ಪಾಂಡ್ಯ ಇಲ್ಲದೇ ಟೀಮ್ ಇಂಡಿಯಾಗೆ ಶರುವಾಗಿದೆ ಹಿನ್ನಡೆಯ ಆತಂಕ
ರೋಹಿತ್ ಬಳಗದಲ್ಲಿ ಗೆಲುವಿನ ಸಂಭ್ರಮ ಮಾಯ, ತಂಡದಲ್ಲಿ ಟೆನ್ಶನ್
ರವೀಂದ್ರ ಜಡೇಜಾ ಮಾತ್ರ ಏಕೈಕ ಆಲ್ರೌಂಡರ್ ಆಗಿ ತಂಡದಲ್ಲಿದ್ದಾರೆ
ತವರಿನಲ್ಲಿ ನಡೆಯುತ್ತ ಇರೋ ಪ್ರತಿಷ್ಟಿತ ಟೂರ್ನಿಯಲ್ಲಿ ಸೆಮೀಸ್ನತ್ತ ದಿಟ್ಟ ಹೆಜ್ಜೆ ಇಟ್ಟಿರೋ ಟೀಮ್ ಇಂಡಿಯಾದಲ್ಲಿ ಆತಂಕ ಮನೆ ಮಾಡಿದೆ. ಐದಕ್ಕೆ 5 ಪಂದ್ಯ ಗೆದ್ದಿದ್ರೂ, ಡ್ರೆಸ್ಸಿಂಗ್ ರೂಮ್ನಲ್ಲಿ ಆತಂಕದ ಕಾರ್ಮೋಡ ಆವರಿಸಿದೆ. ಬೆಂಗಳೂರಿನ ಎನ್ಸಿಎನಿಂದ ಹೊರಬಿದ್ದ ಆ ಒಂದು ಸುದ್ದಿ ಅಜೇಯ ರೋಹಿತ್ ಪಡೆಯ ಕಾನ್ಫಿಡೆನ್ಸ್ ಕುಸಿಯುವಂತೆ ಮಾಡಿದೆ.
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅದ್ಧೂರಿ ಆರಂಭ ಮಾಡಿದ್ದು ಆಯ್ತು. ಸೆಮೀಸ್ ಟಿಕೆಟ್ ಬಹುತೇಕ ಫಿಕ್ಸ್ ಎಂಬ ನಿರಾಳ ಭಾವ ಮೂಡಿದ್ದು ಆಯ್ತು. ಸದ್ಯ ಟೇಬಲ್ ಟಾಪರ್ ಆಗಿರೋ ಟೀಮ್ ಇಂಡಿಯಾ, ಈ ಬಾರಿ ಚಾಂಪಿಯನ್ ಪಟ್ಟಕ್ಕೇರೋದು ಕನ್ಫರ್ಮ್ ಅನ್ನೋವಷ್ಟರ ಮಟ್ಟಿಗೆ ಅಭಿಮಾನಿಗಳಲ್ಲಿ ಕಾನ್ಫಿಡೆನ್ಸ್ ಬಂದು ಬಿಟ್ಟಿದೆ.
ಗೆಲುವಿನ ಸಂಭ್ರಮದ ನಡುವೆ ಹಿನ್ನಡೆಯ ಆತಂಕ
ಟೀಮ್ ಇಂಡಿಯಾ ಗೆಲುವಿನ ಜೈತಯಾತ್ರೆಯನ್ನ ಮುಂದುವರೆಸಿದ್ರೂ, ಡ್ರೆಸ್ಸಿಂಗ್ ರೂಮ್ನ ಆತಂಕದ ಕರಿಛಾಯೆ ಆವರಿಸಿದೆ. ಫುಲ್ ಸೆಟ್ ಆಗಿದ್ದ ಟೀಮ್ ಕಾಂಬಿನೇಷನ್ ಮುಂದಿನ ದಿನಗಳಲ್ಲಿ ಹೆಚ್ಚು ಡಿಸ್ಟರ್ಬ್ ಆಗಲಿದೆ. ಇದಕ್ಕೆಲ್ಲ ಕಾರಣ ಆಲ್ರೌಂಡರ್ ಹಾರ್ದಿಕ್ ಇಂಜುರಿ.
ಆಲ್ರೌಂಡರ್ ಪಾಂಡ್ಯ ಇಂಜುರಿ ಗಂಭೀರ.!
ಬಾಂಗ್ಲಾದೇಶ ವಿರುದ್ಧದ ಲೀಗ್ ಫೈಟ್ನಲ್ಲಿ ಇಂಜುರಿಗೆ ತುತ್ತಾದ ಹಾರ್ದಿಕ್ ಪಾಂಡ್ಯ ಹೆಲ್ತ್ನ ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಹಾರ್ದಿಕ್ ಸೀರಿಯಸ್ ಲಿಗಮೆಂಟ್ ಟೇರ್ ಇಂಜುರಿಗೆ ತುತ್ತಾಗಿದ್ದಾರೆ. ಏನಿಲ್ಲ ಅಂದ್ರೂ ಹಾರ್ದಿಕ್ ಚೇತರಿಕೆಗೆ ಕನಿಷ್ಟ 1 ವಾರಕ್ಕಿಂತ ಹೆಚ್ಚು ದಿನಗಳ ಕಾಲಾವಕಾಶ ಬೇಕಂತೆ. ಇನ್ನು, ಕಂಪ್ಲೀಟ್ ಫಿಟ್ ಆಗಲು ಇನ್ನೂ ಹೆಚ್ಚಿನ ದಿನಗಳು ಬೇಕು ಅನ್ನೋ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.
ಲೀಗ್ ಪಂದ್ಯಗಳಿಂದ ಹಾರ್ದಿಕ್ ಪಾಂಡ್ಯ ಔಟ್.?
ಹಾರ್ದಿಕ್ ಪಾಂಡ್ಯ ಸದ್ಯ ಬೆಂಗಳೂರಿನ ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದಾರೆ. ಎನ್ಸಿಎನ ಸ್ಪೋರ್ಟ್ಸ್ ಸೈನ್ಸ್ ಹಾಗೂ ಮೆಡಿಸನ್ ವಿಭಾಗದ ಹೆಡ್ ನಿತಿನ್ ಪಟೇಲ್, ಹಾರ್ದಿಕ್ ಇಂಜುರಿಯನ್ನ ಮಾನಿಟರ್ ಮಾಡ್ತಿದ್ದಾರೆ. ಈಗಾಗಲೇ ಟೀಮ್ ಮ್ಯಾನೇಜ್ಮೆಂಟ್ಗೆ ನಿತಿನ್ ಪಟೇಲ್ ವರದಿ ನೀಡಿದ್ದು, ಲೀಗ್ ಪಂದ್ಯಗಳಿಗೆ 100% ಫಿಟ್ ಆಗೋದು ಅನುಮಾನ ಎಂದಿದ್ದಾರೆ.
ರಿಸ್ಕ್ ತೆಗೆದುಕೊಳ್ಳೋಕೆ ರೆಡಿಯಿಲ್ಲ ಬಿಸಿಸಿಐ.!
ಲೀಗ್ ಪಂದ್ಯಗಳಿಗೆ ಅಲಭ್ಯರಾದ್ರೂ, ನಾಕೌಟ್ ಪಂದ್ಯಗಳಲ್ಲಿ ಪಾಂಡ್ಯರನ್ನ ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ. 100% ಫಿಟ್ ಆಗಲಿಲ್ಲ ಅಂದ್ರೆ ಇಂಜೆಕ್ಷನ್ ಮೊರೆ ಹೋಗೋ ಲೆಕ್ಕಾಚಾರ ನಡೀತಿದೆ. ಆದ್ರೆ, ಬಿಸಿಸಿಐ ಮಾತ್ರ ರಿಸ್ಕ್ ತೆಗೆದುಕೊಳ್ಳಲು ಹಿಂದೇಟೆ ಹಾಕ್ತಿದೆ. ಕಂಪ್ಲೀಟ್ ಫಿಟ್ ಆಗೋವರೆಗೂ ಟೀಮ್ ಇಂಡಿಯಾಗೆ ನೋ ಎಂಟ್ರಿ ಅಂತಿದೆ ಬಿಸಿಸಿಐ.
ಮ್ಯಾನೇಜ್ಮೆಂಟ್ನಿಂದ ರಿಪ್ಲೆಸ್ಮೆಂಟ್ ಹುಡುಕಾಟ
ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿ ಬೌಲಿಂಗ್ ಮಾಡದಿದ್ರೆ ಟೀಮ್ ಇಂಡಿಯಾಗೆ ಯಾವುದೇ ಅನುಕೂಲವಿಲ್ಲ. ಹೀಗಾಗಿ ರಿಪ್ಲೇಸ್ಮೆಂಟ್ನ ಹುಡುಕಾಟ ನಡೆಯುತ್ತಿದೆ. ಏಷ್ಯಾಕಪ್ ವೇಳೆ ಇಂಜುರಿಗೆ ತುತ್ತಾಗಿ ವಿಶ್ವಕಪ್ ತಂಡದಿಂದ ಹೊರ ಬಿದ್ದಿದ್ದ ಅಕ್ಷರ್ ಪಟೇಲ್ ಸದ್ಯ ಫಿಟ್ ಆಗಿದ್ದಾರೆ. ಬಹುತೇಕ ಅಕ್ಷರ್ ಪಟೇಲ್ಗೆ ವಿಶ್ವಕಪ್ ಟೀಮ್ ಡೋರ್ ಓಪನ್ ಆಗೋ ಸಾಧ್ಯತೆಯಿದೆ.
ತಂಡಕ್ಕೆ ತೀವ್ರ ಹಿನ್ನಡೆಯಾಗುತ್ತಾ ಹಾರ್ದಿಕ್ ಅಲಭ್ಯತೆ.?
2021ರ ಟಿ20 ವಿಶ್ವಕಪ್ಗೂ ಮುನ್ನವೂ ಹಾರ್ದಿಕ್ ಪಾಂಡ್ಯ ಇಂಜುರಿಗೆ ತುತ್ತಾಗಿದ್ರು. ಆಗ 100% ಫಿಟ್ ಆಗೋಕೆ ಮುನ್ನವೇ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಪಾಂಡ್ಯ 3 ಇನ್ನಿಂಗ್ಸ್ನಿಂದ ಕೇವಲ 69 ರನ್ ಸಿಡಿಸಿದ್ರು. ಟೂರ್ನಿಯಲ್ಲಿ ಕೇವಲ 4 ಓವರ್ ಮಾತ್ರ ಬೌಲಿಂಗ್ ಮಾಡಿದ್ರು. ಆಲ್ರೌಂಡರ್ ಪಾಂಡ್ಯ ತಂಡದಲ್ಲಿ ಇದ್ದೂ ಇಲ್ಲದಂತಾಗಿದ್ದು ಟೀಮ್ ಇಂಡಿಯಾಗೆ ತೀವ್ರ ಹಿನ್ನಡೆಯನ್ನ ತಂದಿಟ್ಟಿತ್ತು. ಇದೀಗ ಮತ್ತೆ ಅಂತದ್ದೇ ಆತಂಕ ಟೀಮ್ ಇಂಡಿಯಾವನ್ನ ಕಾಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ