IPL ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ಬಗ್ಗು ಬಡಿದ ಸಿಎಸ್ಕೆ
ಐದನೇ ಬಾರಿಗೆ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್
ಐದು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ಧೋನಿಗೆ ಶುಭಾಶಯಗಳ ಸುರಿಮಳೆ
IPL 2023 ಟ್ರೋಫಿಯನ್ನು ಸಿಎಸ್ಕೆ ಎತ್ತಿ ಹಿಡಿಯುತ್ತಿದ್ದಂತೆಯೇ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಶುಭಾಶಯ ತಿಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಬಗ್ಗು ಬಡೆಯುತ್ತಿದ್ದಂತೆಯೇ ಗಂಭೀರ್ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶುಭ ಹಾರೈಕೆಗಳು. ಒಂದು ಟ್ರೋಫಿಯನ್ನು ಗೆಲ್ಲುವುದು ಕಷ್ಟ. ಐದು ಗೆಲ್ಲುವುದು ನಂಬಲಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.
Congratulations CSK! Winning 1 title is difficult, winning 5 is unbelievable! #IPL2023
— Gautam Gambhir (@GautamGambhir) May 30, 2023
ಗಂಭೀರ್ ಎರಡು ಐಪಿಎಲ್ ಟ್ರೋಫಿ ವಿನ್ನರ್. ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡು ಎರಡು ಬಾರಿ ಐಪಿಎಲ್ ಟ್ರೋಫಿ ಹೊಡೆದಿದ್ದಾರೆ. 2012 ಮತ್ತು 2014 ರಲ್ಲಿ ಐಪಿಎಲ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟ ಕೀರ್ತಿ ಇವರಿಗೆ ಇದೆ. ಸದ್ಯ ಗಂಭೀರ್, ಎಲ್ಎಸ್ಜಿ ತಂಡದ ಮೆಂಟರ್ ಆಗಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಎಲ್ಎಸ್ಜಿಯು ಪ್ಲೇ-ಆಫ್ ಪ್ರವೇಶ ಮಾಡಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತು ಜರ್ನಿ ಮುಗಿಸಿತು.
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ 20 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಲು ಸಿಎಸ್ಕೆ ಬರ್ತಿದ್ದಂತೆ ಮಳೆರಾಯ ಅಡ್ಡಿಯಾದ. ಕೊನೆಗೆ ಡಿಎಲ್ಎಸ್ (Duckworth–Lewis–Stern method) ಪ್ರಕಾರ, ಚೆನ್ನೈಗೆ ಗೆಲ್ಲಲು 15 ಓವರ್ನಲ್ಲಿ 171 ರನ್ ಬೇಕಿತ್ತು. ಸಿಎಸ್ಕೆ ಈ ಗುರಿಯನ್ನು 15ನೇ ಓವರ್ನ ಕೊನೆಯ ಬಾಲ್ನಲ್ಲಿ ಮುಟ್ಟಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್, ಐದನೇ ಐಪಿಎಲ್ ಕಪ್ ಎತ್ತಿ ಹಿಡಿಯಿತು. ಇದುವರೆಗೆ ಮುಂಬೈ ಇಂಡಿಯನ್ಸ್ ಮಾತ್ರ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿತ್ತು. ಈ ದಾಖಲೆಯನ್ನು ಸಿಎಸ್ಕೆ ಸರಿಗಟ್ಟಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್