ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ಕಾಂಗ್ರೆಸ್ ವಾಗ್ದಾಳಿ
ವಿಶೇಷ ಅಧಿವೇಶನದ ಬಗ್ಗೆ ಚರ್ಚಿಸಲು ವಿಪಕ್ಷಗಳನ್ನು ಆಹ್ವಾನಿಸಿಲ್ಲ
ಈ ಬಾರಿ ಕಾಂಗ್ರೆಸ್ನ ನಾಯಕರು ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಾರೆ
ನವದೆಹಲಿ: ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಲು ಕಾಂಗ್ರೆಸ್ ನಾಯಕರು ಸಂಸತ್ಗೆ ಹೋಗುತ್ತಾರೆ ವಿನಹ ಮೋದಿ ಚಾಲೀಸಾ ಕೇಳಲು ಹೋಗಲ್ಲ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ನ ಜೈರಾಮ್ ರಮೇಶ್ ಅವರು, ಸೆಪ್ಟೆಂಬರ್ 18 ರಿಂದ 22ರ ವರೆಗೆ ನಡೆಯಲಿರುವ ಸಂಸತ್ನ ವಿಶೇಷ ಅಧಿವೇಶನಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುತ್ತಾರೆ. ಪ್ರತಿ ಸಂಸತ್ ಅಧಿವೇಶನದಲ್ಲೂ ದೇಶದ ಸಮಸ್ಯೆಗಳನ್ನು ಸರ್ಕಾರದ ಮುಂದೆ ಪ್ರಸ್ತಾಪ ಮಾಡುತ್ತಿದ್ದೇವೆ. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುತ್ತದೆ. ಅಲ್ಲಿ ಕುಳಿತು ಕೇವಲ ಮೋದಿ ಚಾಲೀಸಾ ಕೇಳವುದಿಲ್ಲ. ಆದ್ರೆ ಹಿಂದಿನ ಅಧಿವೇಶನದಲ್ಲಿ ಸಮಸ್ಯೆಗಳನ್ನು ಕೇಳಲು ಸರಿಯಾದ ಕಾಲಾವಕಾಶ ಸಿಗಲಿಲ್ಲ ಎಂದು ಕೇಂದ್ರ ಸರ್ಕಾರ ವಿರುದ್ಧ ದೂರಿದ್ದಾರೆ.
ಹೀಗಾಗಿ ಈ ಬಾರಿಯ ವಿಶೇಷ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಲು ಅವಕಾಶ ಸಿಗುತ್ತದೆಂದು ಭಾವಿಸುತ್ತೇನೆ. ಅಲ್ಲದೇ ಕೇಂದ್ರ ಸರ್ಕಾರ ಮುಂಬರುವ ಅಧಿವೇಶನದ ಕಾರ್ಯಸೂಚಿ ಚರ್ಚಿಸುವುದಕ್ಕಾಗಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಈ ರೀತಿ ಇದೇ ಮೊದಲ ಬಾರಿಗೆ ಆಗಿರುವುದು ಎಂದು ರಮೇಶ್ ಬೇಸರ ವ್ಯಕ್ತಪಡಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ