ಕಿಚ್ಚನ ಕೋಪ, ವರ್ತೂರು ಸಂತೋಷ್ ಕಣ್ಣೀರು ಕ್ಲೈಮ್ಯಾಕ್ಸ್ ಏನು?
ವರ್ತೂರು ಸಂತೋಷ್ ಮನವೊಲಿಸಲು ಬಿಗ್‌ಬಾಸ್ ಮನೆಯಲ್ಲಿ ಸರ್ಕಸ್
ನನ್ನ ಮೇಲಾಣೆ ಊಟ ಬೇಡ.. ನನ್ನ ಕೈಯಲ್ಲಿ ಆಗುತ್ತಿಲ್ಲ ಎಂದ ವರ್ತೂರು
ಕನ್ನಡ ಕಿರುತೆರೆಯ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಈ ವಾರ ಮತ್ತೊಂದು ಟ್ವಿಸ್ಟ್. 5ನೇ ವಾರದಲ್ಲಿ ಯಾರು ಎಲಿಮಿನೇಟ್ ಆಗ್ತಾರೆ ಅಂತಾ ಕಾಯುತ್ತಿದ್ದ ವೀಕ್ಷಕರಿಗೆ ಬಿಗ್‌ಬಾಸ್ ಶಾಕ್ ಕೊಟ್ಟಿದೆ. ವರ್ತೂರು ಸಂತೋಷ್ ನಡೆಗೆ ಗರಂ ಆಗಿರೋ ಕಿಚ್ಚ ಸುದೀಪ್ ವೇದಿಕೆ ಮೇಲಿಂದಲೇ ಕೋಪಗೊಂಡು ಹೋಗಿದ್ದಾರೆ. ಕಿಚ್ಚನ ಕೋಪ, ವರ್ತೂರು ಸಂತೋಷ್ ಕಣ್ಣೀರು ಬಿಗ್‌ಬಾಸ್ ಮನೆಯಲ್ಲಿ ಹೊಸ ಗೊಂದಲಕ್ಕೆ ಕಾರಣವಾಗಿದೆ.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದಲ್ಲಿ ಜೈಲು ಸೇರಿದ್ದ ವರ್ತೂರು ಸಂತೋಷ್ ಬಿಗ್‌ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಬಿಗ್‌ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಆಡಬಹುದು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ವರ್ತೂರು ಸಂತೋಷ್ ನಿರಾಸೆ ಮೂಡಿಸಿದ್ದಾರೆ. ನನಗೆ ಹೊರಗೆ ಆದ ಘಟನೆಯಿಂದ ಹೊರ ಬರಲು ಆಗುತ್ತಿಲ್ಲ. ನಾನು ಬಿಗ್‌ಬಾಸ್ ಮನೆಯಿಂದ ಹೊರ ಹೋಗುತ್ತೇನೆ ಎಂದು ಕಣ್ಣೀರಿಡುತ್ತಿದ್ದಾರೆ.
ಈ ವಾರ ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಟ್ ಆಗಿದ್ದ ವರ್ತೂರು ಸಂತೋಷ್ ಸೇಫ್ ಆಗಿದ್ದಾರೆ. ಇಷ್ಟಾದ್ರೂ ಹೊರ ಬರುತ್ತೇನೆ ಅನ್ನುತ್ತಿರೋದು ಕಿಚ್ಚ ಸುದೀಪ್ ಅವರ ಕೋಪಕ್ಕೆ ಕಾರಣವಾಗಿದೆ. ನಿಮಗೆ 34 ಲಕ್ಷ 15 ಸಾವಿರ 472 ಜನ ವೋಟ್ ಮಾಡಿದ್ದಾರೆ. ನೀವು ಬಿಗ್‌ಬಾಸ್ ಮನೆಯಿಂದ ಹೋಗುವ ನಿರ್ಧಾರ ಸರಿಯಲ್ಲ ಎಂದು ಕಿಚ್ಚ ಸುದೀಪ್ ವೇದಿಕೆಯಿಂದ ಹೊರಗಡೆ ಹೋಗಿದ್ದಾರೆ.
ಕಿಚ್ಚ ಸುದೀಪ್ ಕೋಪಕ್ಕೆ ತುತ್ತಾದ ಮೇಲೆ ವರ್ತೂರು ಸಂತೋಷ್ ಮನವೊಲಿಸಲು ಬಿಗ್‌ಬಾಸ್ ಮನೆಗೆ ಭಾಗ್ಯ ಅವರು ಎಂಟ್ರಿ ಕೊಟ್ಟಿದ್ದಾರೆ. ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್‌ನ ಸುಷ್ಮಾ ರಾವ್ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದು, ನಾನು ಅಕ್ಕನಾಗಿ ಹೇಳುತ್ತಾ ಇದ್ದೀನಿ. ನನಗೆ ಇಲ್ಲಿ ಆಗಲ್ಲ ಅನ್ನೋದನ್ನ ತಲೆ ಇಂದ ತೆಗೆದು ಹಾಕು ಎಂದು ಸಾಂತ್ವನ ಹೇಳಿದ್ದಾರೆ.
ಯಾರು ಎಷ್ಟೇ ಹೇಳಿದ್ರೂ ಕರಗದ ವರ್ತೂರು ಸಂತೋಷ್ ಅವರು ಒಂದೊಂದು ನಿಮಿಷನೂ ನನಗೆ ಇಲ್ಲಿ ಇರೋದು ಕಷ್ಟವಾಗ್ತಿದೆ ಎನ್ನುತ್ತಿದ್ದಾರೆ. ಇನ್ನು ಬಿಗ್‌ಬಾಸ್ ಸ್ಪರ್ಧಿ ತುಕಾಲಿ ಸುಂತು ಅವರಂತೂ ಒಬ್ಬ ಮನುಷ್ಯನ ಉಳಿಸಿಕೊಳ್ಳುತ್ತಾ ಇದ್ದೀನಿ ಅಂದ್ರೆ ನಿನ್ನಲ್ಲಿರೋ ಒಳ್ಳೆತನಕ್ಕೆ. ಅರ್ಥ ಮಾಡಿಕೋ ನಿನ್ನ ಕಾಲಿಗೆ ಬೀಳುತ್ತೀನಿ ದಮ್ಮಯ್ಯಾ ಎಂದು ಮನವಿ ಮಾಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಸದ್ಯ ವರ್ತೂರು ಸಂತೋಷ್ ಅವರ ಮನವೊಲಿಸೋದೇ ಬಿಗ್ ಟಾಸ್ಕ್ ಆಗಿದೆ. ವಿನಯ್ ನಾವೇನಾದ್ರೂ ನಿನಗೆ ಮಾಡಿದ್ವಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಡ್ರೋನ್ ಪ್ರತಾಪ್ ಮುರ್ನಾಲ್ಕು ಬಾರಿ ಊಟ ತೆಗೆದುಕೊಂಡು ಹೋದರು ಬೇಡ ಎಂದು ನಿರಾಕರಿಸಿದ್ದಾರೆ. ನನ್ನ ಮೇಲಾಣೆ ನನಗೆ ಊಟ ಬೇಡ. ನನ್ನ ಕೈಯಲ್ಲಿ ಆಗುತ್ತಿಲ್ಲ ಎಂದು ವರ್ತೂರು ಸಂತೋಷ್ ಕಣ್ಣೀರು ಹಾಕುತ್ತಿದ್ದಾರೆ.
ಬಿಗ್ ಬಾಸ್ ಮನೆಗೆ ಭಾಗ್ಯಾ ಎಂಟ್ರೀ!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada pic.twitter.com/EZBid5wMQS
— Colors Kannada (@ColorsKannada) November 13, 2023
ಊಟ, ತಿಂಡಿ ಬಿಟ್ಟು ಉಪವಾಸ ಕುಳಿತಿರುವ ವರ್ತೂರು ಸಂತೋಷ್ ಬಿಗ್‌ಬಾಸ್ ಮನೆಯಿಂದ ಹೊರ ಬರೋದಕ್ಕೆ ಒದ್ದಾಡುತ್ತಿದ್ದಾರೆ. ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ಅವರ ನಿರ್ಧಾರ ಬದಲಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಕೊನೆಗೆ ವರ್ತೂರು ಸಂತೋಷ್ ಅವರ ಎಲ್ಲರ ಮಾತಿಗೆ ಬೆಲೆ ಕೊಟ್ಟು ಇರ್ತಾರಾ ಅಥವಾ ತಮ್ಮ ನೋವಿನಿಂದಾಗಿ ಬಿಗ್‌ಬಾಸ್ ಮನೆಯಿಂದ ಹೊರ ಬಂದ್ರೂ ಅಚ್ಚರಿ ಪಡುವಂತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ