newsfirstkannada.com

ಧಾರವಾಡ ಬಿಟ್ಟು ವಲಸೆ ಹೋಗ್ತಾರಾ ಪ್ರಲ್ಹಾದ್ ಜೋಶಿ? ಚೆಕ್‌ಮೇಟ್‌ ಕೊಟ್ಟವರು ಯಾರು? ಸೇಫ್‌ ಕ್ಷೇತ್ರ ಯಾವುದು?

Share :

06-09-2023

  ಧಾರವಾಡದಲ್ಲಿ ಪ್ರಲ್ಹಾದ್ ಜೋಶಿಯವರಿಗೆ ಸಾಲು ಸಾಲು ಕಂಟಕ

  ಜಗದೀಶ್ ಶೆಟ್ಟರ್, ವಿನಯ್ ಕುಲಕರ್ಣಿ, ಸಂತೋಷ್ ಲಾಡ್ ಸವಾಲು

  ವಲಸೆ ಹೋದರೆ ಧಾರವಾಡ BJP ಕಾರ್ಯಕರ್ತರ ಮೇಲೂ ಪರಿಣಾಮ

ಬೆಂಗಳೂರು: ಲೋಕಸಭಾ ಚುನಾವಣೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕ್ಷೇತ್ರ ಬದಲಿಸ್ತಾರಾ. ಧಾರವಾಡ ಬಿಜೆಪಿ ಸಂಸದರ ನಡೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಪ್ರಲ್ಹಾದ್ ಜೋಶಿ ಅವರು ಬೇರೆ ಕ್ಷೇತ್ರದ ಹುಡುಕಾಟದಲ್ಲಿದ್ದು, ಧಾರವಾಡದಿಂದ ವಲಸೆ ಹೋಗಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಧಾರವಾಡದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ ಮೇಲೆ ಪ್ರಲ್ಹಾದ್ ಜೋಶಿಯವರಿಗೆ ಸಾಲು ಸಾಲು ಕಂಟಕ ಎದುರಾಗಿದೆ. ಜಗದೀಶ್ ಶೆಟ್ಟರ್, ಶಾಸಕ ವಿನಯ್ ಕುಲಕರ್ಣಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸೇರಿಕೊಂಡು ಪ್ರಲ್ಹಾದ್ ಜೋಷಿಗೆ ಚೆಕ್​ಮೇಟ್ ಇಡುವ ಸಾಧ್ಯತೆ ಇದೆ. ಹೀಗಾಗಿ ಪ್ರಲ್ಹಾದ್ ಜೋಷಿಯವರು ಕ್ಷೇತ್ರ ಬಿಟ್ಟು ಸೇಫ್ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದಾಗಲೂ ಪ್ರಲ್ಹಾದ್ ಜೋಶಿ ಅವರು ಮೌನ ವಹಿಸಿದ್ದರು. ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೂ ಪ್ರಲ್ಹಾದ್ ಜೋಶಿ ಮೇಲೆ ಜಿದ್ದಿದೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜಿಲ್ಲೆಗೆ ಕಾಲಿಡದಂತೆ ನೋಡಿಕೊಂಡಿದ್ದ ಪ್ರಲ್ಹಾದ್ ಜೋಶಿ ನೋಡಿಕೊಂಡಿದ್ದರು ಅನ್ನೋ ಕೋಪವಿದೆ. ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಜೊತೆಯೂ ಜೋಶಿ ಅವರ ಸಂಬಂಧ ಅಷ್ಟಕ್ಕಷ್ಟೇ. ಈ ಮೂವರು ನಾಯಕರು ಚೆಕ್​ಮೇಟ್ ಕೊಟ್ರೆ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರೆ ಕಷ್ಟ ಕಷ್ಟ ಎನ್ನಲಾಗುತ್ತಿದೆ.

ಧಾರವಾಡ ಬದಲಿಗೆ ಉತ್ತರ ಕನ್ನಡಕ್ಕೆ ವಲಸೆ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಧಾರವಾಡದ ಬದಲಿಗೆ ಉತ್ತರ ಕನ್ನಡ ಕ್ಷೇತ್ರಕ್ಕೆ ಹೋಗುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಉತ್ತರ ಕನ್ನಡದಲ್ಲಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರು ಆರೋಗ್ಯ ಕಾರಣದಿಂದ ಇನ್​ಌಕ್ಟಿವ್ ಆಗಿದ್ದಾರೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಅನಂತ ಕುಮಾರ್ ಹೆಗಡೆ ಸ್ಪರ್ಧೆ ಅನುಮಾನವಾಗಿದೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನ ಕಣಕ್ಕಿಳಿಸಲು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕಿದ್ದಾರೆ. ಇದೇ ಉತ್ತರ ಕನ್ನಡ ಕ್ಷೇತ್ರದ ಮೇಲೆ ಇದೀಗ ಪ್ರಲ್ಹಾದ್ ಜೋಶಿಯವರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹೆಸರಲ್ಲೇನಿದೆ?; ದೇಶದ ಮರುನಾಮಕರಣದ ಕುರಿತು ಮೋಹಕ ತಾರೆ ರಮ್ಯಾ ಟ್ವೀಟ್​

ಉತ್ತರ ಕನ್ನಡಕ್ಕೆ ವಲಸೆ ಹೋಗೋ ಮನಸು ಯಾಕೆ?

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಂತೆ ಇದೆ. ಅನಂತ ಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬ್ರಾಹ್ಮಣ ಸಮುದಾಯದವರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ವಲಸೆ ಹೋಗುವುದಾದರೆ ಇದೇ ಸೇಫ್ ಆಗಿರುವ ಕ್ಷೇತ್ರ ಅಂತಾ ಜೋಶಿ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆದ್ರೆ ವಲಸೆ ಹೋದರೆ ಮತದಾರರಿಗೆ ಯಾವ ಸಂದೇಶ ಹೋಗುತ್ತೆ ಎಂಬ ಆತಂಕವೂ ಬಿಜೆಪಿ ನಾಯಕರಲ್ಲಿ ಕಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಧಾರವಾಡ ಬಿಟ್ಟು ವಲಸೆ ಹೋಗ್ತಾರಾ ಪ್ರಲ್ಹಾದ್ ಜೋಶಿ? ಚೆಕ್‌ಮೇಟ್‌ ಕೊಟ್ಟವರು ಯಾರು? ಸೇಫ್‌ ಕ್ಷೇತ್ರ ಯಾವುದು?

https://newsfirstlive.com/wp-content/uploads/2023/09/Prahlad-Joshi-1.jpg

Load More