/newsfirstlive-kannada/media/post_attachments/wp-content/uploads/2024/11/Winter-season-In-Bangalore.jpg)
ರಾಜ್ಯಕ್ಕೆ ಈ ಬಾರಿ ಮಾಗಿ ಚಳಿ ಬೇಗನೆ ಎಂಟ್ರಿ ಕೊಟ್ಟಿದೆ. ರಾಜಧಾನಿ ಬೆಂಗಳೂರಲ್ಲಂತೂ ಹೊರಗೆ ಹೋಗುವಾಗ ಸ್ವೆಟರ್, ಕೈಗೆ ಗ್ಲೌಸ್ ಕಾಲಿಗೆ ಸಾಕ್ಸ್ ಹಾಕಿಕೊಂಡು ಹೋಗಬೇಕಾದ ಸ್ಥಿತಿ ಉಂಟಾಗಿದೆ. ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್ ಆಗಿದೆ. ಮುಂದಿನ ದಿನಗಳಲ್ಲಿ ರಾಜಧಾನಿಯಲ್ಲಿ ತಾಪಮಾನ 12 ಡಿಗ್ರಿಗೆ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಂಜೆಯಿಂದಲೇ ಚಳಿಯ ಅನುಭವ ಆಗುತ್ತಿದ್ದ, ರಾತ್ರಿ ಹೊತ್ತು ಇಬ್ಬನಿಯ ಆಟ ಜೋರಾಗಿದೆ.
ಈಗಾಗಲೆ ಚಳಿ ಹೆಚ್ಚಿದ್ದು, ಡಿಸೆಂಬರ್ ಜನವರಿಗೆ ಇದು ಇನ್ನೂ ಜಾಸ್ತಿ ಆಗಲಿದೆ. ಲಾನಿನೋ ಸ್ಥಿತಿಯಿಂದಾಗಿ ರಾಜ್ಯದಲ್ಲಿ ಈ ಬಾರಿ ಚಳಿಯ ಪ್ರಮಾಣ ತೀವ್ರವಾಗಲಿದೆ. ಫೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮುನ್ಸೂಚನೆಯನ್ನು ಲ್ಯಾನಿನೋ ಎಂದು ಕರೆಯುತ್ತಾರೆ.
ಇದನ್ನೂ ಓದಿ:ಮಂಡ್ಯದಲ್ಲಿ ಪ್ರಾಮಾಣಿಕ ಕಳ್ಳರು! ಕದ್ದ ಚಿನ್ನಾಭಾರಣ ವಾಪಸ್ ಮನೆಯಲ್ಲಿ ಇಟ್ಟು ಹೋದರು; ಕಾರಣವೇನು?
ಸಾಮಾನ್ಯವಾಗಿ ನವೆಂಬರ್​ ಡಿಸೆಂಬರ್ ತಿಂಗಳಲ್ಲಿ ಈ ಲ್ಯಾನಿನೋ ಪರಿಸ್ಥಿತಿ ಇರುತ್ತದೆ. ವಾಡಿಕೆಯಂತೆ ನವೆಂಬರ್​ಗೆ ಲ್ಯಾನಿನೋ ಸ್ಥಿತಿ ಉಂಟಾಗಿದೆ. ಅದು ಮಾತ್ರವಲ್ಲ ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತಲೂ ಅಧಿಕ ಮಳೆ ಆಗಿರುವ ಹಿನ್ನೆಲೆಯಿಂದಲೂ ಕೂಡ ಚಳಿಗಾಲ ಬೇಗ ಎಂಟ್ರಿ ಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us