/newsfirstlive-kannada/media/post_attachments/wp-content/uploads/2024/11/Winter-Session.jpg)
ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಕದನದ ಬಳಿಕ ಸಂಸತ್ತಿನ ಚಳಿಗಾಲದ ಅಧಿವೇಶನ ಇವತ್ತಿನಿಂದ ಆರಂಭವಾಗಲಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಸ ಮಸೂದೆಗಳನ್ನ ಮಂಡಿಸಲು ಸಜ್ಜಾಗಿದೆ. ಅದರಲ್ಲೂ ಅತಿಮುಖ್ಯವಾಗಿ ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ ಪ್ರಮುಖವಾಗಿದೆ. ವಿಪಕ್ಷಗಳು ಮೋದಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ.
ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಕದನಕ್ಕೆ ತೆರೆಬಿದ್ದಿದೆ. ಮರಾಠ ನೆಲದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಫಲಿತಾಂಶ ಹೊರ ಬೀಳ್ತಿದ್ದಂತೆ ಇವತ್ತಿನಿಂದ ಪಾರ್ಲಿಮೆಂಟ್ ಅಧಿವೇಶನದ ಕದನ ಶುರುವಾಗಲಿದೆ. ಮಹತ್ವದ ಮಸೂದೆಗಳನ್ನ ಮಂಡಿಸಲು ಮೋದಿ ಸರ್ಕಾರ ಸಜ್ಜಾಗಿದೆ. ಇವತ್ತಿನಿಂದ ಸದನ ಕದನ ಕೌತುಕ ಹೆಚ್ಚಾಗಲಿದೆ.
ಇವತ್ತಿನಿಂದ ‘ಸಂಸತ್’ ಚಳಿಗಾಲದ ಅಧಿವೇಶನ ಆರಂಭ
ದೇಶದಲ್ಲಿ ಚಳಿಗಾಲ ಆರಂಭವಾಗಿದೆ. ದೆಹಲಿಯಲ್ಲಿ ಚಳಿಯ ಜೊತೆ ವಾಯುಮಾಲಿನ್ಯದ ಕಾರ್ಮೋಡ ಕವಿದಿದೆ. ಇದೇ ಹೊತ್ತಲ್ಲಿಇವತ್ತಿನಿಂದ ಪಾರ್ಲಿಮೆಂಟ್‌ನಲ್ಲಿ ಅಧಿವೇಶನ ಆರಂಭವಾಗಲಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮಧ್ಯೆ ಬಿಸಿಬಿಸಿ ಚರ್ಚೆ ನಡೆಯಲಿದೆ. ಜೊತೆಗೆ ಮಹತ್ವದ ಬಿಲ್‌ಗಳನ್ನ ಮಂಡಿಸಲು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಜ್ಜಾಗಿದೆ. ಈ ಭಾರಿಯ ಅಧಿವೇಶನದಲ್ಲಿ 15 ಮಸೂದೆಗಳನ್ನ ಮಂಡಿಸಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದೆ ಅಂತ ತಿಳಿದುಬಂದಿದೆ.
ಸಂಸತ್ ಚಳಿಗಾಲದ ಅಧಿವೇಶನದಲ್ಲಿ 15 ಮಸೂದೆಗಳನ್ನ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜಂಟಿ ಪಾರ್ಲಿಮೆಂಟರಿ ಸಮಿತಿಯಿಂದ ಮಸೂದೆಗಳ ಪರಿಷ್ಕರಣೆ ಆಗಿದೆ. ಸಂಸದ ಜಗದಂಬಿಕಾ ಪಾಲ್ ಅಧ್ಯಕ್ಷತೆ ಸಮಿತಿಯಿಂದ ಮಸೂದೆಗಳ ಪರಿಷ್ಕರಣೆ ಮುಗಿದಿದೆ. ಸಂಸತ್ ಅಧಿವೇಶನದ ಮೊದಲ ವಾರದ ಕೊನೆಯ ದಿನ ಮಸೂದೆಗಳ ಮಂಡನೆಗೆ ನಿರ್ಧರಿಸಲಾಗಿದೆ.
ಇದನ್ನೂ ಓದಿ:ಸಿಎಂ ಪಟ್ಟಕ್ಕಾಗಿ ಜಟಾಪಟಿ ಶುರು; ಶಿಂಧೆಗೆ ಮತ್ತೊಮ್ಮೆ ಒಲಿಯುತ್ತಾ ಮುಖ್ಯಮಂತ್ರಿ ಪಟ್ಟ?
ಮುಖ್ಯವಾಗಿ ವಕ್ಛ್ ಕಾಯಿದೆ ತಿದ್ದುಪಡಿ ಮಸೂದೆ ಮಂಡನೆಗೂ ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಮೂಲಕ ವಕ್ಛ್ ಬೋರ್ಡ್‌ಗೆ ಇರುವ ಅಧಿಕಾರಗಳಿಗೆ ಕತ್ತರಿ ಹಾಕಲು ಮೋದಿ ಸರ್ಕಾರ ಮುಂದಾಗಿದೆ. ವಕ್ಫ್‌ನ ಪರಮಾಧಿಕಾರಕ್ಕೆ ಮಸೂದೆ ಮೂಲಕ ಬ್ರೇಕ್ ಹಾಕಲು ಸಜ್ಜಾಗಿದೆ. ಜೊತೆಗೆ ಕೋಸ್ಟಲ್ ಶಿಪ್ಪಿಂಗ್ ಬಿಲ್, ಇಂಡಿಯನ್ ಪೋರ್ಟ್ಸ್ ಬಿಲ್, ಭಾರತೀಯ ವಾಯುಯಾನ ವಿಧೇಯಕ, ದಿ ಮರ್ಚೆಂಟ್ ಶಿಪ್ಪಿಂಗ್ ಮಸೂದೆ, ದೇಶದಲ್ಲಿ ಹೊಸ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಆದ್ರೆ, ಒನ್ ನೇಷನ್, ಒನ್ ಎಲೆಕ್ಷನ್ ಮಸೂದೆ ಈ ಪಟ್ಟಿಯಲ್ಲಿ ಸೇರ್ಪಡೆ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಮಹಾಯುತಿ ಮೈತ್ರಿಯಲ್ಲಿ CM ಸ್ಥಾನಕ್ಕೆ ಪೈಪೋಟಿ; ಘೋಷಣೆಗೂ ಮೊದಲೇ ಪವಾರ್ ‘ಪವರ್’ ಪೋಸ್ಟರ್..!
ಇನ್ನೂ ವಕ್ಛ್ ಕಾಯಿದೆಯ ತಿದ್ದುಪಡಿ ಮಸೂದೆ ಪರಿಷ್ಕರಣೆಗೆ ವಿಪಕ್ಷಗಳು ಮತ್ತಷ್ಟು ಸಮಯ ಕೇಳುತ್ತಿವೆ. ಜೊತೆಗೆ ವಕ್ಫ್ ಪರಮಾಧಿಕಾರಕ್ಕೆ ಬ್ರೇಕ್ ಹಾಕಲು ಮುಂದಾಗಿರೋ ಮೋದಿ ಸರ್ಕಾರದ ನಡೆಯನ್ನ ಖಂಡಿಸುತ್ತಿವೆ. ಹೀಗಾಗಿ ವಕ್ಫ್ ಕಾಯ್ದೆ ವಿಚಾರವಾಗಿ ಸಂಸತ್ ಅಧಿವೇಶನದಲ್ಲಿ ಭಾರೀ ಜಟಾಪಟಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ವಿಪಕ್ಷಗಳ ವಿರೋಧದ ಮಧ್ಯೆಯೂ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ವಕ್ಫ್ ಕಾಯಿದೆಗೆ ತಿದ್ದುಪಡಿ ತರುವ ಬಿಲ್‌ನ ಪಾಸ್ ಮಾಡುತ್ತಾ? ವಕ್ಫ್ ಪರಮಾಧಿಕಾರಕ್ಕೆ ಬ್ರೇಕ್ ಹಾಕುತ್ತಾ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us