ ಆಡ್ತಾರಾ?

Share :

28-08-2023

    ಕೋಚ್​ ದ್ರಾವಿಡ್​, ಕ್ಯಾಪ್ಟನ್​ ರೋಹಿತ್​ ಫುಲ್​ ರಿಲ್ಯಾಕ್ಸ್​..!

    ಫ್ಯಾನ್ಸ್​ನ್ನ ಕಾಡ್ತಿರೋ ಯಕ್ಷಪ್ರಶ್ನೆ, KL ರಾಹುಲ್ ಬ್ಯಾಟಿಂಗ್

    ವಿಕೆಟ್​ ಕೀಪಿಂಗ್​ ಟೆಸ್ಟ್​ನಲ್ಲೂ ರಾಹುಲ್​ ಬಹುತೇಕ ಪಾಸ್

ಟೀಮ್​ ಇಂಡಿಯಾದಲ್ಲಿ ಸದ್ಯ ಇರೋದು ಒಬ್ಬನೇ ಒಬ್ಬ ಕನ್ನಡಿಗ. ಅದು ಕೆ.ಎಲ್​ ರಾಹುಲ್​. ಆದ್ರೆ, ಫಿಟ್​​ನೆಸ್​​ ಸಮಸ್ಯೆ ಎದುರಿಸ್ತಾ ಇರೋ ರಾಹುಲ್​ ಏಷ್ಯಾಕಪ್​, ವಿಶ್ವಕಪ್​ ಆಡ್ತಾರಾ ಅನ್ನೋದು ಸದ್ಯ ಅಭಿಮಾನಿಗಳನ್ನ ಕಾಡ್ತಿರೋ ಯಕ್ಷಪ್ರಶ್ನೆ. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹಾಗಾದ್ರೆ, ಬದ್ಧವೈರಿ ಪಾಕ್​ ವಿರುದ್ಧ ರಾಹುಲ್​ ಕಣಕ್ಕೆ ಇಳಿಯುತ್ತಾರಾ?.

ರಾಹುಲ್​ ಫಿಟ್ಟಾ, ಅನ್​ಫಿಟ್ಟಾ..?. ಸದ್ಯ ಟೀಮ್​ ಇಂಡಿಯಾ ಅಭಿಮಾನಿಗಳನ್ನ ಬಿಟ್ಟೂ ಬಿಡದೇ ಕಾಡ್ತಿರೋ ಪ್ರಶ್ನೆಯಿದು. ಏಷ್ಯಾಕಪ್​ ಟೂರ್ನಿಗೆ ರಾಹುಲ್​ ಸೆಲೆಕ್ಟ್​ ಆಗಿದ್ರೂ, 100% ಫಿಟ್​ ಆಗಿಲ್ಲ ಅಂತಾ ಸೆಲೆಕ್ಷನ್​​ ಕಮಿಟಿ ಚೇರ್ಮನ್​​ ಅಜಿತ್​ ಅಗರ್ಕರ್​ ಹೇಳಿದ್ರು. ಏಷ್ಯಾಕಪ್​ ಟೂರ್ನಿಯ ಪಾಕಿಸ್ತಾನ​ ವಿರುದ್ಧದ ಮೊದಲನೇ ಪಂದ್ಯವನ್ನಾಡೋದು ಅನುಮಾನ ಎಂದಿದ್ರು. ಅಲ್ಲಿಂದ ಈವರೆಗೂ ರಾಹುಲ್​ ಫಿಟ್​ನೆಸ್​ ಪ್ರಶ್ನೆಯಾಗಿ ಉಳಿದಿದೆ.

KL ರಾಹುಲ್

ಫಿಟ್​ನೆಸ್​ನ​​​​ ಅನುಮಾನಕ್ಕೆ ಉತ್ತರದ ಹುಡುಕಾಟ.!

ಸದ್ಯಕ್ಕೆ ಬಂದಿರೋ ಹೊಸ ಅಪ್​ಡೇಟ್​ ಏಷ್ಯಾಕಪ್​ಗೆ ಪೂರ್ವಾಭಾವಿಯಾಗಿ ಟೀಮ್​ ಇಂಡಿಯಾ, ಬೆಂಗಳೂರಿನ ಆಲೂರಿನಲ್ಲಿ ಪ್ರಾಕ್ಟಿಸ್​ ಕ್ಯಾಂಪ್​ ನಡೆಸ್ತಿದೆ. ಕೆ.ಎಲ್​ ರಾಹುಲ್​ ಕೂಡ ಕ್ಯಾಂಪ್​ನ ಭಾಗವಾಗಿದ್ದಾರೆ. 6 ದಿನಗಳ ಈ ಕ್ಯಾಂಪ್​ನಲ್ಲಿ ರಾಹುಲ್​ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಫಿಟ್​ನೆಸ್​​ ಬಗ್ಗೆ ಎದ್ದಿರುವ ಅನುಮಾನಗಳಿಗೆ ಉತ್ತರ ಕಂಡುಕೊಳ್ಳೋ ಯತ್ನ ನಡೆಯುತ್ತಿದೆ.

ಪಾಕ್​ ವಿರುದ್ಧ ಕಣಕ್ಕಿಳಿಯೋದು ಫಿಕ್ಸ್​..!

ಪ್ರಾಕ್ಟೀಸ್​​ ಕ್ಯಾಂಪ್​​ನ ಮೊದಲ 3 ದಿನದ ಬಿಗ್ಗೆಸ್ಟ್​ ಅಪ್​​​ಡೇಟ್​ ಇದು. ಪ್ರಾಕ್ಟಿಸ್​​ ಕ್ಯಾಂಪ್​ನಲ್ಲಿ ರಾಹುಲ್​ ಸಮರಾಭ್ಯಾಸ ಆರಂಭಿಸಿದ್ದು, ಫುಲ್​ ಫಿಟ್​ ಆಗಿದ್ದಾರೆ. ಇದ್ರೊಂದಿಗೆ ಏಷ್ಯಾಕಪ್​​ನ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯೋದು ಕನ್​ಫರ್ಮ್​ ಆಗಿದೆ. ಸೂಪರ್​ ಸಂಡೇ ನಡೆಯಲಿರುವ ಬದ್ಧವೈರಿ ಪಾಕಿಸ್ತಾನ ಎದುರಿನ ಕಾಳಗದಲ್ಲಿ ಆಡೋ ಸಾದ್ಯತೆ ದಟ್ಟವಾಗಿದೆ.

ಬ್ಯಾಟ್​ ಹಿಡಿದು ಬೆವರಿಳಿಸಿದ ಕೆ.ಎಲ್​ ರಾಹುಲ್​.!

ಆಲೂರಿನ ಅಭ್ಯಾಸದ ಅಖಾಡದಲ್ಲಿ ಕೆ.ಎಲ್​ ರಾಹುಲ್​ ಭರ್ಜರಿ ಬ್ಯಾಟಿಂಗ್​ ನಡೆಸಿದ್ದಾರೆ. ರೋಹಿತ್​ ಶರ್ಮಾ ಜೊತೆಗೆ ಬ್ಯಾಟಿಂಗ್​ ನಡೆಸಿದ ರಾಹುಲ್​, ಆರಂಭದಲ್ಲಿ ಆಕಾಶ್​ ದೀಪ್​, ಶಾರ್ದೂಲ್​ ಠಾಕೂರ್​ರ ಎಸೆತಗಳನ್ನ ಎದುರಿಸಿದ್ರು. ಬಳಿಕ ಸ್ಪಿನ್ನರ್​ಗಳಾದ ಅಕ್ಷರ್​ ಪಟೇಲ್​, ಮಯಾಂಕ್​ ಮರ್ಕಂಡೆ ಸ್ಪಿನ್​ ಅಟ್ಯಾಕ್​ಗೂ ಬ್ಯಾಟ್​​ನಿಂದ ಉತ್ತರಿಸಿದ್ದಾರೆ. ಫುಟ್​ವರ್ಕ್​, ಶಾಟ್​​​ ಮೇಕಿಂಗ್​, ರನ್ನಿಂಗ್​ ಬಿಟ್ವೀನ್​ ದ ವಿಕೆಟ್ಸ್​ ಎಲ್ಲ ಬಾಕ್ಸ್​ ಟಿಕ್​ ಮಾಡಿದ್ದಾರೆ. ರಾಹುಲ್​ ಬ್ಯಾಟಿಂಗ್ ಅನ್ನ ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಅಜಿತ್​ ಅಗರ್ಕರ್​ ಹಾಗೂ ಕೋಚ್​ ರಾಹುಲ್​ ದ್ರಾವಿಡ್​ ಮಾನಿಟರ್​ ಮಾಡಿದ್ದಾರೆ.

ಗ್ಲೌಸ್​ ತೊಟ್ಟು ಜಬರ್ದಸ್ತ್​​ ವಿಕೆಟ್​ ಕೀಪಿಂಗ್​.!

ಬ್ಯಾಟಿಂಗ್​ ಟೆಸ್ಟ್​ ಮಾತ್ರವಲ್ಲ.. ವಿಕೆಟ್​ ಕೀಪಿಂಗ್​ ಟೆಸ್ಟ್​ನಲ್ಲೂ ರಾಹುಲ್​ ಬಹುತೇಕ ಪಾಸ್​ ಆಗಿದ್ದಾರೆ. ಗ್ಲೌಸ್​ ತೊಟ್ಟು ಫೀಲ್ಡಿಂಗ್​ ಕೋಚ್​​ ಟಿ.ದಿಲೀಪ್​ ಮಾರ್ಗದರ್ಶನದಲ್ಲಿ ಕೀಪಿಂಗ್​ ಡ್ರಿಲ್​ ನಡೆಸಿದ್ದಾರೆ. ಶಾರ್ಟ್​​ ಡಿಸ್ಟೆನ್ಸ್​ ಕ್ಯಾಚಿಂಗ್ ಪ್ರಾಕ್ಟಿಸ್​ ನಡೆಸಿರುವ ರಾಹುಲ್​, ತನ್ನ ಫುಟ್​ವರ್ಕ್​ನಿಂದಲೇ ಗಮನ ಸೆಳೆದಿದ್ದಾರೆ. ​

ಕ್ಯಾಪ್ಟನ್​ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್

ರಾಹುಲ್​ ಫಿಟ್​, ಟೀಮ್​ ಇಂಡಿಯಾಗೆ ಆನೆ ಬಲ.!

ಏಷ್ಯಾಕಪ್​ ಟೂರ್ನಿಗೂ ಮುನ್ನ ಫಿಟ್​ನೆಸ್​​ ಬಗ್ಗೆ ಇದ್ದ ಅನುಮಾನಕ್ಕೆ ಕೊನೆಗೂ ತೆರೆ ಬಿದ್ದಿದೆ. ಇದ್ರೊಂದಿಗೆ ಟೀಮ್​ ಇಂಡಿಯಾದ ಬಲವೂ ಹೆಚ್ಚಿದೆ. ಓಪನಿಂಗ್​, ಮಿಡಲ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ಮಾಡಬಲ್ಲ ರಾಹುಲ್​, ವಿಕೆಟ್​ ಕೀಪರ್​​ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಬಲ್ಲರು. ಹೀಗಾಗಿ ಕೋಚ್​ ರಾಹುಲ್​ ದ್ರಾವಿಡ್​​ ಹಾಗೂ ಕ್ಯಾಪ್ಟನ್​ ರೋಹಿತ್​ ಶರ್ಮಾಗಿದ್ದ ದೊಡ್ಡ ಸೆಲೆಕ್ಷನ್​ ತಲೆನೋವು ಬಗೆ ಹರಿದಂತಾಗಿದೆ.

ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​​​ ಆಗಿ, 18 ಏಕದಿನ ಪಂದ್ಯವನ್ನಾಡಿರುವ ರಾಹುಲ್​, 55.64ರ ಅತ್ಯತ್ತಮ ಸರಾಸರಿ ಹೊಂದಿದ್ದಾರೆ. ಹೀಗಾಗಿ ಫುಲ್​ ಫಿಟ್​ ಆಗಿರುವ ಕೆ.ಎಲ್​ ರಾಹುಲ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಕನ್​​ಫರ್ಮ್​. ಇನ್ನು, ಏಷ್ಯಾಕಪ್​ನಲ್ಲಿ ಕನ್ನಡಿಗ ಖದರ್​​ ತೋರಿದ್ದೇ ಆದ್ರೆ, ಆ ಬಳಿಕ ನಡೆಯೋ ವಿಶ್ವಕಪ್​ ಗೆಲುವಿನ ಕನಸು ಇನ್ನಷ್ಟು ಹೆಚ್ಚೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್ ಬ್ಯಾಟಿಂಗ್ ಮಾನಿಟರ್​ ಮಾಡಿದ ಅಗರ್ಕರ್, ದ್ರಾವಿಡ್.. ಪಾಕ್​ ವಿರುದ್ಧದ ಮ್ಯಾಚ್​ ಆಡ್ತಾರಾ?

https://newsfirstlive.com/wp-content/uploads/2023/08/KL_RAHUL_AGARKAR_RAHUL.jpg

Load More