newsfirstkannada.com

ರಾಮಲಲ್ಲಾ ಮೂರ್ತಿ ಹೊತ್ತು ತರಲಿದ್ದಾರೆ ಪ್ರಧಾನಿ ಮೋದಿ; ರಾಮಜನ್ಮಭೂಮಿ ಟ್ರಸ್ಟ್‌ನಿಂದ ಮಹತ್ವದ ನಿರ್ಧಾರ

Share :

04-11-2023

    ರಾಮಲಲ್ಲಾ ಮೂರ್ತಿಯನ್ನು ಮೋದಿ ಅವರೇ ಹೊತ್ತು ತರುವ ಸಾಧ್ಯತೆ

    ಪ್ರಧಾನಿಗೆ ವಿಶೇಷ ಗೌರವ ನೀಡಲು ರಾಮಜನ್ಮಭೂಮಿ ಟ್ರಸ್ಟ್ ನಿರ್ಧಾರ

    ತಾತ್ಕಾಲಿಕ ನೆಲೆಯಿಂದ ಗರ್ಭಗುಡಿಗೆ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ

ಅಯೋಧ್ಯೆ: ನೂರಾರು ವರ್ಷಗಳ ಬಳಿಕ ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. 2024ರ ಜನವರಿ 22ರಂದು ರಾಮಮಂದಿರದ ಉದ್ಘಾಟನೆಗೆ ದಿನಾಂಕವೂ ನಿಗದಿಯಾಗಿದೆ. ಅಂದು ಬೆಳಗ್ಗೆ 11.30ರಿಂದ 12.30ರ ಶುಭಗಳಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಐತಿಹಾಸಿಕ ಸಮಯಕ್ಕೆ ಇಡೀ ದೇಶವೇ ಕಾಯುತ್ತಿರುವಾಗ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ.

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ಪ್ರಮುಖವಾಗಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುವುದು. ಅಂದು ತಾತ್ಕಾಲಿಕ ನೆಲೆಯಿಂದ ಗರ್ಭಗುಡಿಗೆ ರಾಮಲಲ್ಲಾ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಹೊತ್ತು ತರುವ ಸಾಧ್ಯತೆ ಇದೆ. ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ರಾಮಜನ್ಮಭೂಮಿ ಟ್ರಸ್ಟ್ ವಿಶೇಷ ಗೌರವ ನೀಡಲು ಮುಂದಾಗಿದೆ ಎನ್ನಲಾಗಿದೆ.

ರಾಮಲಲ್ಲಾ ಮೂರ್ತಿಯೂ ತಾತ್ಕಾಲಿಕ ನೆಲೆಯಿಂದ ಗರ್ಭಗುಡಿಗೆ ತರಲು 500 ಮೀಟರ್ ದೂರವಿದೆ. ಈ ಅಂತರದಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾಲ್ನಡಿಗೆಯಲ್ಲಿ ಹೊತ್ತು ತರಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಟಾಪನೆಗೆ ಎರಡು ರಾಮಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ. ಇತ್ತೀಚೆಗೆ ರಾಮಲಲ್ಲಾ ಮೂರ್ತಿಯನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಮಜನ್ಮಭೂಮಿಗೆ ಸ್ಥಳಾಂತರ ಮಾಡಿದ್ದಾರೆ. ರಾಮಜನ್ಮಭೂಮಿಯ ಕಾರ್ಯ ಇನ್ನೂ ಮುಂದುವರಿದಿದ್ದು ತಾತ್ಕಾಲಿಕ ನೆಲೆಯಲ್ಲಿ ಮೂರ್ತಿಯನ್ನು ಇರಿಸಲಾಗಿದೆ.

ಮೋದಿಗಾಗಿ ಶಿಷ್ಟಾಚಾರಗಳಿಗೆ ಬ್ರೇಕ್‌!

ಶ್ರೀರಾಮಜನ್ಮಭೂಮಿಯ ಉದ್ಘಾಟನೆಯ ಸಂದರ್ಭದಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಕೆಲವೊಂದು ಶಿಷ್ಟಾಚಾರಗಳನ್ನು ಬದಲಿಸುವ ಸಾಧ್ಯತೆ ಇದೆ. ಅಂದ್ರೆ, ಪ್ರಧಾನಿ ನರೇಂದ್ರ ಮೋದಿಗಾಗಿ ಶಿಷ್ಟಾಚಾರಗಳನ್ನು ಬದಿಗಿಟ್ಟು ಕೆಲವೊಂದು ವಿನಾಯಿತಿ ನೀಡುವ ಸಾಧ್ಯತೆ ಇದೆ. ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಟಾಪನೆಗೂ ಮುನ್ನ ರಾಮಲಲ್ಲಾ ಮೂರ್ತಿಯನ್ನು ಪ್ರಧಾನಿ ಮೋದಿ ಹೊತ್ತಿಕೊಂಡು ಹೋದ್ರೆ ಇತಿಹಾಸದ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದೆ.

ಜನವರಿ 22ರಂದು ನಡೆಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಮಜನ್ಮಭೂಮಿ ಟ್ರಸ್ಟ್ ದೇಶಾದ್ಯಂತ 8000 ಗಣ್ಯರಿಗೆ ಆಹ್ವಾನ ನೀಡುತ್ತಿದೆ. 3500 ಸಾಧು, ಸಂತರು, ಧಾರ್ಮಿಕ ಮುಖಂಡರು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಲಲ್ಲಾ ಮೂರ್ತಿ ಹೊತ್ತು ತರಲಿದ್ದಾರೆ ಪ್ರಧಾನಿ ಮೋದಿ; ರಾಮಜನ್ಮಭೂಮಿ ಟ್ರಸ್ಟ್‌ನಿಂದ ಮಹತ್ವದ ನಿರ್ಧಾರ

https://newsfirstlive.com/wp-content/uploads/2023/11/Modi-Ramamandira.jpg

Load More