Advertisment

ಶಮಿ ಉತ್ತಮ ಆಟಗಾರನಂತೆ ಒಳ್ಳೆಯ ಪತಿ, ತಂದೆ ಆಗಿರಬೇಕೆಂದು ಬಯಸುತ್ತೇನೆ -ಪತ್ನಿ ಹಸೀನ್ ಜಹಾನ್

author-image
Ganesh
Updated On
ಶಮಿ ಉತ್ತಮ ಆಟಗಾರನಂತೆ ಒಳ್ಳೆಯ ಪತಿ, ತಂದೆ ಆಗಿರಬೇಕೆಂದು ಬಯಸುತ್ತೇನೆ -ಪತ್ನಿ ಹಸೀನ್ ಜಹಾನ್
Advertisment
  • ಮತ್ತೆ ಒಂದಾಗುತ್ತಾರಾ ಶಮಿ ಅಂಡ್ ಹಸೀನ್
  • 7 ವಿಕೆಟ್ ಪಡೆದಿರುವ ಬಗ್ಗೆ ಪತ್ನಿ ಹಸೀನ್ ಹೇಳಿದ್ದೇನು..?
  • ಭಾರತ ತಂಡಕ್ಕೆ ಶುಭ ಕೋರಿಸಿ ಹಸೀನ್ ಜಹಾನ್

ಕ್ರಿಕೆಟಿಗ ಮೊಹ್ಮದ್ ಶಮಿ ವಿಶ್ವಕಪ್​ನಲ್ಲಿ 23 ವಿಕೆಟ್​ಗಳನ್ನು ಕಬಳಿಸಿ ಹೆಡ್​ಲೈನ್ ಆಗ್ತಿದ್ದಾರೆ. ಇಡೀ ಕ್ರಿಕೆಟ್ ಜಗತ್ತಿಗೆ ತಮ್ಮ ತಾಖತ್ತು, ಪ್ರತಿಭೆಯ ಶಕ್ತಿ ಏನು ಅನ್ನೋದನ್ನು ಶಮಿ ತೋರಿಸಿದ್ದಾರೆ. ಶಮಿ ಅವರಿಂದ ದೂರವಾಗಿರುವ ಪತ್ನಿ ಹಸಿನ್ ಜಹಾನ್ ಪ್ರತಿಕ್ರಿಯಿಸಿ.. ಶಮಿ ಉತ್ತಮ ಆಟಗಾರನಷ್ಟೇ ಒಳ್ಳೆಯ ಪತಿ ಮತ್ತು ತಂದೆ ಆಗಿರಲಿ ಎಂದು ಬಯಸುತ್ತೇನೆ ಎಂದಿದ್ದಾರೆ.

Advertisment

ಶಮಿ ಮತ್ತು ಹಸೀನಾ ದಾಂಪತ್ಯದ ಮಧ್ಯೆ ಒಡುಕು ಮೂಡಿದ ಹಿನ್ನೆಲೆಯಲ್ಲಿ 2018ರಿಂದ ಇಬ್ಬರು ಬೇರೆ ಬೇರೆಯಾಗಿ ಬದುಕುತ್ತಿದ್ದಾರೆ. ವಿಶ್ವಕಪ್​ನಲ್ಲಿ ಶಮಿ ಅದ್ಭುತ ಪ್ರದರ್ಶನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಹಸೀನ್, ಉತ್ತಮ ಆಟಗಾರನಷ್ಟೇ ಶಮಿ ಒಳ್ಳೆಯ ವ್ಯಕ್ತಿ ಆಗಿದ್ದರೆ, ನಾವು ಉತ್ತಮ ಜೀವನ ನಡೆಸಬಹುದು.

publive-image

ಅವನು ಒಳ್ಳೆಯವನಾಗಿದ್ದರೆ ನಾನು ಮತ್ತು ನನ್ನ ಮಗಳು ಉತ್ತಮ ಜೀವನ ನಡೆಸಬಹುದಿತ್ತು. ಅವರು ಉತ್ತಮ ಪತಿ, ಉತ್ತಮ ತಂದೆ ಆಗಿದ್ದರೆ ಅವರ ಗೌರವ ಇನ್ನೂ ಹೆಚ್ಚಾಗುತ್ತಿತ್ತು. ಅವರ ಕೊಳಕು ಮನಸ್ಸು ಹಾಗೂ ದುರಾಸೆಯಿಂದಾಗಿ ತಪ್ಪು ಮಾಡಿದ್ದಾರೆ. ಪರಿಣಾಮ ನಾವು ಮೂವರು ಇದನ್ನೆಲ್ಲ ಅನುಭವಿಸಬೇಕಾಗಿದೆ. ಅವರು ಹಣದ ಮೂಲಕ ತಮ್ಮ ತಪ್ಪುಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​ನಲ್ಲಿ ಶಮಿ 7 ವಿಕೆಟ್ ತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ.. ಅವರು 7 ವಿಕೆಟ್ ಪಡೆಯೋದ್ರಲ್ಲಿ ವಿಶೇಷತೆ ಏನೂ ಕಾಣಿಸಲಿಲ್ಲ. ಸೆಮಿಫೈನಲ್​ನಲ್ಲಿ ಭಾರತಕ್ಕೆ ಒಳ್ಳೆಯದಾಗಿದೆ ಅನಿಸುತ್ತಿದೆ. ನನ್ನ ಪ್ರಾರ್ಥನೆ ಏನಂದರೆ ಭಾರತ ಫೈನಲ್​​ನಲ್ಲಿಯೂ ಗೆದ್ದು ಟ್ರೋಫಿಗೆ ಮುತ್ತಿಡಲಿ ಎಂದು ಹಾರೈಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment