newsfirstkannada.com

ದಂತಕತೆ ಧೋನಿ ರಾಜಕಿಯಕ್ಕೆ ಬರ್ತಾರಾ..? ತಲಾ ಮುಂದೆ ಬೌನ್ಸರ್ ಎಸೆದ ಆನಂದ್​ ಮಹೀಂದ್ರಾ..!

Share :

31-05-2023

    IPL​ ನಿವೃತ್ತಿ ಬಳಿಕ ರಾಜಕೀಯದತ್ತ ಧೋನಿ?

    ಆನಂದ್​ ಮಹೀಂದ್ರಾ ಕಂಡಂತೆ ಧೋನಿ ಹೇಗೆ ಗೊತ್ತಾ?

    ನಾಯಕತ್ವ ಗುಣವಿರುವ ಧೋನಿ ರಾಜಕೀಯದತ್ತ ಹೆಜ್ಜೆ ಹಾಕುವ ಮನಸ್ಸು ಮಾಡ್ತಾರಾ?

ಧೋನಿ ಸದ್ಯ ಸುದ್ದಿಯ ಜೊತೆಗೆ ಟ್ರೆಂಡಿಂಗ್​ನಲ್ಲಿರುವ ಕ್ರಿಕೆಟಿಗ. ಚೆನ್ನೈ ತಂಡ ಟ್ರೋಫಿ ಗೆದ್ದ ಬಳಿಕವಂತೂ ಮಾಹಿ ಬಗ್ಗೆ ಲೆಕ್ಕವಿಲ್ಲದಷ್ಟು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಮಾಹಿಯ ನಾಯಕತ್ವ, ಕೂಲ್​ ಕ್ಯಾಪ್ಟನ್​ಶಿಫ್​​, ಕಣ್ಣೀರು ಹಾಕಿದ ಧೋನಿ, ತಂಡದಲ್ಲಿ ಧೋನಿ ನಡತೆ ಹೀಗೆ ಮಾಹಿಯನ್ನು ಗುಣಗಾನ ಮಾಡುವವರೇ ಜಾಸ್ತಿ. ಆದರೀಗ ಕ್ರಿಕೆಟ್​​ ಬಿಟ್ಟು ರಾಜಕೀಯದತ್ತ ಧೋನಿ ಹೆಸರು ಕೇಳಿಬರುತ್ತಿದೆ. ಧೋನಿಗೆ ನಿಜವಾಗಿಯೂ ರಾಜಕೀಯದತ್ತ ಒಲವಿದೆಯಾ? ತಿಳಿಯೋಣ.

ರಾಜಕೀಯದೆಡೆಗೆ ಧೋನಿ?

ಧೋನಿ ತಾನಾಯ್ತು ತನ್ನ ಕೆಲಸವಾಯ್ತು ಅಂಥ ಇರುವ ವ್ಯಕ್ತಿ. ಅದರೆ ಕೆಲಸ ಅಂತ ಬಂದಾಗ ಅದರ ಬಗ್ಗೆ ಚಿಂತಿಸಿ ಸಕ್ಸಸ್​ ಮಂತ್ರ ಜಪಿಸೋದೋ ಅವರ ತತ್ವ. ಹಾಗಾಗಿ ಸಕ್ಸಸ್​ಗೆ ಬೇಕಾದ ಎಲ್ಲಾ ತಂತ್ರಗಳನ್ನು ಮಾಹಿ ಪ್ರಯೋಗಿಸಿಯೇ ಪ್ರಯೋಗಿಸುತ್ತಾರೆ. ಇದೇ ವಿಚಾರಕ್ಕೆ ಧೋನಿ ಮುನ್ನಡೆಸುವ ತಂಡ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 9 ಬಾರಿ ಫೈನಲ್​ ಪ್ರವೇಶಿಸಿದ್ದು, ಅದೇ ರೀತಿ ಈ ಬಾರಿ ಐಫಿಎಲ್​ ಟ್ರೋಫಿಗೆ ಮುತ್ತಿಕ್ಕಿದ್ದು. ಆದರೆ ನಾಯಕತ್ವ ಗುಣ ಹೊಂದಿರುವ ಧೋನಿ ರಾಜಕೀಯದತ್ತ ಹೋದರೆ ಹೇಗಿರಬಹುದು?.

ಖ್ಯಾತ ಉದ್ಯಮಿ ಕಂಡತೆ ಧೋನಿ

ಭಾರತದ ಖ್ಯಾತ  ಉದ್ಯಮಿ ಆನಂದ್​ ಮಹೀಂದ್ರಾ ಅವರ ಟ್ವೀಟ್​ನಿಂದಾಗಿ ಧೋನಿ ಮತ್ತು ರಾಜಕೀಯದ ಕುರಿತು ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್​ ಮಹೀಂದ್ರಾ ಟ್ವೀಟ್​ನಲ್ಲಿ ಏನಿದೆ?.

ಧೋನಿ ಸ್ಪಷ್ಟ ಭವಿಷ್ಯದ ನಾಯಕ

‘‘ಹೆಚ್ಚಿನ ಜನರಂತೆ, ಹೇಳಿದಂತೆ ಧೋನಿ ಐಪಿಎಲ್​ ನಲ್ಲಿ ಇನ್ನೂ ಒಂದು ವರ್ಷ ಉಳಿಯಬಹುದು ಎಂದು ಕೇಳಿ ಸಂತೋಷವಾಯಿತು. ಆದರೆ ನಾನು ಹೆಚ್ಚು ಕಾಲ ಆಶಿಸುವುದಿಲ್ಲ, ಏಕೆಂದರೆ ಅವರು ರಾಜಕೀಯ ಕ್ಷೇತ್ರವನ್ನು ಪರಿಗಣಿಸಬೇಕು ಎಂದು ನಾನು ಬಯಸುತ್ತೇನೆ. ಏಕೆಂದರೆ ಬೈಜಯಂತ್ ಜಯ್ ಪಾಂಡಾ ಅವರ ಅಧ್ಯಕ್ಷತೆಯಲ್ಲಿ ಎನ್‌ಸಿಸಿ ಪರಿಶೀಲನಾ ಸಮಿತಿಯಲ್ಲಿ ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರ ಬೌದ್ಧಿಕ ಚುರುಕುತನವು ಕ್ರೀಡಾಕ್ಷೇತ್ರದಲ್ಲಿ ಅವರ ಚುರುಕುತನಕ್ಕೆ ಹೊಂದಿಕೆಯಾಗುತ್ತದೆ ಎಂದು ಕಂಡಿದ್ದೇನೆ. ಅವರು ಸ್ಪಷ್ಟ ಭವಿಷ್ಯದ ನಾಯಕ’’ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ದಂತಕತೆ ಧೋನಿ ರಾಜಕಿಯಕ್ಕೆ ಬರ್ತಾರಾ..? ತಲಾ ಮುಂದೆ ಬೌನ್ಸರ್ ಎಸೆದ ಆನಂದ್​ ಮಹೀಂದ್ರಾ..!

https://newsfirstlive.com/wp-content/uploads/2023/05/Dhoni-10.webp

Load More