newsfirstkannada.com

2023 ವಿಂಬಲ್ಡನ್​ ಪ್ರಶಸ್ತಿಗೆ ಮುತ್ತಿಕ್ಕಿದ ಸ್ಪೆನ್​ನ ನವಯುವಕ.. ಸರ್ಬಿಯಾದ ನೋವಾಕ್ ರೇಸ್​ಗೆ ಬ್ರೇಕ್​ ಹಾಕಿದ ಕಾರ್ಲೋಸ್ ಅಲ್ಕರಾಜ್

Share :

17-07-2023

  ಹಿರಿಯ ಆಟಗಾರನಿಗೆ ಟಕ್ಕರ್​ ಕೊಟ್ಟ ಸ್ಪೇನ್​ನ ಕಾರ್ಲೋಸ್

  ವಿಶ್ವದಾಖಲೆ ಹೊಸ್ತಿಲಲ್ಲಿದ್ದ ಸರ್ಬಿಯಾದ ನೋವಾಕ್​ಗೆ ಶಾಕ್​

  ವಿಂಬಲ್ಡನ್​ಗೆ ನವಯುವಕ ಅಲ್ಕರಾಜ್​ನ ಸ್ಪರ್ಶ, ಸಂಭ್ರಮ

23 ಗ್ರ್ಯಾಂಡ್ ಸ್ಲಾಮ್ ಟ್ರೋಫಿ ವಿನ್ನರ್​ ಸರ್ಬಿಯಾದ ನೋವಾಕ್​ ಜೋಕೋವಿಚ್​ರನ್ನು ಸೋಲಿಸುವ ಮೂಲಕ ಸ್ಪೇನ್​ನ ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ ಚೊಚ್ಚಲ ವಿಂಬಲ್ಡನ್​ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇಂಗ್ಲೆಂಡ್​ನ ರಾಜಧಾನಿ ಲಂಡನ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಟೆನ್ನಿಸ್​ ದಿಗ್ಗಜ ನೋವಾಕ್​ ಜೋಕೋವಿಚ್ ವಿರುದ್ಧ ಬರೋಬ್ಬರಿ 4 ಗಂಟೆ 40 ನಿಮಿಷಗಳ ಕಾಲ ಸೆಣಸಾಟ ನಡೆಸಿದ ಅಲ್ಕರಾಜ್ 1-6, 7-6 (6), 6-1, 3-6, 6-4 ಸೆಟ್​ಗಳಿಂದ ಜಯ ಸಾಧಿಸಿದರು.

36 ವರ್ಷದ ನೋವಾಕ್​ ಜೋಕೋವಿಚ್ ಮೊದಲ ಸೆಟ್​ ಗೆದ್ದು ಉತ್ತಮ ಆರಂಭವನ್ನು ಪಡೆದುಕೊಂಡು 8ನೇ ವಿಂಬಲ್ಡನ್​ ಹಾಗೂ ವೃತ್ತಿ ಬದುಕಿನ 24ನೇ ಗ್ರ್ಯಾಂಡ್​ ಸ್ಲಾಮ್​ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ, ಇದಕ್ಕೆ 20ರ ಹರೆಯದ ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ ಬ್ರೇಕ್ ಹಾಕಿದರು. ಇದರಿಂದ ಪ್ರಶಸ್ತಿ ಗೆಲ್ಲುವ ಫೆವರಿಟ್ ಎನಿಸಿದ್ದ ಜೋಕೋವಿಚ್​ ನಿರಾಸೆ ಅನುಭವಿಸಿದರು. 3ನೇ ಸೆಟ್​ಗೆ ಬರುವಷ್ಟರಲ್ಲಿ ಕಾರ್ಲೋಸ್​ ಪಂದ್ಯವನ್ನು ತನ್ನಡೆಗೆ ಮಾಡಿಕೊಂಡಿದ್ದರು. ನಂತರ ಆಟದ 4ನೇ ಸೆಟ್​ನಲ್ಲಿ ನೋವಾಕ್​ ಜೋಕೋವಿಚ್ ಪಂದ್ಯವನ್ನು ಮುನ್ನಡೆ ಪಡೆದಿದ್ದರು. ಆದರೆ 5ನೇ ಸೆಟ್​ನಲ್ಲಿ 6-4 ಅಂಕಗಳಿಂದ ಮುನ್ನಡೆ ಪಡೆದ ಅಲ್ಕರಾಜ್ ಕೊನೆಗೆ ತಾವೇ ಸರ್ವ್​ ಮಾಡಿ ಬಾಲ್​ ಅನ್ನು ಹೊಡೆದರು. ಒಂದು ಬಾರಿ ವಾಪಸ್ ಹೊಡೆದ ಜೋಕೋವಿಚ್​ ಇನ್ನೊಂದು ಬಾರಿ ಬಾಲ್​ ಅನ್ನು ಹೊಡೆದರು. ಆದರೆ ಬಾಲ್ ನೆಟ್​ಗೆ ಟಚ್​ ಆಗಿ ಬಿದ್ದಿತು. ತಕ್ಷಣ ಅಲ್ಕರಾಜ್​ ಗೆಲುವಿನ ಸಂಭ್ರಮದಲ್ಲಿ ತೇಲಿದರು. ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್​ ಹೋ ಎಂದು ಕೂಗಿ ಹರ್ಷ ವ್ಯಕ್ತಪಡಿಸಿದರು.

ಇದರಿಂದ ಕಳೆದ 20 ವರ್ಷಗಳಿಂದ ವಿಂಬಲ್ಡನ್​ ಅನ್ನು ಯಾವ ಹೊಸ ಆಟಗಾರನು ಪ್ರಶಸ್ತಿ ಗೆದ್ದಿರಲಿಲ್ಲ. ಹಿರಿಯ ಆಟಗಾರರೇ ಇಲ್ಲಿ ಪ್ರಬಲ್ಯ ಸಾಧಿಸಿದ್ದರು. ಆದರೆ ಈ ಬಾರಿ 2023ರ ವಿಂಬಲ್ಡನ್​ಗೆ ನವಯುವಕ ಅಲ್ಕರಾಜ್​ನ ಸ್ಪರ್ಶವಾಗಿದೆ. ಇನ್ನು ಈ ಬಹುಮಾನ ಗೆದ್ದ 3ನೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಸರಿಗೆ ಅಲ್ಕರಾಜ್ ಪಾತ್ರರಾದರು. ಇನ್ನು ಪಂದ್ಯದ ಆರಂಭಕ್ಕೂ ಮೊದಲು ಅಭಿಮಾನಿಗಳು ಎಲ್ಲ ನೋವಾಕ್ ಗೆಲ್ಲುತ್ತಾರೆ ಎಂದೇ ತಿಳಿದಿದ್ದರು. ಕಳೆದ ಕೆಲ ವರ್ಷಗಳಿಂದ ನೋವಾಕ್ ಟೆನ್ನಿಸ್​ನಲ್ಲಿ ಮಹಾರಾಜ ಎನಿಸಿಕೊಂಡಿದ್ದರು. ಹೀಗಾಗಿ ಈ ಬಾರಿ ದಾಖಲೆ ಮಾಡುತ್ತಾರೆ ಎಂದು ತಿಳಿದಿದ್ದರು. ಆದರೆ ಇದಕ್ಕೆಲ್ಲ ಅಲ್ಕರಾಜ್​ ಅವರು ತಣ್ಣೀರೆರಚಿದರು. ಇದರಿಂದ ವಿಂಬಲ್ಡನ್​ ಟೆನ್ನಿಸ್​ನಲ್ಲಿ ನವಯುಗ ಆರಂಭವಾಯಿತು ಎಂದು ಹೇಳಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

2023 ವಿಂಬಲ್ಡನ್​ ಪ್ರಶಸ್ತಿಗೆ ಮುತ್ತಿಕ್ಕಿದ ಸ್ಪೆನ್​ನ ನವಯುವಕ.. ಸರ್ಬಿಯಾದ ನೋವಾಕ್ ರೇಸ್​ಗೆ ಬ್ರೇಕ್​ ಹಾಕಿದ ಕಾರ್ಲೋಸ್ ಅಲ್ಕರಾಜ್

https://newsfirstlive.com/wp-content/uploads/2023/07/Carlos_Alcaraz.jpg

Load More